Tax Saving Investments: ತೆರಿಗೆ ಉಳಿಸುವಂತಹ ಹೂಡಿಕೆಗಳಲ್ಲಿ ಹಣ ತೊಡಗಿಸಬೇಕಾ? ನಿಮ್ಮ ಮುಂದಿರುವ ಆಯ್ಕೆಗಳಿವು…
Income Tax Saving: ಹಳೆಯ ಆದಾಯ ತೆರಿಗೆ ಪದ್ಧತಿ ಪ್ರಕಾರ ನೀವು ಐಟಿಆರ್ ಫೈಲಿಂಗ್ ಮಾಡುತ್ತಿದ್ದರೆ ಟ್ಯಾಕ್ಸ್ ಡಿಡಕ್ಷನ್ ಸಾಧ್ಯವಾಗಿಸಲು ಹಲವು ಆಯ್ಕೆಗಳಿವೆ. ಸ್ಟ್ಯಾಂಡರ್ಡ್ ಡಿಡಕ್ಷನ್, ಹೂಡಿಕೆಗಳು, ಮೆಡಿಕಲ್ ಇನ್ಷೂರೆನ್ಸ್, ಎನ್ಪಿಎಸ್ ಮತ್ತು ಗೃಹಸಾಲದ ಬಡ್ಡಿ ಇಷ್ಟೂ ಸೇರಿ ವರ್ಷಕ್ಕೆ ಒಟ್ಟು 4.75 ಲಕ್ಷ ರೂವರೆಗಿನ ಮೊತ್ತಕ್ಕೆ ಟ್ಯಾಕ್ಸ್ ಉಳಿಸಬಹುದು.
ಹೊಸ ಹಣಕಾಸು ವರ್ಷ ಆರಂಭವಾಗಲು ಮೂರು ತಿಂಗಳೂ ಇಲ್ಲ. ಅಷ್ಟರೊಳಗೆ ನಿಮ್ಮ ಹೂಡಿಕೆಗಳನ್ನು ನೀವು ಕೆಲಸ ಮಾಡುವ ಸಂಸ್ಥೆಗಳ ಎಚ್ಆರ್ ಗಮನಕ್ಕೆ ತರಬೇಕು. ಇದು ತೆರಿಗೆ ಕಡಿತ ತಪ್ಪಿಸಲು ಸಹಾಯವಾಗುತ್ತದೆ. ಆದರೆ ಹಳೆಯ ಆದಾಯ ತೆರಿಗೆ ಪದ್ಧತಿಯಲ್ಲಿಯೇ ನೀವು ಮುಂದುವರಿಯುತ್ತಿದ್ದರೆ ಇದು ಅನುಕೂಲ. ಹೊಸ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ಗೆ ಅವಕಾಶ ಇರುವುದಿಲ್ಲ. ನೀವು ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮೆಯಲ್ಲಿ (old income tax regime) ಇದ್ದರೆ ನಿಮ್ಮ ಮುಂದೆ ತೆರಿಗೆ ಉಳಿಸುವಂತಹ ಹಲವು ಹೂಡಿಕೆಗಳ ಆಯ್ಕೆಗಳಿರುತ್ತವೆ.
ಆದಾಯ ತೆರಿಗೆಯಲ್ಲಿ ಎಷ್ಟು ಡಿಡಕ್ಷನ್ ಕ್ಲೈಮ್ ಮಾಡಬಹುದು?
ಹಳೆಯ ತೆರಿಗೆ ಪದ್ಧತಿಯಲ್ಲಿ ನಿಮ್ಮ ಒಟ್ಟು ವರಮಾನದಲ್ಲಿ 4.75 ಲಕ್ಷ ರೂವರೆಗೂ ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಅವಕಾಶ ಇರುತ್ತದೆ. ಯಾವ್ಯಾವ ಡಿಡಕ್ಷನ್ ಎಷ್ಟು ಎಂಬ ವಿವರ ಇಲ್ಲಿದೆ:
- ಸ್ಟ್ಯಾಂಡರ್ಡ್ ಡಿಡಕ್ಷನ್: 50,000 ರೂ
- ಸೆಕ್ಷನ್ 89 ಸಿ ಅಡಿಯಲ್ಲಿ ಹೂಡಿಕೆಗಳು: 1,50,000 ರೂ
- ಮೆಡಿಕಲ್ ಇನ್ಷೂರೆನ್ಸ್ ಪ್ರೀಮಿಯಮ್: 25,000 ರೂ
- ಎನ್ಪಿಎಸ್: 50,000 ರೂ
- ಗೃಹ ಸಾಲಕ್ಕೆ ಬಡ್ಡಿದರ: 2,00,000 ರೂ
ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?
ವರ್ಷಕ್ಕೆ ಒಟ್ಟು 4.75 ಲಕ್ಷ ರೂವರೆಗಿನ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಲು ಸಾಧ್ಯ. ತೆರಿಗೆ ಉಳಿಸುವ ಹೂಡಿಕೆಗಳಿಂದ ವರ್ಷಕ್ಕೆ 1.5 ಲಕ್ಷ ರೂ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
ತೆರಿಗೆ ಉಳಿಸುವ ಹೂಡಿಕೆಗಳ್ಯಾವುವು?
ಲೈಫ್ ಇನ್ಷೂರೆನ್ಸ್: ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಜೀವ ವಿಮೆ ಕವರೇಜ್ ಪಡೆಯುವುದು ಬಹಳ ಅಗತ್ಯ. ಇದು ಇಡೀ ಕುಟುಂಬಕ್ಕೆ ಅನಿರೀಕ್ಷಿತ ರಕ್ಷಾ ಕವಚ ಆಗುವುದರ ಜೊತೆಗೆ ತೆರಿಗೆ ಉಳಿಸಲು ಸಾಧ್ಯ.
ಮೆಡಿಕಲ್ ಇನ್ಷೂರೆನ್ಸ್: ಇದೂ ಕೂಡ ಬಹಳ ಮುಖ್ಯ. ಅನಿರೀಕ್ಷಿತ ಆರೋಗ್ಯ ತೊಂದರೆಯಿಂದ ನಿಮಗೆ ವೆಚ್ಚವಾಗುವುದನ್ನು ತಪ್ಪಿಸುತ್ತದೆ. ವರ್ಷಕ್ಕೆ 25,000 ರೂವರೆಗಿನ ಮೊತ್ತಕ್ಕೆ ತೆರಿಗೆ ವಿನಾಯಿತಿ ಒದಗಿಸುತ್ತದೆ.
ಇಎಲ್ಎಸ್ಎಸ್ ಸ್ಕೀಮ್: ಇದು ಈಕ್ವಿಟಿ ಮಾರುಕಟ್ಟೆಗಳಲ್ಲಿ ಜೋಡಿತವಾದ ಕೆಲ ಮ್ಯುಚುವಲ್ ಫಂಡ್ಗಳು ಟ್ಯಾಕ್ಸ್ ಸೇವಿಂಗ್ ಆಫರ್ ಕೊಡುತ್ತವೆ. ಇವು ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಎನಿಸುತ್ತವೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ಪಡೆಯಬಹುದು. ಈಕ್ವಿಟಿಗಳಲ್ಲಿ ಇವುಗಳ ಹೂಡಿಕೆ ಇರುವುದರಿಂದ ಹೆಚ್ಚಿನ ರಿಟರ್ನ್ ಕೂಡ ನಿರೀಕ್ಷಿಸಬಹುದು.
ನಿಶ್ಚಿತ ಬಡ್ಡಿದರದ ಪ್ಲಾನ್ಗಳು: ತೆರಿಗೆ ಉಳಿಸುವ ಎಫ್ಡಿಗಳು, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪ್ಲಾನ್ಗಳ ಆಯ್ಕೆ ನಿಮ್ಮ ಮುಂದಿವೆ.
ಇದನ್ನೂ ಓದಿ: FD Rates: ಪೋಸ್ಟ್ ಆಫೀಸ್ vs ಎಸ್ಬಿಐ; ಎಲ್ಲಿ ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಒಂದು ಹೋಲಿಕೆ
ಎನ್ಪಿಎಸ್: ನ್ಯಾಷನಲ್ ಪೆನ್ಷನ್ ಸ್ಕೀಮ್ನಲ್ಲಿ ಮಾಡುವ ಹೂಡಿಕೆಗೆ ನೀವು ಹೆಚ್ಚುವರಿ ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು.
ಗೃಹಸಾಲ: ಗೃಹಸಾಲಗಳಿಗೆ ನೀವು ಕಟ್ಟುವ ಬಡ್ಡಿಮೊತ್ತ ವರ್ಷಕ್ಕೆ 2 ಲಕ್ಷ ರೂ ಆಗಿದ್ದರೆ ಆ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ತೆರಿಗೆ ವಿನಾಯಿತಿಗೋಸ್ಕರ ಗೃಹ ಸಾಲ ಮಾಡಲು ಮುಂದಾದರೆ ಅದು ತಪ್ಪಾದೀತು.
ಇಎಲ್ಎಸ್ಎಸ್, ಎನ್ಎಸ್ಸಿ, ಪಿಪಿಎಫ್, ಎಸ್ಸಿಎಸ್ಎಸ್, ಎಫ್ಡಿ ಇತ್ಯಾದಿಯಲ್ಲಿ ವರ್ಷಕ್ಕೆ ಒಟ್ಟು ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಮಾತ್ರವೇ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ಈ ನಿಟ್ಟಿನಲ್ಲಿ ನಿಮ್ಮ ಹೂಡಿಕೆಗಳನ್ನು ಯೋಜಿಸಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ