ಕೀನ್ಯಾ ಏರ್​ಪೋರ್ಟ್ ವಶಕ್ಕೆ ತೆಗೆದುಕೊಳ್ಳುವ ಅದಾನಿ ಪ್ರಯತ್ನಕ್ಕೆ ಕೀನ್ಯಾ ಕೋರ್ಟ್ ತಡೆ

Kenyan court temporarily blocks Adani takeover of Nairobi airport: ಕೀನ್ಯಾ ರಾಜಧಾನಿ ನೈರೋಬಿಯ ಅತಿದೊಡ್ಡ ಏರ್ಪೋರ್ಟ್ ಆದ ಜೋಮೋ ಕೀನ್ಯಾಟ್ಟವನ್ನು ಲೀಸ್​ಗೆ ಪಡೆಯುವ ಅದಾನಿ ಕಂಪನಿಯ ಪ್ರಯತ್ನಕ್ಕೆ ಅಲ್ಲಿನ ಕೋರ್ಟ್ ತಡೆ ನೀಡಿದೆ. ಜನರು ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗಳ ನಡುವೆ ಕೀನ್ಯಾ ನ್ಯಾಯಾಲಯ ತಾತ್ಕಾಲಿಕವಾಗಿ ತಡೆ ನೀಡಿದೆ.

ಕೀನ್ಯಾ ಏರ್​ಪೋರ್ಟ್ ವಶಕ್ಕೆ ತೆಗೆದುಕೊಳ್ಳುವ ಅದಾನಿ ಪ್ರಯತ್ನಕ್ಕೆ ಕೀನ್ಯಾ ಕೋರ್ಟ್ ತಡೆ
ಅದಾನಿ ಗ್ರೂಪ್
Follow us
|

Updated on: Sep 10, 2024 | 6:39 PM

ನೈರೋಬಿ, ಸೆಪ್ಟೆಂಬರ್ 10: ಕೀನ್ಯಾದಲ್ಲಿ ಅದಾನಿ ಕಂಪನಿ ವಿರುದ್ಧ ಪ್ರತಿಭಟನೆಗಳು ಮುಂದುವರಿಯುತ್ತಿರುವ ಹೊತ್ತಲ್ಲಿ ಭಾರತದ ಕಂಪನಿಗೆ ನ್ಯಾಯಾಲಯ ಕೂಡ ಮುಳುವಾಗಿದೆ. ಕೀನ್ಯಾ ದೇಶದ ರಾಜಧಾನಿ ನೈರೋಬಿ ನಗರದ ಜೋಮೋ ಕೀನ್ಯಾಟ್ಟ ಇಂಟರ್ನ್ಯಾಷನಲ್ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್​ನ ಸುಪರ್ದಿಗೆ ಒಪ್ಪಿಸುವ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಕೀನ್ಯಾದ ಅತಿದೊಡ್ಡ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಜೊತೆ ಅಲ್ಲಿನ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. 30 ವರ್ಷ ಕಾಲ ಲೀಸ್​ಗೆ ನೀಡುವ ಪ್ರಸ್ತಾಪ ಇದೆ. ಈ 30 ವರ್ಷದಲ್ಲಿ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್​ನ ಕಂಪನಿಯೇ ನಿರ್ವಹಣೆ ಮಾಡಲಿದೆ. ಏರ್​ಪೋರ್ಟ್ ಅಭಿವೃದ್ಧಿಪಡಿಸುವುದು ಅದರ ಜವಾಬ್ದಾರಿ, ಹಾಗೆಯೇ, ಆದಾಯದಲ್ಲಿ ಪಾಲು ಪಡೆಯಬಹುದು.

ಇದನ್ನೂ ಓದಿ: ವಿಶ್ವದ ಮೊದಲ ಬಿಲಿಯನೇರ್ ಜಾನ್ ರಾಕೆಫೆಲ್ಲರ್; ಯಾರಾಗ್ತಾರೆ ಮೊದಲ ಟ್ರಿಲಿಯನೇರ್? ಮಸ್ಕ್ vs ಅದಾನಿ

ಆದರೆ, ಅದಾನಿ ಗ್ರೂಪ್​ಗೆ ನೈರೋಬಿ ಏರ್ಪೋರ್ಟನ್ನು ಕೊಡುವ ಪ್ರಸ್ತಾಪಕ್ಕೆ ಅಲ್ಲಿನ ಜನರನ್ನು ಆಕ್ರೋಶಗೊಳಿಲಿದೆ. ಜನರ ಪ್ರತಿಭಟನೆಗಳು ಬುಗಿಲೆದ್ದಿವೆ. ಕೀನ್ಯಾ ಏವಿಯೇಶನ್ ಕಾರ್ಮಿಕರ ಒಕ್ಕೂಟವೂ ಕೂಡ ಇದನ್ನು ವಿರೋಧಿಸಿದೆ.

ಅದಾನಿಗೆ ಏರ್ಪೋರ್ಟ್ ಒಪ್ಪಿಸಲು ಯಾಕೆ ವಿರೋಧ?

ವಿದೇಶೀ ಕಂಪನಿಗೆ ಏರ್ಪೋರ್ಟ್ ನಿರ್ವಹಣೆ ಒಪ್ಪಿಸುತ್ತಿರುವುದು ಒಂದು ಕಾರಣ. ಹಾಗೆಯೇ, ವಿದೇಶೀ ಕಂಪನಿಗೆ ಏರ್ಪೋರ್ಟ್ ನಿರ್ವಹಣೆ ಸಿಕ್ಕರೆ ಸ್ಥಳೀಯರಿಗೆ ಕೆಲಸ ಸಿಗುವುದಿಲ್ಲ. ವಿದೇಶೀ ಕೆಲಸಗಾರರನ್ನು ಕರೆತರಲಾಗುತ್ತದೆ ಎನ್ನುವುದು ಎರಡನೇ ಕಾರಣ.

ಇದನ್ನೂ ಓದಿ: ವಿದೇಶಗಳಿಗೆ ಹೋಗಲಿವೆ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರುಗಳು; ಬಯೋಫುಯಲ್, ಹೈಡ್ರೋಜನ್ ಕಾರುಗಳ ತಯಾರಿಕೆಗೂ ಆಲೋಚನೆ

ಕೀನ್ಯಾ ಸರ್ಕಾರ ಹೇಳೋದೇನು?

ಏರ್ಪೋರ್ಟ್ ಅನ್ನು ಮಾರಾಟ ಮಾಡುತ್ತಿಲ್ಲ. ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆಯಲ್ಲಿ ಏರ್ಪೋರ್ಟ್ ಅನ್ನು ಅಭಿವೃದ್ಧಿಪಡಿಸಬೇಕೆಂಬುದು ಉದ್ದೇಶ. ಅದಾನಿ ಏರ್​ಪೋರ್ಟ್ ಹೋಲ್ಡಿಂಗ್ಸ್ ಕಂಪನಿ ಜೊತೆಗಿನ ಡೀಲ್ ಇನ್ನೂ ಅಂತಿಮಗೊಂಡಿಲ್ಲ ಎಂದು ಕೀನ್ಯಾ ಸರ್ಕಾರ ಹೇಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು