EaseMyTrip: ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರ ಹಿತಾಸಕ್ತಿ ಮುಖ್ಯ; ಮಾಲ್ಡೀವ್ಸ್ ಅಲ್ಲ, ಲಕ್ಷದ್ವೀಪ, ಅಯೋಧ್ಯೆ ಪ್ಯಾಕೇಜ್ ಕೊಡ್ತೀವಿ: ಈಸ್ ಮೈ ಟ್ರಿಪ್

|

Updated on: Jan 08, 2024 | 3:39 PM

Ease My Trip to Bring Crazy Package for Lakshadweep Tour: ಈಸ್ ಮೈ ಟ್ರಿಪ್ ಸಂಸ್ಥೆ ಮಾಲ್ಡೀವ್ಸ್ ಪ್ರವಾಸಕ್ಕೆ ಬುಕಿಂಗ್ ಸ್ವೀಕರಿಸುವುದನ್ನು ನಿಲ್ಲಿಸಿದೆ. ಮಾಲ್ಡೀವ್ಸ್​ಗೆ ಫ್ಲೈಟ್ ಟಿಕೆಟ್ ಬುಕಿಂಗ್ ನಿಲ್ಲಿಸಿದೆ. ಮಾಲ್ಡೀವ್ಸ್​ನ ಸಚಿವರು, ಸಂಸದರು ಹಾಗು ಇತರರು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಬಗ್ಗೆ ಕುಚೋದ್ಯ ಮಾಡಿದ್ದರ ಪರಿಣಾಮ ಇದು. ಮಾಲ್ಡೀವ್ಸ್​ನಷ್ಟೇ ಸುಂದರವಾಗಿರುವ ಲಕ್ಷದ್ವೀಪ ಪ್ರವಾಸಕ್ಕೆ ಶೀಘ್ರದಲ್ಲೇ ಆಕರ್ಷಕ ಪ್ಯಾಕೇಜ್ ತರುವುದಾಗಿ ಈಸ್ ಮೈ ಟ್ರಿಪ್ ಹೇಳಿದೆ.

EaseMyTrip: ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರ ಹಿತಾಸಕ್ತಿ ಮುಖ್ಯ; ಮಾಲ್ಡೀವ್ಸ್ ಅಲ್ಲ, ಲಕ್ಷದ್ವೀಪ, ಅಯೋಧ್ಯೆ ಪ್ಯಾಕೇಜ್ ಕೊಡ್ತೀವಿ: ಈಸ್ ಮೈ ಟ್ರಿಪ್
ಪ್ರಶಾಂತ್ ಪಿಟ್ಟಿ
Follow us on

ಬೆಂಗಳೂರು, ಜನವರಿ 8: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಲ್ಡೀವ್ಸ್ ಸಚಿವರು ಲೇವಡಿ ಮಾಡಿದ ಪ್ರಕರಣದ ಬಳಿಕ ಬಹಳಷ್ಟು ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿದ್ದು ವರದಿಯಾಗಿತ್ತು. ಅದರ ಬೆನ್ನಲ್ಲೇ ಪ್ರವಾಸ ಸೇವೆ (tour service) ಒದಗಿಸುವ ಈಸ್ ಮೈ ಟ್ರಿಪ್ ಸಂಸ್ಥೆ (EaseMyTrip) ಮಾಲ್ಡೀವ್ಸ್ ಪ್ರವಾಸಕ್ಕೆ ಬುಕಿಂಗ್ಸ್ ನಿಲ್ಲಿಸಿದೆ. ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂಬುದು ಈಸ್ ಮೈ ಟ್ರಿಪ್ ಅನಿಸಿಕೆ.

‘ಮಾಲ್ಡೀವ್ಸ್ ದೇಶಕ್ಕೆ ಭಾರತದಿಂದ ಪ್ರತೀ ವರ್ಷ 2.9 ಲಕ್ಷ ಜನರು ಭೇಟಿ ನೀಡುತ್ತಾರೆ. ನಮ್ಮ ವತಿಯಿಂದ ಅವರಿಗೆ ಈ ಸೇವೆ ನಿಲ್ಲಿಸಲು ನಿರ್ಧರಿಸಿದ್ದೇವೆ. ವೈಯಕ್ತಿಕ ಹಿತಾಸಕ್ತಿಗಿಂತ ರಾಷ್ಟ್ರೀಯತೆ ಮುಖ್ಯ’ ಎಂದು ಈಸ್ ಮೈ ಟ್ರಿಪ್​ನ ಸಹ-ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತೀಯರ ಕೋಪ ನ್ಯಾಯಯುತವಾಗಿದೆ: ಮಾಲ್ಡೀವ್ಸ್​ ಸಂಸದೆ ಇವಾ ಅಬ್ದುಲ್ಲಾ

‘ನಮ್ಮ ಕಂಪನಿ ಸಂಪೂರ್ಣವಾಗಿ ದೇಶೀಯವಾಗಿ ಬೆಳೆದಿದೆ. ಭಾರತದಲ್ಲೇ ನಿರ್ಮಿತವಾದ ಸಂಸ್ಥೆ ನಮ್ಮದು. ಲಕ್ಷದ್ವೀಪ್​ಗೆ ಪಿಎಂ ಮೋದಿ ಮಾಡಿದ ಭೇಟಿ ಬಗ್ಗೆ ಮಾಲ್ಡೀವ್ಸ್ ಸಂಸದರು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ನಾವು ಮಾಲ್ಡೀವ್ಸ್​ಗೆ ಬುಕಿಂಗ್ಸ್ ಸ್ವೀಕರಿಸಬಾರದು ಎಂದು ನಿರ್ಧರಿಸಿದ್ದೇವೆ. ಅಯೋಧ್ಯೆ ಮತ್ತು ಲಕ್ಷದ್ವೀಪವು ಅಂತಾರಾಷ್ಟ್ರೀಯ ತಾಣಗಳಾಗಬೇಕೆಂದು ಬಯಸುತ್ತೇವೆ,’ ಎಂದು ಪ್ರಶಾಂತ್ ಪಿಟ್ಟಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾಗೆಯೇ, ಲಕ್ಷದ್ವೀಪ ಪ್ರವಾಸಕ್ಕೆ ಆಕರ್ಷಕ ಪ್ಯಾಕೇಜ್​ಗಳನ್ನು ಸದ್ಯದಲ್ಲೇ ಆಫರ್ ಮಾಡುವುದಾಗಿ ಅವರು ಹೇಳಿದ್ದಾರೆ.

‘ಲಕ್ಷದ್ವೀಪ್​ನಲ್ಲಿರುವ ನೀರು ಮತ್ತು ಬೀಚುಗಳು ಮಾಲ್ಡೀವ್ಸ್, ಸೇಶೆಲೆಸ್​ಗಳಲ್ಲಿರುವಷ್ಟೇ ಚೆನ್ನಾಗಿವೆ. ನರೇಂದ್ರ ಮೋದಿ ಇತ್ತೀಚೆಗೆ ಭೇಟಿ ನೀಡಿದೀ ತಾಣವನ್ನು ಪ್ರಚುರಪಡಿಸಲು ನಾವು ಭರ್ಜರಿ ಸ್ಪೆಷಲ್ ಆಫರ್​ಗಳನ್ನು ತರುತ್ತೇವೆ,’ ಎಂದು ಈಸ್ ಮೈ ಟ್ರಿಪ್ ಸಹ-ಸಂಸ್ಥಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಲೇವಡಿ, ಮಾಲ್ಡೀವ್ಸ್​ಗೆ ತೆರಳುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ EaseMyTrip

ಈಸ್ ಮೈ ಟ್ರಿಪ್ ಸಿಇಒ ನಿಶಾಂತ್ ಪಿಟ್ಟಿ ಕೂಡ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ತಮ್ಮ ಸಂಸ್ಥೆ ಮಾಲ್ಡೀವ್ಸ್ ಫ್ಲೈಟ್ ಬುಕಿಂಗ್​ಗಳನ್ನು ರದ್ದುಗೊಳಿಸಿರುವ ಸಂಗತಿಯನ್ನು ಪ್ರಕಟಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ