ಭಾರತದ ಷೇರುಪೇಟೆಯಲ್ಲಿ ಮಾರ್ಚ್ 17ನೇ ತಾರೀಕಿನ ಗುರುವಾರದಂದು ಬಹಳ ತೀಕ್ಷ್ಣವಾಗಿ ಏರಿಕೆ ಕಂಡುಬಂತು. ಈ ಹವಾದಲ್ಲಿ ಹಿರಿಯ ಹೂಡಿಕೆದಾರ ರಾಕೇಶ್ ಜುಂಜನ್ವಾಲಾ (Rakesh Jhunjhunwala) ನಿವ್ವಳ ಮೌಲ್ಯ 861 ಕೋಟಿ ರೂಪಾಯಿ ನಿವ್ವಳ ಮೌಲ್ಯ ಹೆಚ್ಚಾಗಿದೆ. ಇದು ಜುಂಜುನ್ವಾಲಾ ಅವರ ಪೋರ್ಟ್ಫೋಲಿಯೋದಲ್ಲಿನ ಕೇವಲ ಎರಡು ಷೇರಿನಲ್ಲಿ ಆದ ಏರಿಕೆ ಪರಿಣಾಮ ಇದೆ. ಒಂದು, ಟೈನಾನ್ ಕಂಪೆನಿ ಮತ್ತು ಇನ್ನೊಂದು ಸ್ಟಾರ್ ಹೆಲ್ತ್ ಇನ್ಷೂರೆನ್ಸ್. ಗುರುವಾರದಂದು ಟೈಟನ್ ಕಂಪೆನಿ ಷೇರಿನ ಬೆಲೆ 2587.30 ರೂಪಾಯಿಯಿಂದ 2706 ರೂಪಾಯಿಗೆ ಹೆಚ್ಚಳ ಆಗಿದೆ. ಆ ಮೂಲಕ ಒಂದು ಷೇರಿಗೆ 118.70 ರೂಪಾಯಿ ಮೇಲೇರಿದೆ. ಇನ್ನು ಸ್ಟಾರ್ ಹೆಲ್ತ್ ಇನ್ಷೂರೆನ್ಸ್ 608.80 ರೂಪಾಯಿಯಿಂದ 641 ರೂಪಾಯಿಗೆ ಏರಿದೆ. ಇದರೊಂದಿಗೆ ಷೇರಿಗೆ 32.20 ರೂಪಾಯಿ ಗಳಿಕೆ ಕಂಡಿದೆ. ಈ ಎರಡೂ ಹೆಚ್ಚಳ ಕಂಡಿರುವುದು ಗುರುವಾರದ ಒಂದೇ ಸೆಷನ್ನಲ್ಲಿ.
ಟೈಟನ್ ಕಂಪೆನಿಯ ಷೇರು ಹೋಲ್ಡಿಂಗ್ ಮಾದರಿಯನ್ನು ಗಮನಿಸುವುದಾದರೆ, 2021ರ ಡಿಸೆಂಬರ್ ಕೊನೆ ಹೊತ್ತಿಗೆ ರಾಕೇಶ್ ಜುಂಜುನ್ವಾಲಾ ಮತ್ತು ಅವರ ಹೆಂಡತಿ ರೇಖಾ ಜುಂಜುನ್ವಾಲಾ ಅವರು ಈ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾರೆ. ರಾಕೇಶ್ ಜುಂಜುನ್ವಾಲಾ 3,57,10,395 ಟೈಟನ್ ಕಂಪೆನಿ ಷೇರುಗಳನ್ನು ಹೊಂದಿದ್ದರೆ, ಅದು ಕಂಪೆನಿಯ ಒಟ್ಟಾರೆ ವಿತರಣೆಯಾದ ಪೇಯ್ಡ್ ಅಪ್ ಷೇರು ಬಂಡವಾಳದ ಶೇ 4.02ರಷ್ಟಾಗುತ್ತದೆ. ಅದೇ ರೀತಿ ರೇಖಾ ಜುಂಜುನ್ವಾಲಾ 95,40,575 ಷೇರುಗಳನ್ನು ಹೊಂದಿದ್ದು, ಅದು ಒಟ್ಟಾರೆ ಬಂಡವಾಳದ ಶೇ 1.07ರಷ್ಟಾಗುತ್ತದೆ. ಈ ದಂಪತಿ ಒಟ್ಟಾರೆಯಾಗಿ 4,52,50,970 ಷೇರುಗಳು ಅಥವಾ ಶೇ 5.09ರಷ್ಟನ್ನು ಹೊಂದಿದ್ದಾರೆ.
ಈಚೆಗೆ ವಿನಿಮಯ ಕೇಂದ್ರದ ಮಾಹಿತಿಯಂತೆ, ಜುಂಜುನ್ವಾಲಾ ಅವರು ಘೋಷಣೆ ಮಾಡಿರುವ ಪ್ರಕಾರ, ಕಂಪೆನಿ 10,07,53,935 ಷೇರುಗಳನ್ನು ಹೊಂದಿದ್ದು, ಅದು ಒಟ್ಟಾರೆ ಪೇಯ್ಡ್ ಅಪ್ ಬಂಡವಾಳದ ಶೇ 17.50ರಷ್ಟಾಗುತ್ತದೆ. ಗುರುವಾರ ಒಂದೇ ದಿನ ಟೈಟನ್ ಕಂಪೆನಿ ಷೇರು 118.70 ರೂಪಾಯಿ ಹೆಚ್ಚಳ ಆಗಿದೆ. ಅಂದರೆ, 118.70X4,52,50,970 ಆಗುತ್ತದೆ. ಅಲ್ಲಿಗೆ 537 ಕೋಟಿ ರೂಪಾಯಿ ಮೊತ್ತ ಎಂದಾಯಿತು.
ಅದೇ ರೀತಿ ಜುಂಜುನ್ವಾಲಾ ಪೋರ್ಟ್ಫೋಲಿಯೋದಲ್ಲಿ 10,07,53,935 ಸ್ಟಾರ್ ಹೆಲ್ತ್ ಷೇರುಗಳಿದ್ದು, ಗುರುವಾರ ಒಂದೇ ದಿನ ಪ್ರತಿ ಷೇರಿಗೆ 32,20 ರೂಪಾಯಿ ಏರಿಕೆ ಆಗಿದೆ. ಆದ್ದರಿಂದ ರಾಕೇಶ್ ಜುಂಜುನ್ವಾಲಾರ ನಿವ್ವಳ ಮೌಲ್ಯ 32.20X10,07,53,935 ಅಂದರೆ, 324 ಕೋಟಿ ರೂಪಾಯಿ ಮೇಲೇರಿದೆ. ಅಲ್ಲಿಗೆ ರಾಕೇಶ್ ಜುಂಜುನ್ವಾಲಾ ಅವರ ಒಟ್ಟು ನಿವ್ವಳ ಮೌಲ್ಯ, 537+324 ಸೇರಿ, 861 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: Rakesh Jhunjhunwala: ದೀಪಾವಳಿ ಮುಹೂರ್ತ ಟ್ರೇಡಿಂಗ್ನಲ್ಲಿ ರಾಕೇಶ್ ಜುಂಜುನ್ವಾಲಾ 5 ಸ್ಟಾಕ್ನಿಂದ 101 ಕೋಟಿ ರೂ. ಗಳಿಕೆ