Digital Banking Units: 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ ಉದ್ಘಾಟನೆ

| Updated By: Srinivas Mata

Updated on: May 06, 2022 | 12:04 PM

75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್​ಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ವರದಿ ಆಗಿದೆ.

Digital Banking Units: 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆಗಸ್ಟ್ 15ನೇ ತಾರೀಕಿನಂದು 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯೂನಿಟ್​ಗಳನ್ನು (DBUs) ಉದ್ಘಾಟನೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟಕಗಳು ಒಟ್ಟಾರೆಯಾಗಿ ಕಾಗದರಹಿತವಾಗಿ ಇರುತ್ತವೆ. ಮತ್ತು ಇವುಗಳನ್ನು ಡಿಜಿಟಲ್ ಆರ್ಥಿಕ ಸಾಕ್ಷರತಾ ಕೇಂದ್ರಗಳನ್ನಾಗಿ ಬಳಸಿಕೊಳ್ಳಲಾಗುವುದು. ಕೇಂದ್ರದಿಂದ 75 ಜಿಲ್ಲೆಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಮೂಲಸೌಕರ್ಯ ಒದಗಿಸಲು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್​ಗಳ ಸಿಬ್ಬಂದಿಗೆ ತರಬೇತಿ ನೀಡುವಂತೆ ಬ್ಯಾಂಕ್​ಗಳಿಗೆ ತಿಳಿಸಲಾಗಿದೆ ಎಂದು ಮೇ 6ನೇ ತಾರೀಕಿನಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಸರ್ಕಾರದಿಂದ ಗುರುತಿಸಿದ ಜಿಲ್ಲೆಗಳಲ್ಲಿ ಲೇಹ್, ಶ್ರೀನಗರ್, ಐಜ್​ವಾಲ್, ಕೋಟಾ, ನೈನಿತಾಲ್, ಲಖನೌ ಒಳಗೊಂಡಿದೆ. ಆಯ್ದ ಹಣಕಾಸು ಸಂಸ್ಥೆಗಳು ಈಗಾಗಲೇ ಕೆಲಸ ಆರಂಭಿಸಿದ್ದು, 2022ರ ಜುಲೈನಲ್ಲಿ ಕಾರ್ಯಾರಂಭ ಮಾಡಲಿದೆ.

ಡಿಜಿಟಲ್ ಬ್ಯಾಂಕಿಂಗ್ ಯೂನಿಟ್​ಗಳನ್ನು ಸ್ಥಾಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಏಪ್ರಿಲ್ 8ನೇ ತಾರೀಕಿನಂದು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಬಜೆಟ್​ನಲ್ಲಿ ಘೋಷಣೆ ಮಾಡಿದ ಬೆನ್ನಿಗೆ ತೆಗೆದುಕೊಂಡಿರುವ ತೀರ್ಮಾನ ಇದು. ಡಿಬಿಯು ಎಂಬುದು ವಿಶೇಷವಾಗಿ ರೂಪುಗೊಂಡ ಬಿಜಿನೆಸ್ ಯೂನಿಟ್/ಹಬ್. ಅಲ್ಲಿ ಕೆಲವು ಡಿಜಿಟಲ್ ಮೂಲಸೌಕರ್ಯ ಇರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುವುದಕ್ಕೆ ಬೇಕಾದಷ್ಟು ಸವಲತ್ತು ಇರುತ್ತದೆ. ಡಿಬಿಯು ಉದ್ದೇಶ ಏನೆಂದರೆ, ಡಿಜಿಟಲ್ ಹಣಕಾಸು ಸೇವೆ ವಿಸ್ತರಣೆ ಮತ್ತು ಆರ್ಥಿಕ ಒಳಗೊಳ್ಳುವಿಕೆ.

ಮಾರ್ಗದರ್ಶಿ ಸೂತ್ರದ ಪ್ರಕಾರ, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳಾಗಿದ್ದು, ಈ ಹಿಂದಿನ ಡಿಜಿಟಲ್ ಬ್ಯಾಂಕಿಂಗ್ ಅನುಭವ ಇದ್ದಲ್ಲಿ ಟಯರ್​ 1ರಿಂದ ಟಯರ್ 6 ಕೇಂದ್ರಗಳಲ್ಲಿ ಡಿಬಿಯುಗಳನ್ನು ತೆರೆಯಲು ಅನುಮತಿಸಲಾಗುತ್ತದೆ. ಪ್ರತಿ ಪ್ರಕರಣದಲ್ಲೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಬೇಕಾಗುವುದಿಲ್ಲ. ಬ್ಯಾಂಕ್​ಗಳ ಡಿಬಿಯುಗಳನ್ನು ಬ್ಯಾಂಕ್​ಗಳ ಔಟ್​ಲೆಟ್​ಗಳಂತೆ ಪರಿಗಣಿಸಲಾಗುತ್ತದೆ ಎಂದು ಆರ್​ಬಿಐ ಹೇಳಿದೆ. ಈಗಿರುವ ಬ್ಯಾಂಕಿಂಗ್ ಔಟ್​ಲೆಟ್​ಗಿಂತ ಫಾರ್ಮಾಟ್​ನಲ್ಲಿ, ರಚನೆಯಲ್ಲಿ ಪ್ರತ್ಯೇಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ಬಳಕೆದಾರರಿಗೆ ಸೂಕ್ತವಾಗಿರುತ್ತದೆ.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್

Published On - 12:03 pm, Fri, 6 May 22