AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು 100 ವರ್ಷ ಹೋದರೂ ಮನುಷ್ಯರಿಂದ ಈ ಕೆಲಸಗಳು ಎಐ ಪಾಲಾಗೋದಿಲ್ಲ ಎನ್ನುತ್ತಾರೆ ಬಿಲ್ ಗೇಟ್ಸ್; ಯಾವುವವು ಆ ಕೆಲಸಗಳು?

Which jobs AI cannot replace humans? ಎಐ ಬೆಳೆಯುತ್ತಾ ಹೋದಂತೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಮನುಷ್ಯರಿಗೆ ಕೆಲಸ ಇಲ್ಲದಂತಾಗುತ್ತದೆ ಎನ್ನುವ ಮಾತಿದೆ. ಬಿಲ್ ಗೇಟ್ಸ್ ಪ್ರಕಾರ ಮುಂದಿನ ನೂರು ವರ್ಷಗಳ ಬಳಿಕವೂ ಮನುಷ್ಯರ ಕೆಲ ಕೆಲಸಗಳು ಉಳಿಯುಲಿವೆಯಂತೆ. ಯಂತ್ರಗಳಿಗೆ ಮನುಷ್ಯರ ಸೃಜನಶೀಲತೆ, ಭಾವನೆಗಳು ಇರೋದಿಲ್ಲ ಎನ್ನುತ್ತಾರೆ ಬಿಲ್ ಗೇಟ್ಸ್.

ಇನ್ನು 100 ವರ್ಷ ಹೋದರೂ ಮನುಷ್ಯರಿಂದ ಈ ಕೆಲಸಗಳು ಎಐ ಪಾಲಾಗೋದಿಲ್ಲ ಎನ್ನುತ್ತಾರೆ ಬಿಲ್ ಗೇಟ್ಸ್; ಯಾವುವವು ಆ ಕೆಲಸಗಳು?
ಬಿಲ್ ಗೇಟ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2025 | 6:23 PM

Share

ವಿಶ್ವದ ಅನೇಕ ಕಂಪನಿಗಳು ತಮ್ಮ ಬ್ಯುಸಿನೆಸ್ ಮತ್ತು ಕಾರ್ಯಾಚರಣೆಯಲ್ಲಿ ಎಐ ಅನ್ನು ಅಳವಡಿಸುತ್ತಿವೆ. ನೂರಾರು ಮಂದಿ ಮಾಡುವ ಕೆಲಸವನ್ನು ಎಐ ಮಾಡಬಲ್ಲುದು ಎಂದು ಹಲವು ಕಂಪನಿಗಳ ಸಿಇಒಗಳು ಹೇಳುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಉದ್ಯೋಗಗಳು ಮನುಷ್ಯರಿಂದ ಎಐ ಪಾಲಾಗಲಿವೆ ಎಂದು ಬಹಳ ಮಂದಿ ಎಚ್ಚರಿಸುತ್ತಿದ್ದಾರೆ. ಉದ್ಯೋಗದ ಮೇಲೆ ಎಐ ಪರಿಣಾಮದ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಹಲವು ಬಾರಿ ಮಾತನಾಡಿದ್ದಾರೆ. ವಿಂಡೋಸ್ ಸೆಂಟ್ರಲ್​ನಿಂದ ಬಂದ ವರದಿಯೊಂದರ ಪ್ರಕಾರ, ಬಿಲ್ ಗೇಟ್ಸ್ ಅವರು, ಮನುಷ್ಯರ ಕೆಲ ಕೆಲಸಗಳನ್ನು ಮುಂದಿನ 100 ವರ್ಷವಾದರೂ ಕಸಿದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.

ಸೃಜನಶೀಲತೆ ಆಧಾರಿತ ಉದ್ಯೋಗಗಳು ಯಂತ್ರಗಳ ಪಾಲಾಗುವುದಿಲ್ಲ…

ಕಲೆ, ಬರವಣಿಗೆ, ಸಂಗೀತ, ವಿನ್ಯಾಸ ಇತ್ಯಾದಿ ಸೃಜನಶೀಲತೆ ಬೇಡುವ ಕೆಲಸಗಳನ್ನು ಮನುಷ್ಯರಷ್ಟು ನವಿರಾಗಿ ಮತ್ತು ಸೂಕ್ಷ್ಮವಾಗಿ ಮಾಡಲು ಎಐನಿಂದ ಆಗುವುದಿಲ್ಲ. ದತ್ತಾಂಶ ಆಧಾರವಾಗಿ ಎಐ ಒಂದು ಪ್ಯಾಟರ್ನ್ ನಿರ್ಮಿಸಬಲ್ಲುದಾದರೂ, ಮೂಲ ಪರಿಕಲ್ಪನೆ, ಭಾವ ತೀವ್ರತೆ ಇತ್ಯಾದಿ ಅಂಶವು ಮನುಷ್ಯರಿಂದಲೇ ಬರಬೇಕು ಎಂಬುದು ಬಿಲ್ ಗೇಟ್ಸ್ ಅನಿಸಿಕೆ.

ಇದನ್ನೂ ಓದಿ: ನಿನ್ನಂಥ ಅಪ್ಪ ಇಲ್ಲ… ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…

ಬುದ್ಧಿವಂತಿಕೆ ಬಯಸುವ ಕೆಲಸಗಳು…

ಶಿಕ್ಷಕರು, ಕನ್ಸಲ್ಟೆಂಟ್​ಗಳು, ವೈದ್ಯರು, ಔಷಧೋಪಚಾರ ವರ್ಗದವರು ಇತ್ಯಾದಿ ವೃತ್ತಿಗಳವರ ಕೆಲಸವನ್ನು ಎಐ ಸಮರ್ಪಕವಾಗಿ ಮಾಡಲು ಆಗುವುದಿಲ್ಲ. ವಿದ್ಯಾರ್ಥಿಗಳು, ರೋಗಿಗಳ ಭಾವನೆಯನ್ನು ಗ್ರಹಿಸಲು ಎಐನಿಂದ ಆಗದೇ ಇರಬಹುದು ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕರು ಹೇಳುತ್ತಾರೆ.

ಸಂಕೀರ್ಣ ನಿರ್ಧಾರದ ಅಗತ್ಯ ಇರುವ ಕೆಲಸಗಳಿಗೆ ಏನೂ ಆಗಲ್ಲ…

ಬಹು ಆಯಾಮದ, ಸಂಕೀರ್ಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಜಕಾರಣಿಗಳು, ಹಿರಿಯ ಮ್ಯಾನೇಜರ್​ಗಳು, ವಿಜ್ಞಾನಿಗಳ ಕೆಲಸಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಈ ಮೇಲಿನ ಕೆಲಸಗಳನ್ನು ಮಾಡಲು ನೈತಿಕತೆ ಹಾಗೂ ಅನುಭವದ ಅಗತ್ಯತೆ ಇರುತ್ತದೆ.

ಮನುಷ್ಯರ ಸಂಪರ್ಕ ಆಧಾರಿತ ಕೆಲಸಗಳಿಗೆ ಅಪಾಯ ಇಲ್ಲ…

ಮಾನವೀಯ ಸಂಬಂಧ ಮತ್ತು ನಂಬುಗೆ ಆಧಾರದ ಮೇಲೆ ನಿಂತಿರುವ ಸಾಮಾಜಿಕ ಕಾರ್ಯ, ಧಾರ್ಮಿಕ ನಾಯಕತ್ವ, ಸಮುದಾಯ ಸಂಘಟನೆಯ ಕ್ಷೇತ್ರದ ಕೆಲಸಗಳನ್ನು ಮೆಷಿನ್​ಗಳು ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಬಿಲ್ ಗೇಟ್ಸ್.

ಇದನ್ನೂ ಓದಿ: ಇಲಾನ್ ಮಸ್ಕ್ ಅವರ ಎಐ ಕಂಪನಿ ಬಿಟ್ಟು ಎದುರಾಳಿ ಓಪನ್​ಎಐ ಸೇರಿದ ಭಾರತ ಮೂಲದ ಉದಯ್ ರುದ್ರರಾಜು

ಕೋಡಿಂಗ್ ಕೆಲಸದಲ್ಲಿ ಯಾವುತ್ತೂ ಮನುಷ್ಯರೇ ಕಿಂಗ್….

ಬಿಲ್ ಗೇಟ್ಸ್ ಪ್ರಕಾರ ಎಐ ಏನೇ ಕೋಡಿಂಗ್ ಮಾಡಿದರೂ ಪ್ರೋಗ್ರಾಮಿಂಗ್ ಮಾಡಿದರೂ ಮನುಷ್ಯರ ಸೃಜನಶೀಲ ಪ್ರಯೋಗ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಸಾಫ್ಟ್​ವೇರ್ ಪರಿಕಲ್ಪನೆ ಮಾಡಲು, ಮಾನವ ಕುಲದ ಹಿತವನ್ನು ಗಮನದಲ್ಲಿಟ್ಟುಕೊಂಡು ನೈತಕತೆಯಿಂದ ಕೆಲಸ ಮಾಡುವುದನ್ನು ಎಐಗೆ ಮಾಡಲಾಗುವುದಿಲ್ಲ. ಹೀಗಾಗಿ, ಕೋಡಿಂಗ್ ಯಾವತ್ತೂ ಮನುಷ್ಯರ ಬಳಿ ಇರುತ್ತೆ ಎಂತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!