ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಅಬಕಾರಿ, ತೆರಿಗೆ ಇಲಾಖೆ (State Excise and Taxation Department) ಅಧಿಕಾರಿಗಳು ಅದಾನಿ ವಿಲ್ಮರ್ (Adani Wilmar) ಮತ್ತು ಅದಾನಿ ಸಮೂಹದ (Adani Group) ಇತರ ಕಂಪನಿಗಳ ಕಚೇರಿ ಹಾಗೂ ಮಳಿಗೆಗಳಿಗೆ ತೆರಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಬಕಾರಿ ಇಲಾಖೆಯ ದಕ್ಷಿಣ ವಲಯದ ತಂಡವು ಬುಧವಾರ ರಾತ್ರಿ ಕಚೇರಿಗಳು ಮತ್ತು ಗೋದಾಮುಗಳಿಗೆ ತೆರಳಿ ಕಡತಗಳನ್ನು ಪರಿಶೀಲಿಸಿದೆ. ತೆರಿಗೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದಾನಿ ವಿಲ್ಮರ್ ಗ್ರೂಪ್ ಆರೋಪವನ್ನು ಅಲ್ಲಗಳೆದಿದ್ದು, ನಿಯಮಿತ ತಪಾಸಣೆ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ಕಚೇರಿಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರಷ್ಟೇ ಎಂದು ತಿಳಿಸಿದೆ. ಅದಾನಿ ವಿಲ್ಮರ್ ಎಂಬುದು ಅದಾನಿ ಸಮೂಹ ಮತ್ತು ಸಿಂಗಾಪುರ ಮೂಲದ ವಿಲ್ಮರ್ ಗ್ರೂಪ್ ಜಂಟಿಯಾಗಿ 50:50ರ ಪಾಲುದಾರಿಕೆಯಲ್ಲಿ ನಡೆಸುತ್ತಿರುವ ಕಂಪನಿಯಾಗಿದೆ. ಅದಾನಿ ಸಮೂಹದ ಒಟ್ಟು 7 ಕಂಪನಿಗಳು ಹಿಮಾಚಲ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿವೆ. ಕಂಪನಿಗಳು ಬೃಹತ್ ಪ್ರಮಾಣದಲ್ಲಿ ದಿನಸಿ ವಸ್ತುಗಳ ಪೂರೈಕೆಯನ್ನೂ ಮಾಡುತ್ತಿವೆ. ಅದಾನಿ ಸಮೂಹವು ಡಿಸೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಶೇ 16ರರಷ್ಟು, ಅಂದರೆ 246.16 ಕೋಟಿ ರೂ. ಕ್ರೂಡೀಕೃತ ಲಾಭ ಗಳಿಸಿತ್ತು.
ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಮಾಡಿದ್ದ ಅಕ್ರಮದ ಆರೋಪದ ಪರಿಣಾಮವಾಗಿ ಅದಾನಿ ಸಮೂಹದ ಸಂಪತ್ತು ಗಣನೀಯವಾಗಿ ಕಡಿಮೆಯಾಗಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ಕಳೆದ ಎರಡು ವಾರಗಳಲ್ಲಿ ಷೇರುಪೇಟೆಯಲ್ಲಿ ಅದಾನಿ ಸಮೂಹ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಇದೀಗ ಕೆಲವು ಕಂಪನಿಗಳ ಷೇರು ಮೌಲ್ಯ ಮತ್ತೆ ಚೇತರಿಕೆ ದಾಖಲಿಸಿವೆ.
ಇದನ್ನೂ ಓದಿ: Adani Enterprises: ಅಪ್ಪರ್ ಸರ್ಕ್ಯೂಟ್ನಲ್ಲಿ ಅದಾನಿ ಎಂಟರ್ಪ್ರೈಸಸ್ ಷೇರು; ಮೌಲ್ಯದಲ್ಲಿ ಭಾರೀ ಜಿಗಿತ
ಅದಾನಿ ಸಮೂಹದ ಪ್ರಮುಖ ಕಂಪನಿ ಅದಾನಿ ಎಂಟರ್ಪ್ರೈಸಸ್ ಕಳೆದ ಕೆಲವು ದಿನಗಳ ವಹಿವಾಟಿನಲ್ಲಿ ಮತ್ತೆ ಅಪ್ಪರ್ ಸರ್ಕ್ಯೂಟ್ನಲ್ಲಿ ವಹಿವಾಟು ನಡೆಸಿವೆ. ಕಳೆದ ನಾಲ್ಕು ದಿನಗಳ ಟ್ರೇಡಿಂಗ್ನಲ್ಲಿ ಕಂಪನಿಯ ಷೇರು ಮಲ್ಟಿ ಬ್ಯಾಗರ್ ಆಗಿ ಪರಿಣಮಿಸಿದ್ದು, ಶೇ 102ರಷ್ಟು ಮೌಲ್ಯ ವೃದ್ಧಿ ದಾಖಲಿಸಿದ್ದವು. ಅದಾನಿ ಸಮೂಹದ ಕಂಪನಿಗಳ ಪೈಕಿ 9ರ ಷೇರು ಮೌಲ್ಯದಲ್ಲಿ ಬುಧವಾರ ಚೇತರಿಕೆ ಕಂಡಿತ್ತು.
ಅದಾನಿ ವಿಲ್ಮರ್ ಗ್ರೂಪ್ ಹಾಗೂ ಅದಾನಿ ಸಮೂಹದ ಇತರ ಕಂಪನಿಗಳ ಮೇಲೆ ಹಿಮಾಚಲ ಪ್ರದೇಶದ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ವರದಿಗಳನ್ನು ಕಂಪನಿ ಅಲ್ಲಗಳೆದಿದೆ. ಮಾಮೂಲಿ ತಪಾಸಣೆ ಪ್ರಕ್ರಿಯೆಯ ಭಾಗವಾಗಿ ಮಾತ್ರವೇ ಅಧಿಕಾರಿಗಳು ಕಚೇರಿಗಳಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ಕಂಪನಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
Published On - 12:03 pm, Thu, 9 February 23