Rakesh Jhunjhunwala: ದೀಪಾವಳಿ ಮುಹೂರ್ತ ಟ್ರೇಡಿಂಗ್ನಲ್ಲಿ ರಾಕೇಶ್ ಜುಂಜುನ್‌ವಾಲಾ 5 ಸ್ಟಾಕ್ನಿಂದ 101 ಕೋಟಿ ರೂ. ಗಳಿಕೆ
ಷೇರುಪೇಟೆಯಲ್ಲಿ ದೀಪಾವಳಿ ಮುಹೂರ್ತ ವಹಿವಾಟಿನ ವೇಳೆ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರು 101 ಕೋಟಿ ರೂಪಾಯಿ ಲಾಭ ಮಾಡಿದ್ದಾರೆ. ಹೇಗೆ ಎಂಬ ವಿವರ ಇಲ್ಲಿದೆ.
ಷೇರು ಮಾರ್ಕೆಟ್ನಲ್ಲಿ “ಬಿಗ್ ಬುಲ್” ಅಂತಲೇ ಕರೆಸಿಕೊಳ್ಳುವ ರಾಕೇಶ್ ಜುಂಜುನ್‌ವಾಲಾ ಈ ವರ್ಷದ ದೀಪಾವಳಿಯ ಮುಹೂರ್ತ ವಹಿವಾಟಿನಲ್ಲಿ ತಮ್ಮ ಪೋರ್ಟ್‌ಫೋಲಿಯೋದ ಐದು ಸ್ಟಾಕ್ಗಳಿಂದ 101 ಕೋಟಿ ರೂಪಾಯಿ ಹಣ ಮಾಡಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಈ ಸೆಷನ್ನಲ್ಲಿ ಮಾರುಕಟ್ಟೆಯು ಏರಿಕೆ ಕಾಣಿತ್ತಿದ್ದಂತೆ, ರಾಕೇಶ್ ಜುಂಜುನ್‌ವಾಲಾ ಹಲವಾರು ಷೇರುಗಳಿಂದ ಬಲವಾದ ಆದಾಯ ಗಳಿಸಿದರು. ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್‌ಫೋಲಿಯೋದ ಟಾಪ್ ಗೇಯ್ನರ್‌ಗಳಲ್ಲಿ ಇಂಡಿಯನ್ ಹೋಟೆಲ್ಸ್ ಒಂದಾಗಿದ್ದು, ಒಂದು ಗಂಟೆಯ ವಹಿವಾಟಿನಲ್ಲಿ ಶೇ 6ರಷ್ಟು ಏರಿಕೆ ದಾಖಲಿಸಿತು. ಇದರ ಜತೆಗೆ, ಟಾಟಾ ಸಮೂಹದ ಟಾಟಾ ಮೋಟಾರ್ಸ್ ಈ ದೀಪಾವಳಿಯಲ್ಲಿ ಜುಂಜುನ್‌ವಾಲಾ ಪೋರ್ಟ್‌ಫೋಲಿಯೋದಲ್ಲಿ ಭರ್ಜರಿಯಾಗಿ ಮಿಂಚಿದೆ.
ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಟಾಟಾ ಮೋಟಾರ್ಸ್ ಷೇರಿನ ಬೆಲೆಯು ಶೇ 1ರಷ್ಟು ಲಾಭವನ್ನು ಸೇರಿಸಿತು. ದಿನವನ್ನು ರೂ. 490.05ಕ್ಕೆ ಕೊನೆಗೊಳಿಸಿತು. ರಾಕೇಶ್ ಜುಂಜುನ್‌ವಾಲಾ 3.67 ಕೋಟಿ ಷೇರನ್ನು ಹೊಂದಿದ್ದಾರೆ. ಈ ಪೋರ್ಟ್‌ಫೋಲಿಯೋದಲ್ಲಿ ಟಾಟಾ ಮೋಟಾರ್ಸ್ನ ಷೇರುಗಳ ಮೌಲ್ಯವು ಮುಹೂರ್ತ ವ್ಯಾಪಾರದ ಮುನ್ನ 1,783 ಕೋಟಿ ರೂಪಾಯಿ ಇತ್ತು. ವಿಶೇಷ ಸೆಷನ್ನಲ್ಲಿ ಇದು 17.82 ಕೋಟಿ ರೂಪಾಯಿ ಏರಿಕೆಯಾಗಿ, 1,800 ಕೋಟಿ ರೂಪಾಯಿ ಆಯಿತು. ಈ ವರ್ಷದಲ್ಲಿ ಇಲ್ಲಿಯವರೆಗೆ ಟಾಟಾ ಮೋಟಾರ್ಸ್ ಷೇರಿನ ಬೆಲೆ ಶೇ 162ರಷ್ಟು ಹೆಚ್ಚಳ ಆಗಿದೆ.
ರಾಕೇಶ್ ಜುಂಜುನ್‌ವಾಲಾ ಅವರು ವ್ಯಾಪಾರ ಪುನರಾರಂಭದ ಬಗ್ಗೆ ಧ್ವನಿಯಾಗಿದ್ದು, ಆತಿಥ್ಯದ ಕೆಟಗರಿ ಅಡಿಯಲ್ಲಿ ಬರುವ ಇಂಡಿಯಾ ಹೋಟೆಲ್ಸ್ ವ್ಯಾಪಾರದ ಲಾಭವನ್ನು ಪಡೆಯುತ್ತಿದೆ. ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಇಂಡಿಯನ್ ಹೋಟೆಲ್‌ನ ಷೇರಿನ ಬೆಲೆಯು ಶೇ 5.95ರಷ್ಟು ಹೆಚ್ಚಳವಾಗಿ, ಪ್ರತಿ ಷೇರಿಗೆ ರೂ. 215.45 ಕ್ಕೆ ಮುಕ್ತಾಯವಾಯಿತು. ಇಂಡಿಯನ್ ಹೋಟೆಲ್‌ನ ಮೌಲ್ಯವು ಬುಧವಾರ 507.70 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಮುಹೂರ್ತದ ಸೆಷನ್ನಲ್ಲಿ ಮೌಲ್ಯವು 31.13 ಕೋಟಿ ರೂಪಾಯಿಗಳನ್ನು ಗಳಿಸಿ, 538.84 ಕೋಟಿ ರೂಪಾಯಿಗಳಿಗೆ ತಲುಪಿದೆ.
ಇನ್ನು ಮುಹೂರ್ತದ ವಹಿವಾಟಿನ ಅವಧಿಯಲ್ಲಿ ರೇಟಿಂಗ್ ಮತ್ತು ಸಂಶೋಧನಾ ಸಂಸ್ಥೆ ಕ್ರಿಸಿಲ್‌ನ ಷೇರಿನ ಬೆಲೆಯು ಶೇ 2ರಷ್ಟು ಜಾಸ್ತಿ ಆಯಿತು. ರಾಕೇಶ್ ಜುಂಜುನ್‌ವಾಲಾ ಅವರು ಕಂಪೆನಿಯ 39.75ರಷ್ಟು ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ಅವರ ಪೋರ್ಟ್‌ಫೋಲಿಯೋದಲ್ಲಿನ ಷೇರುಗಳ ಮೌಲ್ಯವು ಸೆಷನ್ ಅಂತ್ಯಕ್ಕೆ 1,144 ಕೋಟಿ ರೂಪಾಯಿಗಳಷ್ಟಿತ್ತು. ಬುಧವಾರದಂದು 1,123 ಕೋಟಿ ರೂಪಾಯಿ ಇದ್ದದ್ದು ರೂ. 21.72 ಕೋಟಿ ಲಾಭವಾಗಿದೆ. ಅಲ್ಲದೆ, ಎಸ್ಕಾರ್ಟ್ಸ್ ಷೇರುಗಳು ಹೂಡಿಕೆದಾರರಿಗೆ 18.11 ಕೋಟಿ ರೂಪಾಯಿಯನ್ನು ಮುಹೂರ್ತದ ವಹಿವಾಟಿನಲ್ಲಿ ಗಳಿಸಿಕೊಟ್ಟಿತು. ಸ್ಟಾಕ್ ಶೇ 2ರಷ್ಟು ಗಳಿಸಿತು. ಸ್ಟಾಕ್‌ನ ಮೌಲ್ಯವು ಈ ವಾರದ ಆರಂಭದಲ್ಲಿ ರೂ. 960 ಕೋಟಿಗಳಿಂದ ರೂ. 978 ಕೋಟಿಗೆ ಏರಿತು. ಗೇಮಿಂಗ್ ಮತ್ತು ಹಾಸ್ಪಿಟಾಲಿಟಿ ಸ್ಟಾಕ್ ಡೆಲ್ಟಾ ಕಾರ್ಪೊರೇಷನ್‌ನಿಂದ ರೂ. 12.6 ಕೋಟಿ ಗಳಿಸಿದ್ದಾರೆ. ಮುಹೂರ್ತದ ವಹಿವಾಟಿನ ಅವಧಿಯಲ್ಲಿ ಷೇರುಗಳು ಶೇ 3.3ರಷ್ಟು ಜಿಗಿದವು, ಷೇರುಗಳ ಮೌಲ್ಯವು ರೂ. 550.80 ಕೋಟಿಯಿಂದ ರೂ. 563.40 ಕೋಟಿಗೆ ಏರಿತು.
ಇದನ್ನೂ ಓದಿ: Akasa Airlines: ರಾಕೇಶ್ ಜುಂಜುನ್‌ವಾಲಾ ಬೆಂಬಲಿತ ಆಕಾಶ ಏರ್ಲೈನ್ಸ್ಗೆ ಸರ್ಕಾರದ ನೋ ಅಬ್ಜೆಕ್ಷನ್