ನವದೆಹಲಿ: ಜಾಗತಿಕ ವೈಮಾನಿಕ ಇತಿಹಾಸದಲ್ಲೇ (Global Aviation History) ಅತಿದೊಡ್ಡ ವಿಮಾನ ಖರೀದಿ ಒಪ್ಪಂದಗಳಿಗೆ ಏರ್ ಇಂಡಿಯಾ (Air India) ನಿನ್ನೆ ಸಹಿಹಾಕಿತ್ತು. ಅಮೆರಿಕದ ಬೋಯಿಂಗ್ನಿಂದ (Boeing Aircraft) 220 ಮತ್ತು ಫ್ರಾನ್ಸ್ನ ಏರ್ಬಸ್ನಿಂದ (Airbus of France) 250 ಸೇರಿ ಒಟ್ಟು 470 ವಿಮಾನಗಳನ್ನು ಟಾಟಾ ಒಡೆತನದ ಸಂಸ್ಥೆ ಖರೀದಿ ಮಾಡುತ್ತಿದೆ. ಇದು ಹೊಸ ದಾಖಲೆ ಎನಿಸಿದೆ. 2011ರಲ್ಲಿ ಅಮೆರಿಕನ್ ಏರ್ಲೈನ್ಸ್ ಸಂಸ್ಥೆ 460 ವಿಮಾನಗಳನ್ನು ಖರೀದಿಸಿತ್ತು. 2019ರಲ್ಲಿ ಇಂಡಿಗೋ ಏರ್ಲೈನ್ಸ್ 300 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು ಇದೂವರೆಗಿನ ಭಾರತೀಯ ದಾಖಲೆಯಾಗಿತ್ತು. ಈಗ ಟಾಟಾ ಗ್ರೂಪ್ ಒಡೆತನ ಏರ್ ಇಂಡಿಯಾ ಸಂಸ್ಥೆ ಭಾರತೀಯ ದಾಖಲೆ ಮಾತ್ರವಲ್ಲ ವಿಶ್ವದಾಖಲೆಯನ್ನೂ ಅಳಿಸಿಹಾಕಿದೆ.
ಗಮನಾರ್ಹ ಎಂದರೆ, ಬೋಯಿಂಗ್ ಮತ್ತು ಏರ್ಬಸ್ನಿಂದ ಏರ್ ಇಂಡಿಯಾ 470 ವಿಮಾನಗಳ ಖರೀದಿಸಲು ಆರ್ಡರ್ ಕೊಟ್ಟಿದೆ. ಆದರೆ, ಇವುಗಳಿಂದ ಇದೇ ದರಗಳಲ್ಲಿ ಇನ್ನೂ ಹೆಚ್ಚು 370 ವಿಮಾನಗಳನ್ನು ಖರೀದಿಸುವ ಅವಕಾಶ ಹೊಂದಿದೆ. ಮುಂದಿನ ಒಂದು ದಶಕದಲ್ಲಿ ಬೋಯಿಂಗ್ ಮತ್ತು ಏರ್ಬಸ್ ಸಂಸ್ಥೆಗಳು ಇವತ್ತಿನ ದರದಲ್ಲಿ ಏರ್ ಇಂಡಿಯಾಗೆ ತಮ್ಮ ವಿಮಾನಗಳನ್ನು ಮಾರಲು ಒಪ್ಪಿಕೊಂಡಿವೆ. ಅದೂ ಏರ್ ಇಂಡಿಯಾ ಇಚ್ಛಿಸಿದಲ್ಲಿ ಮಾತ್ರ. ಒಟ್ಟೂ 840 ವಿಮಾನಗಳನ್ನು ಏರ್ ಇಂಡಿಯಾ ಖರೀದಿಸಬಹುದು.
ಇದನ್ನೂ ಓದಿ: Air India: ಏರ್ ಇಂಡಿಯಾ ಭರ್ಜರಿ ಡೀಲ್; ಫ್ರಾನ್ಸ್, ಅಮೆರಿಕದಿಂದ ದಾಖಲೆ ಸಂಖ್ಯೆಯಲ್ಲಿ ವಿಮಾನ ಖರೀದಿ
ಭಾರತಕ್ಕೆ ಮುಂದಿನ ವರ್ಷಗಳಲ್ಲಿ 2000ದಷ್ಟು ಹೊಸ ವಿಮಾನಗಳು ಅಗತ್ಯ ಇವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮಾಡಿಕೊಂಡಿರುವ ಈ ಒಪ್ಪಂದವನ್ನು ಬಹಳಷ್ಟು ಉದ್ಯಮಿಗಳು ಸ್ವಾಗತಿಸಿದ್ದಾರೆ.
ಏರ್ ಇಂಡಿಯಾ ಸಂಸ್ಥೆ ಸದ್ಯ 140 ವಿಮಾನಗಳನ್ನು ಹೊಂದಿದೆ. ಅದರ ದೇಶೀಯ ಹಾರಾಟ ಸೇವೆಗೆ ಹೆಚ್ಚಾಗಿ ಏರ್ಬಸ್ ವಿಮಾನಗಳನ್ನು ಬಳಸಲಾಗುತ್ತಿದೆ. ಅಂತಾರಾಷ್ಟ್ರೀಯ ಸೇವೆಗೆ ಬೋಯಿಂಗ್ ವಿಮಾನಗಳಿವೆ. ಅದರ ಅನೇಕ ವಿಮಾನಗಳು ಹಳೆಯದಾಗಿದ್ದು, ಅವುಗಳ ಸೇವೆ ಸ್ಥಗಿತಗೊಳಿಸುವ ಕಾಲ ಸಮೀಪಿಸಿದೆ. ಅದಕ್ಕಾಗಿಯೇ ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸಲು ಮುಂದಾಗಿದೆ.
ಇದನ್ನೂ ಓದಿ: BBC: ಬಿಬಿಸಿ ಕಚೇರಿಯಲ್ಲಿ ಐಟಿ ಸರ್ವೆಯ ಮರ್ಮವೇನು? ಟ್ರಾನ್ಸ್ಫರ್ ಪ್ರೈಸಿಂಗ್ನಿಂದ ಜಾಗತಿಕವಾಗಿ ಆಗುವ ತೆರಿಗೆನಷ್ಟ ಎಷ್ಟು?
ಏರ್ ಇಂಡಿಯಾ ಒಪ್ಪಂದ ಇಷ್ಟಕ್ಕೆ ಸೀಮಿತವಾಗಿಲ್ಲ. ಸಿಎಫ್ಎಂ ಇಂಟರ್ನ್ಯಾಷನಲ್, ರಾಲ್ಸ್ ರಾಯ್ಸ್ ಮತ್ತು ಜಿಇ ಏರೋಸ್ಪೇಸ್ ಕಂಪನಿಗಳೊಂದಿಗೆ ಎಂಜಿನ್ ಮೈಂಟೆನೆನ್ಸ್ಗೆ ದೀರ್ಘಾವಧಿ ಒಪ್ಪಂದಕ್ಕೆ ಏರ್ ಇಂಡಿಯಾ ಸಹಿಹಾಕಿದೆ. ಏರ್ಬಸ್ ವಿಮಾನಗಳ ಎಂಜಿನ್ ರಾಲ್ಸ್ ರಾಯ್ಸ್ನದ್ದಾಗಿದೆ. ಜಾಗತಿಕವಾಗಿ ಹೆಚ್ಚಿನ ವಿಮಾನಗಳಿಗೆ ಇವೇ ಎಂಜಿನ್ ಬಳಸಲಾಗುತ್ತದೆ. ಹೀಗಾಗಿ, ಏರ್ ಇಂಡಿಯಾಗೆ ಸಿಕ್ಕಿರುವ ಡೀಲ್ ಬಹಳ ಉತ್ತಮ ಎಂದೇ ಪರಿಣಿತರು ಬಣ್ಣಿಸುತ್ತಾರೆ.
Published On - 4:02 pm, Thu, 16 February 23