ನವದೆಹಲಿ: ಟಾಟಾ ಸಮೂಹದ (Tata Group) ಒಡೆತನದಲ್ಲಿರುವ ಏರ್ ಇಂಡಿಯಾ (Air India) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಬ್ಯಾಂಕ್ ಆಫ್ ಬರೋಡದಿಂದ (BoB) 18,000 ಕೋಟಿ ರೂ. ಸಾಲ ಪಡೆಯಲಿದೆ. ಅಸ್ತಿತ್ವದಲ್ಲಿರುವ ಅಲ್ಪಾವಧಿಯ ಸಾಲವನ್ನು ಮರು ಹೊಂದಿಸುವುದಕ್ಕಾಗಿ ಈ ಸಾಲ ಪಡೆಯಲಿದೆ. ಅಸ್ತಿತ್ವದಲ್ಲಿರುವ ಸಾಲದ ಅವಧಿ ಒಂದು ವರ್ಷವಾಗಿದ್ದು, ಅದನ್ನು ದೀರ್ಘಾವಧಿಯ ಸಾಲವಾಗಿ ಪರಿವರ್ತಿಸಲು ಏರ್ ಇಂಡಿಯಾ ಉದ್ದೇಶಿಸಿದೆ ಎಂದು ವರದಿಯಾಗಿದೆ. ಟಾಟಾ ಸಮೂಹವು ಮಾಲೀಕತ್ವ ವಹಿಸಿಕೊಂಡ ಬಳಿಕ ದೊರೆತ ಸಾಲ ಸೌಲಭ್ಯದ ಅಡಿ ಪಡೆದ ಸಾಲಗಳನ್ನು ಮುಂದುವರಿಸುವುದಕ್ಕಾಗಿ ಏರ್ ಇಂಡಿಯಾ ಹೊಸದಾಗಿ ಸಾಲ ಪಡೆಯಲು ಮುಂದಾಗಿದೆ. ದೀರ್ಘಾವಧಿಯ ತಂತ್ರಗಾರಿಕೆಯ ಭಾಗವಾಗಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಟಾಟಾ ಸಮೂಹವು ಏರ್ ಇಂಡಿಯಾ ಮಾಲೀಕತ್ವ ವಹಿಸಿದ ಬಳಿಕ ಅದಕ್ಕೊಂದು ಸ್ಪಷ್ಟ ರೂಪ ನೀಡುವ ನಿಟ್ಟಿನಲ್ಲಿ ಈಗಲೂ ಕಾರ್ಯಾಚರಿಸುತ್ತಿದೆ. ಬ್ಯಾಂಕ್ಗಳೊಂದಿಗಿನ ಸಹಭಾಗಿತ್ವವನ್ನು ಅಧಿಕೃತವಾಗಿ ಗಟ್ಟಿಗೊಳಿಸಲು ಸಂಸ್ಥೆ ಪ್ರತ್ನಿಸುತ್ತಿದೆ. ದೀರ್ಘಾವಧಿಗೆ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಸಂಸ್ಥೆಯ ಗುರಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಇದನ್ನೂ ಓದಿ: Layoff: ಇನ್ಫೋಸಿಸ್ನಿಂದ 600 ಮಂದಿ ಹೊಸ ಉದ್ಯೋಗಿಗಳ ವಜಾ; ವರದಿ
ಈ ಮಧ್ಯೆ ಕಂಪನಿಯು ಏರ್ ಏಷ್ಯಾ, ವಿಸ್ತಾರ ಬ್ರ್ಯಾಂಡ್ಗಳನ್ನು ವಿಲೀನಗೊಳಿಸುವ ನಿಟ್ಟಿನಲ್ಲಿಯೂ ಕಾರ್ಯಾಚರಿಸುತ್ತಿದೆ. ಹೊಸ ವಿಮಾನಗಳ ಖರೀದಿಗೆ ಹೂಡಿಕೆ, ಅಸ್ತಿತ್ವದಲ್ಲಿರುವ ಹಳೆಯ ವಿಮಾನಗಳ ಬದಲಾವಣೆ, ಜಾಲವನ್ನು ವಿಸ್ತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ.
ಕಳೆದ ವರ್ಷ ಎಸ್ಬಿಐಯಿಂದ ಟಾಟಾ ಸನ್ಸ್ 10,000 ಕೋಟಿ ಸಾಲ ಹಾಗೂ ಬ್ಯಾಂಕ್ ಆಫ್ ಬರೋಡದಿಂದ 5,000 ಕೋಟಿ ರೂ. ಸಾಲ ಪಡೆದಿತ್ತು. ಶೇ 4.25ರ ಬಡ್ಡಿ ದರದಲ್ಲಿ ಈ ಸಾಲ ಪಡೆಯಲಾಗಿತ್ತು. ನಂತರ ಆರ್ಬಿಐ ರೆಪೊ ದರವನ್ನು ನಿರಂತರವಾಗಿ ಹೆಚ್ಚಿಸಿದ್ದರಿಂದ ಬಡ್ಡಿ ದರ ಶೇ 6.50 ಆಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Tue, 7 February 23