ಕೇಂದ್ರ ಸರ್ಕಾರ ಖಾದ್ಯ ತೈಲಗಳ ಮೇಲಿನ ತೆರಿಗೆ ಮೊತ್ತವನ್ನು ಇಳಿಸಿದ ಬೆನ್ನಲ್ಲೇ, ಇದೀಗ ಅದಾನಿ ವಿಲ್ಮರ್ (Adani Wilmar) ಕಂಪೆನಿಯು ಅಡುಗೆ ಎಣ್ಣೆ (Edible oil price) ಮೇಲೆ ಬರೋಬ್ಬರಿ 30 ರೂ. ಕಡಿತ ಮಾಡುವುದಾಗಿ ಷೋಷಿಸಿದೆ. ಖಾದ್ಯ ತೈಲ ಬೆಲೆಯಲ್ಲಿ ಜಾಗತಿಕ ಕುಸಿತದ ನಡುವೆ, ಕಂಪನಿಯು ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಬೆಲೆಗಳನ್ನು ಕಡಿಮೆ ಮಾಡಿರುವುದು ವಿಶೇಷ. ಹೊಸ MRP (ಗರಿಷ್ಠ ಚಿಲ್ಲರೆ ಬೆಲೆ) ಯೊಂದಿಗೆ ಖಾದ್ಯ ತೈಲಗಳ ತಾಜಾ ಸ್ಟಾಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಅಹಮದಾಬಾದ್ ಮೂಲದ ಅದಾನಿ ವಿಲ್ಮರ್ ಕಂಪನಿ ತಿಳಿಸಿದೆ. ಕಂಪನಿಯು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡುತ್ತದೆ. ಈ ಕಂಪೆನಿಯು ಸುಮಾರು 20 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಹೀಗಾಗಿ ತೈಲ ಬೆಲೆ ಇಳಿಕೆಯ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಸಿಗಲಿದೆ.
ಅದಾನಿ ವಿಲ್ಮರ್ ಪ್ರಕಾರ, ಸೋಯಾಬೀನ್ ಎಣ್ಣೆಯ ಬೆಲೆಯಲ್ಲಿ ಗರಿಷ್ಠ ಕಡಿತಗೊಳಿಸಲಾಗಿದೆ. ಅದರಂತೆ ಸೋಯಾಬೀನ್ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಇಳಿಕೆಯಾಗಿದೆ. ಆದರೆ ಸಾಸಿವೆ ಎಣ್ಣೆ ಬೆಲೆಯಲ್ಲಿ ಕನಿಷ್ಠ ಕಡಿತವನ್ನು ಮಾಡಲಾಗಿದೆ. ಇದರ ಬೆಲೆ 195 ರಿಂದ 190 ರೂ.ಗೆ ಇಳಿಕೆ ಮಾಡಲಾಗಿದೆ.
ಕೇಂದ್ರ ಆಹಾರ ಸಚಿವಾಲಯದ ನಿರ್ದೇಶನದ ನಂತರ MRP ನಲ್ಲಿ ಕಡಿತ ಮಾಡಲಾಗಿದೆ. ಜಾಗತಿಕ ಖಾದ್ಯ ತೈಲ ಬೆಲೆಗಳ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಜುಲೈ 6 ರಂದು ಸಚಿವಾಲಯವು ಖಾದ್ಯ ತೈಲ ಕಂಪನಿಗಳಿಗೆ ಸೂಚಿಸಿದೆ. ಧಾರಾ ಬ್ರಾಂಡ್‌ನಲ್ಲಿ ಖಾದ್ಯ ತೈಲಗಳನ್ನು ಮಾರಾಟ ಮಾಡುವ ಪ್ರಮುಖ ಹಾಲು ಪೂರೈಕೆದಾರ ಮದರ್ ಡೈರಿ, ಸೋಯಾಬೀನ್ ಮತ್ತು ರೈಸ್ ಬ್ರಾನ್ ಎಣ್ಣೆಯನ್ನು ಪ್ರತಿ ಲೀಟರ್‌ಗೆ 14 ರೂ.ವರೆಗೆ ಕಡಿತಗೊಳಿಸಿದೆ.
ಸೋಮವಾರ ಅದಾನಿ ಗ್ರೂಪ್ ಮತ್ತು ಸಿಂಗಾಪುರದ ವಿಲ್ಮರ್ ಗ್ರೂಪ್ ನಡುವಿನ ಜಂಟಿ ಉದ್ಯಮ – ಖಾದ್ಯ ತೈಲಗಳ MRP ಯನ್ನು ಲೀಟರ್‌ಗೆ 30 ರೂಪಾಯಿಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ಹಿಂದೆ ಜೂನ್ 18 ರಂದು ಕಂಪನಿಯು ಲೀಟರ್‌ಗೆ 10 ರೂ. ಕಡಿತಗೊಳಿಸಿತ್ತು. ಇದೀಗ ಮತ್ತೆ 30 ರೂ. ಕಡಿಮೆ ಮಾಡಿದ್ದು, ಹೊಸ ಎಂಆರ್‌ಪಿಯೊಂದಿಗೆ ತಾಜಾ ಸ್ಟಾಕ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.
ಹೊಸ ದರಗಳು ಹೀಗಿರಲಿದೆ:
Published On - 10:33 am, Tue, 19 July 22