GST: ಜನವರಿಯಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹ ರೂ. 1,38,394 ಕೋಟಿ; ಕಳೆದ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚು

2022ರ ಜನವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ರೂ. 1,38,394 ಕೋಟಿ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲೇಖನದಲ್ಲಿದೆ.

GST: ಜನವರಿಯಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹ ರೂ. 1,38,394 ಕೋಟಿ; ಕಳೆದ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 31, 2022 | 11:50 PM

2022ರ ಜನವರಿಯಲ್ಲಿ ಭಾರತ ಸರ್ಕಾರವು ರೂ. 1,38,394 ಕೋಟಿ ಒಟ್ಟು ಜಿಎಸ್‌ಟಿ ಆದಾಯವನ್ನು (GST Collection) ಸಂಗ್ರಹಿಸಿದ್ದು, ಈ ಮೂಲಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ನಾಲ್ಕನೇ ಬಾರಿಗೆ ರೂ. 1.30 ಲಕ್ಷ ಕೋಟಿಯನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ಜನವರಿ 31ರ ಸೋಮವಾರದಂದು ತಿಳಿಸಿದೆ. ಕೇಂದ್ರದ ಜಿಎಸ್​ಟಿ ಸಂಗ್ರಹವು ಸೆಪ್ಟೆಂಬರ್ 2021ರಲ್ಲಿ 1.17 ಲಕ್ಷ ಕೋಟಿ ರೂಪಾಯಿ ಇತ್ತು. ಆಗ ಒಟ್ಟು ಜಿಎಸ್​ಟಿ ಆದಾಯವು 1.30 ಲಕ್ಷ ಕೋಟಿ ರೂಪಾಯಿಗಿಂತ ಕಡಿಮೆಯಿತ್ತು. ಭಾರತ ಸರ್ಕಾರವು 2021ರ ಏಪ್ರಿಲ್​ನಲ್ಲಿ ತನ್ನ ಅತ್ಯಧಿಕ ಮಾಸಿಕ ಜಿಎಸ್​ ಸಂಗ್ರಹ 1.39 ಲಕ್ಷ ಕೋಟಿ ರೂಪಾಯಿ ಮಾಡಿತ್ತು. 2022ರ ಜನವರಿ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇ 15ರಷ್ಟು ಹೆಚ್ಚಾಗಿದೆ ಮತ್ತು 2020ರ ಜನವರಿಯಲ್ಲಿನ ಜಿಎಸ್‌ಟಿ ಆದಾಯಕ್ಕಿಂತ ಶೇ 25ರಷ್ಟು ಜಾಸ್ತಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

36 ಲಕ್ಷ ತ್ರೈಮಾಸಿಕ ರಿಟರ್ನ್ಸ್ ಸೇರಿದಂತೆ ಜನವರಿ 30, 2022ರ ವರೆಗೆ ಸಲ್ಲಿಸಲಾದ ಒಟ್ಟು GSTR-3B ರಿಟರ್ನ್ಸ್‌ಗಳ ಸಂಖ್ಯೆ 1.05 ಕೋಟಿಯಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. “2022ರ ಜನವರಿಯಲ್ಲಿ 31.01.2022ರಂದು ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು GST ಆದಾಯವು 1,38,394 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ CGST 24,674 ಕೋಟಿ ರೂಪಾಯಿ, SGST 32,016 ಕೋಟಿ ರೂಪಾಯಿ, IGST 72,030 ಕೋಟಿ ರೂಪಾಯಿ (ಸರಕುಗಳ ಆಮದು ಮೇಲೆ 35,181 ಕೋಟಿ ರೂಪಾಯಿ ಒಳಗೊಂಡಂತೆ) ಮತ್ತು ಸೆಸ್ 9,674 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 517 ಕೋಟಿ ಸೇರಿದಂತೆ) ಸಂಗ್ರಹಿಸಲಾಗಿದೆ,” ಎಂದು ಸಚಿವಾಲಯ ತಿಳಿಸಿದೆ.

“ಆರ್ಥಿಕ ಚೇತರಿಕೆ, ಜಿಎಸ್​ಟಿ ವಂಚನೆ-ಕ್ರಮ. ಚಟುವಟಿಕೆಗಳು, ವಿಶೇಷವಾಗಿ ನಕಲಿ ಬಿಲ್ಲರ್‌ಗಳ ವಿರುದ್ಧ ಕ್ರಮಗಳು ಹೆಚ್ಚುವರಿಯಾಗಿ ಜಿಎಸ್‌ಟಿಗೆ ಕೊಡುಗೆ ನೀಡುತ್ತಿವೆ. ಇನ್ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ಸಮಿತಿಯು ಕೈಗೊಂಡ ವಿವಿಧ ದರಗಳ ಕ್ರಮಬದ್ಧ ಜಾರಿ ಕ್ರಮಗಳಿಂದಲೂ ಆದಾಯದಲ್ಲಿ ಸುಧಾರಣೆ ಆಗಿದೆ.” ಎಂದು ಹಣಕಾಸು ಸಚಿವಾಲಯ ತಿಳಿಸಿದೆ. “ಮುಂಬರುವ ತಿಂಗಳುಗಳಲ್ಲಿ ಆದಾಯದಲ್ಲಿನ ಸಕಾರಾತ್ಮಕ ಟ್ರೆಂಡ್ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.” ಎಂಬುದಾಗಿ ಅದು ಸೇರಿಸಿದೆ.

ಇದನ್ನೂ ಓದಿ: GST Collection: ಡಿಸೆಂಬರ್ ತಿಂಗಳಲ್ಲಿ 1.29 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್