Maldives: ಭಾರತದಲ್ಲಿ ಟ್ರೆಂಡ್ ಆಗುತ್ತಿದೆ #UninstallMakeMyTrip; ಯಾಕೆ ಮೇಕ್ ಮೈ ಟ್ರಿಪ್ ಮೇಲೆ ಆಕ್ರೋಶ?
#UninstallMakeMyTrip: ದೇಶದ ನಂಬರ್ ಒನ್ ಟ್ರಾವೆಲ್ ಬುಕಿಂಗ್ ಕಂಪನಿ ಮೇಕ್ ಮೈ ಟ್ರಿಪ್ ಅನ್ನು ಅನ್ ಇನ್ಸ್ಟಾಲ್ ಮಾಡುವ ಅಭಿಯಾನ ನಡೆದಿದೆ. ಮೇಕ್ ಮೈ ಟ್ರಿಪ್ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ ರದ್ದು ಮಾಡದೇ ಇರುವುದು ಮತ್ತು ಅದರ ಚೀನೀ ನಂಟು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸವನ್ನು ಅಣಕಿಸಿದ ಮಾಲ್ಡೀವ್ಸ್ ಜನಪ್ರತಿನಿಧಿಗಳು ಅಣಕವಾಡಿದ್ದು ಭಾರತೀಯರನ್ನು ರೊಚ್ಚಿಗೆಬ್ಬಿಸಿದೆ.
ಬೆಂಗಳೂರು, ಜನವರಿ 8: ಲಕ್ಷದ್ವೀಪ ವಿಚಾರದಲ್ಲಿ ಮೇಕ್ ಮೈ ಟ್ರಿಪ್ ವಿರುದ್ಧ ಆನ್ಲೈನ್ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೇಕ್ ಮೈ ಟ್ರಿಪ್ ಆ್ಯಪ್ ಅನ್ಇನ್ಸ್ಟಾಲ್ ಮಾಡುವ ಅಭಿಯಾನ ಟ್ರೆಂಡಿಂಗ್ (#UninstallMakeMyTrip) ಆಗುತ್ತಿದೆ. ಲಕ್ಷದ್ವೀಪ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಬಳಿಕ ಮೇಕ್ ಮೈ ಟ್ರಿಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಲಕ್ಷದ್ವೀಪ್ ಬಗ್ಗೆ ಜನರ ಶೋಧಗಳು ಹೆಚ್ಚಿದ್ದು, ಭಾರತದ ಬೀಚ್ಗಳ ಬಗ್ಗೆ ಅಭಿಯಾನ ನಡೆಸುತ್ತಿರುವುದಾಗಿ ಹೇಳಿತ್ತು. ಆದರೂ ಕೂಡ ಮೇಕ್ ಮೈ ಟ್ರಿಪ್ (Make My Trip) ವಿರುದ್ಧ ನೆಟ್ಟಿಗರು ಮುನಿಸಿಕೊಂಡಿದ್ದಾರೆ.
ಮೇಕ್ ಮೈ ಟ್ರಿಪ್ಗೆ ಚೀನಾ ನಂಟು?
ಮೇಕ್ ಮೈ ಟ್ರಿಪ್ ಸಂಸ್ಥೆ ಮಾಲ್ಡೀವ್ಸ್ ಪ್ರವಾಸಕ್ಕೆ ಬುಕಿಂಗ್ ಸ್ವೀಕರಿಸುವುದನ್ನು ನಿಲ್ಲಿಸಿಲ್ಲ ಎಂಬುದು ಬಹಳ ಮಂದಿಯ ಆಕ್ಷೇಪ. ಹಾಗೆಯೇ, ಮೇಕ್ ಮೈ ಟ್ರಿಪ್ ಚೀನೀ ಬೆಂಬಲಿತ ಕಂಪನಿ. ಸಿಟಿ ಟ್ರಿಪ್ ಎಂಬ ಚೀನೀ ಕಂಪನಿಯು ಮೇಕ್ ಮೈ ಟ್ರಿಪ್ನ ಪ್ರಮುಖ ಷೇರುದಾರ ಸಂಸ್ಥೆಯಾಗಿದೆ. ಅಂತೆಯೇ ಇದು ಚೀನೀ ಬೆಂಬಲಿತ ಕಂಪನಿ ಎಂದು ಪರಿಗಣಿಸಲಾಗಿದೆ. ಇದು ನೆಟ್ಟಿಗರ ಮುನಿಸಿಗೆ ಕಾರಣವಾಗಿದೆ.
ಇದನ್ನೂ ಓದಿ: Lakshadweep search: ಮೇಕ್ ಮೈ ಟ್ರಿಪ್ನಿಂದ ಬೀಚಸ್ ಆಫ್ ಇಂಡಿಯಾ ಅಭಿಯಾನ; ಮೋದಿಯ ಲಕ್ಷದ್ವೀಪ ಭೇಟಿ ಪರಿಣಾಮ
ಮೇಕ್ ಮೈ ಟ್ರಿಪ್ನ ಬೋರ್ಡ್ ಆಫ್ ಡೈರೆಕ್ಟರ್ನಲ್ಲಿ ಇಬ್ಬರು ಚೀನೀಯರಿದ್ದಾರೆ. ಶಿಯಾಂಗ್ರೋಂಗ್ ಲಿ ಮತ್ತು ಸಿಂಡಿ ಶಿಯೋಫಾನ್ ವ್ಯಾಂಗ್ ಅವರು ಕಂಪನಿಯ ನಿರ್ದೇಶಕಿಯರಾಗಿದ್ದಾರೆ.
I can see many travel companies/platforms taking pro India stand & suspending their business to anti India countries but no such action from @makemytrip yet.
Is it because it’s being managed by Chinese? #UninstallMakeMyTrip pic.twitter.com/gfol9qmESs
— Mr Sinha (@MrSinha_) January 8, 2024
ಬಹಳಷ್ಟು ಟ್ರಾವಲ್ ಕಂಪನಿಗಳು ಭಾರತದ ಪರ ನಿಲುವು ತೆಗೆದುಕೊಂಡಿವೆ. ಭಾರತ ವಿರೋಧಿ ದೇಶಗಳ ಜೊತೆ ವ್ಯವಹಾರ ನಿಲ್ಲಿಸಿರುವುದುಂಟು. ಆದರೆ, ಮೇಕ್ ಮೈ ಟ್ರಿಪ್ನಿಂದ ಇಂತಹ ಯಾವುದೇ ಕ್ರಮ ಬಂದಿಲ್ಲ ಎಂದು ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು ಅದು ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
ಇದಕ್ಕೂ ಮುನ್ನ ಮತ್ತೊಂದು ಟ್ರಾವೆಲ್ ಬುಕಿಂಗ್ ಪ್ಲಾಟ್ಫಾರ್ಮ್ ಈಸ್ ಮೈ ಟ್ರಿಪ್ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ ನಿಲ್ಲಿಸಲು ಹೆಚ್ಚು ತಡ ಮಾಡಲಿಲ್ಲ. ಇದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ತಾನು ಇನ್ಮುಂದೆ ಈಸ್ ಮೈ ಟ್ರಿಪ್ ಆ್ಯಪ್ ಮೂಲಕ ಪ್ರವಾಸ ಬುಕ್ ಮಾಡುವುದಾಗಿ ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿರುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ