ವೆಂಕಟರಾಮನ್ ಅನಂತ ನಾಗೇಶ್ವರನ್ (Venkataraman Anantha Nageswaran) ಆರ್ಥಿಕ ಪಂಡಿತರು, ಕ್ರೆಡಿಟ್ ಸುಸೆ ಗ್ರೂಪ್ ಎಜಿ ಮತ್ತು ಜೂಲಿಯಸ್ ಬೇರ್ ಗ್ರೂಪ್ನಲ್ಲಿ ಅಧಿಕಾರಿ ಆಗಿದ್ದವರು, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಹಣಕಾಸು ಸಚಿವರಿಂದ ನೇಮಕಗೊಂಡಿದ್ದಾರೆ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ನಿರ್ವಹಿಸಿದ್ದ ಜವಾಬ್ದಾರಿಯನ್ನು ಈಗ ಅನಂತ ನಾಗೇಶ್ವರನ್ ಹೊತ್ತಿದ್ದಾರೆ. ಕೃಷ್ಭಮೂರ್ತಿ ಸುಬ್ರಮಣಿಯನ್ ಮೂರು ವರ್ಷಗಳ ಕಾಲ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ಬಜೆಟ್ ಕೊರತೆಯನ್ನು ಮುಚ್ಚಿಹಾಕುವ ಜೊತೆಗೆ ಬಲವಾದ ಬೆಳವಣಿಗೆಯನ್ನು ಸಾಧಿಸಲು ಕಾರ್ಯತಂತ್ರವನ್ನು ರೂಪಿಸಲು ಹೊಸ ಮುಖ್ಯ ಆರ್ಥಿಕ ಸಲಹೆಗಾರರಿಗೆ ಕೇಳಲಾಗುವುದು. ಸರ್ಕಾರಕ್ಕೆ ಮುಖ್ಯ ಆರ್ಥಿಕ ಸಲಹೆಗಾರರ ಕೆಲಸ ಏನೆಂದರೆ, ಬಜೆಟ್ಗೆ ಪೂರ್ವವಾಗಿ ಸಂಸತ್ನಲ್ಲಿ ಮಂಡಿಸುವ ಆರ್ಥಿಕತೆಯ ವಾರ್ಷಿಕ ವರದಿಯಾದ ಆರ್ಥಿಕ ಸಮೀಕ್ಷೆಯ (Economic Survey) ಪ್ರಮುಖವಾದ ಲೇಖಕರಾಗಿ, ಗಂಭೀರವಾದ ನೀತಿ ನಿರೂಪಣೆ ವಿಚಾರದಲ್ಲಿ ಹಣಕಾಸು ಸಚಿವರಿಗೆ ಸಲಹೆ ನೀಡುತ್ತಾರೆ.
1994ನೇ ಇಸವಿಯಿಂದ 2011ರ ಮಧ್ಯೆ ಸ್ವಿಟ್ಜರ್ಲೆಂಡ್ ಮತ್ತು ಸಿಂಗಾಪೂರ್ನಲ್ಲಿ ಕಿರುಆರ್ಥಿಕತೆ ಮತ್ತು ಬಂಡವಾಳ ಮಾರುಕಟ್ಟೆ ಸಂಶೋಧನೆಯ ಹಲವು ಖಾಸಗಿ ವೆಲ್ತ್ ಮ್ಯಾನೇಜ್ಮೆಂಟ್ ಕಂಪೆನಿಗಳಲ್ಲಿ ನಾಗೇಶ್ವರನ್ ಅವರು ನಾಯಕತ್ವದ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. 2018ರ ಅಕ್ಟೋಬರ್ನಿಂದ 2019ರ ಡಿಸೆಂಬರ್ರ ತನಕ ಐಎಫ್ಎಂಆರ್ ಗ್ರಾಜುಯೇಟ್ ಸ್ಕೂಲ್ ಆಫ್ ಬಿಜಿನೆಸ್ (Krea ವಿಶ್ವವಿದ್ಯಾನಿಲಯ)ನಲ್ಲಿ ಡೀನ್ ಆಗಿದ್ದರು.
ಸಾರ್ವಜನಿಕ ನೀತಿ ಸಂಶೋಧನೆ ಸ್ವತಂತ್ರ ಸಂಸ್ಥೆಯಾದ ತಕ್ಷಣಶಿಲಾ ಸಂಸ್ಥೆಯ ಸ್ಥಾಪನೆಗೆ 2001ರಲ್ಲಿ ನೆರವು ನೀಡಿದ್ದರು ನಾಗೇಶ್ವರನ್. ಆವಿಷ್ಕಾರ್ ಗ್ರೂಪ್ ಮೊದಲ ಇಂಪ್ಯಾಕ್ಟ್ ಮ್ಯಾನೇಜ್ಮೆಂಟ್ ಫಂಡ್ ಸ್ಥಾಪನೆಗೆ ಕೂಡ ಸಹಾಯ ಮಾಡಿದ್ದರು. 2019ರ ಅಕ್ಟೋಬರ್ನಲ್ಲಿ ಭಾರತದ ಪ್ರಧಾಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯಲ್ಲಿ ಅರೆಕಾಲಿಕ ಸದಸ್ಯರಾಗಿ ಎರಡು ವರ್ಷಗಳ ಅವಧಿಗೆ ನೇಮಕ ಆಗಿದ್ದರು.
ಇದನ್ನೂ ಓದಿ: Budget 2022: ಬಜೆಟ್ಗೆ ಪೂರ್ವವಾಗಿ ಜ. 31ಕ್ಕೆ ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ; ಏನಿದು ಆರ್ಥಿಕ ಸಮೀಕ್ಷೆ?