Leave Encashment: ಹೊಸ ರಜೆ ನಗದೀಕರಣ ನಿಯಮ; ಉದ್ಯೋಗಿಗಳಿಗೆ ವಾರ್ಷಿಕ 20,000 ಉಳಿಕೆ!

ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ ಅವರಿಗೆ ಪ್ರಯೋಜನವಾಗಲಿದೆ. ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

Leave Encashment: ಹೊಸ ರಜೆ ನಗದೀಕರಣ ನಿಯಮ; ಉದ್ಯೋಗಿಗಳಿಗೆ ವಾರ್ಷಿಕ 20,000 ಉಳಿಕೆ!
ಸಾಂದರ್ಭಿಕ ಚಿತ್ರ
Follow us
|

Updated on: Feb 07, 2023 | 1:04 PM

ಉದ್ಯೋಗಿಗಳು ನಿವೃತ್ತರಾದಾಗ ಸಿಗುವ ಗಳಿಕೆ ರಜೆ ನಗದೀಕರಣ (Leave Encashment) ಸೌಲಭ್ಯದ ಮೇಲೆ ಈವರೆಗೆ 3 ಲಕ್ಷ ರೂ.ಗೆ ಮಾತ್ರ ತೆರಿಗೆ ವಿನಾಯಿತಿ (Tax Exemption) ದೊರೆಯುತ್ತಿತ್ತು. ಸರ್ಕಾರೇತರ ಕ್ಷೇತ್ರದ ಉದ್ಯೋಗಿಗಳಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್​​​ನಲ್ಲಿ (Budget 2023) ಘೋಷಣೆ ಮಾಡಿದ್ದರು. ಇದು 2023ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ. 22 ಲಕ್ಷ ರೂ. ವಿನಾಯಿತಿ ವಿಸ್ತರಣೆಯ ಪ್ರಮಾಣ ಶೇ 30ರಷ್ಟಾಗಲಿದ್ದು, ಉದ್ಯೋಗಿಗಳಿಗೆ ಒಟ್ಟಾರೆ ಅಂದಾಜು 7 ಲಕ್ಷ ರೂ.ನಷ್ಟು ಪ್ರಯೋಜನ ದೊರೆಯಲಿದೆ ಎಂದು ಆದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ. ಉದ್ಯೋಗಿಯೊಬ್ಬರು 30-35 ವರ್ಷಗಳ ಅವಧಿಗೆ ಈ ವಿನಾಯಿತಿ ಪಡೆದರೆ ಅವರ ವಾರ್ಷಿಕ ಪ್ರಯೋಜ 20,000 ರೂ.ನಷ್ಟಾಗಲಿದೆ ಎಂದು ಅವರು ಹೇಳಿದ್ದಾರೆ.

ವೈಯಕ್ತಿಕ ತೆರಿಗೆ ಪಾವತಿದಾರರ ಪೈಕಿ ಶೇ 50ರಷ್ಟು ಮಂದಿ ವೇತನದಾರ ವರ್ಗವಿದೆ. ಹೊಸ ಗಳಿಕೆ ರಜೆ ನಗದೀಕರಣ ನಿಯಮದಿಂದ ಅವರಿಗೆ ನಿವೃತ್ತಿಯ ಸಂದರ್ಭದಲ್ಲಿ ಪ್ರಯೋಜನವಾಗಲಿದೆ. ಅವರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿದರೂ ಹಳೆಯ ತೆರಿಗೆ ಪದ್ಧತಿ ಆಯ್ದುಕೊಂಡರೂ ಅವರಿಗೆ ಈ ಪ್ರಯೋಜನ ದೊರೆಯಲಿದೆ ಎಂದು ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.

ಇದನ್ನೂ ಓದಿ: Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ

ಹೊಸ ಗಳಿಕೆ ರಜೆ ನಗದೀಕರಣ ನಿಯಮವು ಏಮ್ಸ್​ ಸೇರಿದಂತೆ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುತ್ತಿರುವ ನೌಕರರಿಗೂ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಜೆ ನಗದೀಕರಣ ಎಂದರೇನು?

ಭಾರತದ ಕಾರ್ಮಿಕ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ವೇತನದಾರ ಉದ್ಯೋಗಿಯು ವಾರ್ಷಿಕವಾಗಿ ಕನಿಷ್ಠ ಪಾವತಿ ರಜೆಯನ್ನು (Paid Leaves) ಪಡೆಯಲು ಅರ್ಹನಾಗಿದ್ದಾನೆ. ಆದಾಗ್ಯೂ, ಈ ರಜೆಗಳನ್ನು ಪ್ರತಿ ವರ್ಷ ತೆಗೆದುಕೊಳ್ಳಲಾಗುವುದಿಲ್ಲ. ಇದು ಮುಂದಿನ ವರ್ಷದ ಪಾವತಿ ರಜೆಗಳ ಜತೆ ಸೇರ್ಪಡೆಯಾಗುತ್ತಾ ಹೋಗುತ್ತದೆ. ಇಂಥ ರಜೆಗಳನ್ನು ನಿವೃತ್ತಿಯಾಗುವ ಸಂದರ್ಭದಲ್ಲಿ ನಗದೀಕರಣ ಮಾಡಿಕೊಳ್ಳಲು ಉದ್ಯೋಗಿಗೆ ಅವಕಾಶ ಇರುತ್ತದೆ. ಹೀಗೆ ರಜೆಯ ಬದಲಿಗೆ ಉದ್ಯೋಗಿಯು ನಗದನ್ನು ಪಡೆಯುವ ಪ್ರಕ್ರಿಯೆಯನ್ನು ರಜೆ ನಗದೀಕರಣ ಅಥವಾ ಲೀವ್ ಎನ್​ಕ್ಯಾಶ್​ಮೆಂಟ್ ಎಂದು ಕರೆಯಲಾಗುತ್ತದೆ.

ರಜೆ ನಗದೀಕರಣಕ್ಕೆ ತೆರಿಗೆ ಪಾವತಿಸಬೇಕೇ?

ರಜೆ ನಗದೀಕರಣವು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಉದ್ಯೋಗದ ಸಂದರ್ಭದಲ್ಲಿ ರಜೆ ನಗದೀಕರಣ ಮಾಡಿಸಿಕೊಂಡರೆ ಅದನ್ನು ವೇತನದಿಂದ ಗಳಿಸಿದ ಆದಾಯ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 89 ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಇದಕ್ಕಾಗಿ 10ಇ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ, ಇದೀಗ ಸರ್ಕಾರವು ರಜೆ ನಗದೀಕರಣ ತೆರಿಗೆ ವಿನಾಯಿತಿ ಮಿತಿಯನ್ನು 25 ಲಕ್ಷ ರೂ.ಗೆ ವಿಸ್ತರಿಸುವುದರಿಂದ ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್