Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ

ಷೇರು ಮಾರುಕಟ್ಟೆ ಬಿಟ್ಟು ಬೇರೆ ಯಾವೆಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು? ಉತ್ತಮ ರಿಟರ್ನ್ಸ್ ಗಳಿಸಬಹುದು? ಹಣಕಾಸು ತಜ್ಞರು ನೀಡಿದ ಸಲಹೆ ಆಧಾರಿತ ಒಂದಷ್ಟು ಹೂಡಿಕೆ ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ.

Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 07, 2023 | 10:50 AM

ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ ಮಾಡಿದರೆ ಹೆಚ್ಚಿನ ದುಡ್ಡು ಮಾಡಬಹುದು. ಬೇಗನೇ ಶ್ರೀಮಂತರಾಗಬಹುದು ಎಂಬ ಕಲ್ಪನೆ ಅನೇಕರಲ್ಲಿರುತ್ತದೆ. ಹಾಗೆಯೇ ಅದರ ಒಳಮರ್ಮ ಅರಿಯದೇ ಹೂಡಿಕೆ (Investment) ಮಾಡಲು ಹಿಂದೇಟು ಹಾಕುವವರೇ ಹೆಚ್ಚು. ಇದರ ಬದಲು ಬೇರೆ ಯಾವುದಾದರೂ ತಾಣಗಳಲ್ಲಿ ಹೂಡಿಕೆ ಮಾಡಬಹುದೆಂಬ ಲೆಕ್ಕಾಚಾರ ಹಲವರಲ್ಲಿರುತ್ತದೆ. ಅದಾನಿ ಸಮೂಹದ ಷೇರು ಕುಸಿತದಂಥ ವಿದ್ಯಮಾನಗಳು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯ ಬಗ್ಗೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಿದ್ದರೆ ಷೇರು ಮಾರುಕಟ್ಟೆ ಬಿಟ್ಟು ಬೇರೆ ಯಾವೆಲ್ಲ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು? ಉತ್ತಮ ರಿಟರ್ನ್ಸ್ ಗಳಿಸಬಹುದು? ಹಣಕಾಸು ತಜ್ಞರು ನೀಡಿದ ಸಲಹೆ ಆಧಾರಿತ ಒಂದಷ್ಟು ಹೂಡಿಕೆ ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ.

ಕಾರ್ಪೊರೇಟ್ ಬಾಂಡ್​​ಗಳು

ಸ್ಥಿರವಾದ ರಿಟರ್ನ್ಸ್​​ಗಾಗಿ ನೀವು ಕಾರ್ಪೊರೇಟ್ ಬಾಂಡ್​​ಗಳಲ್ಲಿ 12ರಿಂದ 36 ತಿಂಗಳ ಅವಧಿಗೆ ಹೂಡಿಕೆ ಮಾಡಬಹುದು ಎಂದಿದ್ದಾರೆ ಹಣಕಾಸು ತಜ್ಞರು. ಈ ಯೋಜನೆ ಹೆಚ್ಚಿನ ರಿಸ್ಕ್ ಹೊಂದಿಲ್ಲ. ಉಳಿತಾಯ ಖಾತೆಯಲ್ಲಿ ಹಣ ಇಟ್ಟು ಕೊಳೆಸುವ ಬದಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಎಫ್​ಡಿಗಿಂತಲೂ ಹೆಚ್ಚಿನ ರಿಟರ್ನ್ಸ್ ಗಳಿಸಬಹುದು. ಮೆಚ್ಯೂರಿಟಿ ಅವಧಿಗೆ ಶೇ 11ರ ವರೆಗೂ ರಿಟರ್ನ್ಸ್ ಗಳಿಸಬಹುದು ಎಂದಿದ್ದಾರೆ ತಜ್ಞರು.

ಡಿಜಿಟಲ್ ಚಿನ್ನ

ಭೌತಿಕ ಚಿನ್ನದಲ್ಲಿ ಆನ್​ಲೈನ್ ಮೂಲಕ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಪಡೆಯಬಹುದು. ಈ ವಿಧಾನವನ್ನೇ ಡಿಜಿಟಲ್ ಚಿನ್ನದಲ್ಲಿನ ಹೂಡಿಕೆ ಎಂದು ಕರೆಯಲಾಗುತ್ತದೆ. ಈ ಹೂಡಿಕೆ ವಿಧಾನದಲ್ಲಿ ಆನ್​ಲೈನ್ ಮೂಲಕ ನಿರ್ದಿಷ್ಟ ಮೊತ್ತವೊಂದರ ಚಿನ್ನ ಖರೀದಿಸಲಾಗುತ್ತದೆ. ನಂತರ ಮಾರಾಟ ಮಾಡಬಹುದಾಗಿದೆ. ಕನಿಷ್ಠ 1 ರೂ.ಗೂ ಚಿನ್ನ ಖರೀದಿಸಬಹುದಾಗಿದೆ. 24 ಕ್ಯಾರೆಟ್ ಹಾಲ್​ಮಾರ್ಕ್ ಚಿನ್ನ ಖರೀದಿಸಬಹುದಾಗಿದೆ. ಸಾವರಿನ್ ಗೋಲ್ಡ್ ಬಾಂಡ್​​ಗಳು (SGBs) ಮತ್ತು ಮ್ಯೂಚುವಲ್ ಫಂಡ್​ ಹೌಸ್​ಗಳು ಬಿಡುಗಡೆ ಮಾಡುವ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್ಸ್ (ETFs) ಗಳೂ ಹೂಡಿಕೆಗೆ ಉತ್ತಮ ಆಯ್ಕೆಗಳಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಸ್ಥಿರ ಠೇವಣಿ ಅಥವಾ ಎಫ್​​ಡಿ

ಸ್ಥಿರ ಠೇವಣಿ ಅಥವಾ ಎಫ್​ಡಿಗಳಲ್ಲಿಯೂ ನಿರ್ದಿಷ್ಟ ವರ್ಷದ ವರೆಗೆ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಪಡೆಯಬಹುದಾಗಿದೆ. ಹಿರಿಯ ನಾಗರಿಕರಿಗಂತೂ ಎಫ್​​ಡಿಗಳಲ್ಲಿ ಹೆಚ್ಚಿನ ಬಡ್ಡಿ ದೊರೆಯುತ್ತದೆ. ಆರ್​ಬಿಐ ರೆಪೊ ದರವನ್ನು ಶೇ 6.25ರ ವರೆಗೂ ಹೆಚ್ಚಳ ಮಾಡಿರುವುದರಿಂದ ಪ್ರಸ್ತುತ ಬ್ಯಾಂಕ್​ಗಳು ಎಫ್​​ಡಿಗೆ ಉತ್ತಮ ಬಡ್ಡಿ ನೀಡುತ್ತಿವೆ.

ರಿಯಲ್ ಎಸ್ಟೇಟ್

ದೀರ್ಘಾವಧಿಯ ಹೂಡಿಕೆದಾರರಿಗಾದರೆ ರಿಯಲ್ ಎಸ್ಟೇಟ್ ಕೂಡ ಉತ್ತಮ ಆಯ್ಕೆಯಾಗಬಲ್ಲದು ಎಂದು ಹೇಳಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು. ರಿಯಲ್ ಎಸ್ಟೇಟ್​​ನಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ರಿಟರ್ನ್ಸ್ ಗಳಿಸಬಹುದು. ಇದರಲ್ಲಿ ರಿಸ್ಕ್ ಕೂಡ ಕಡಿಮೆ. ಆದರೆ ದೊಡ್ಡ ಮೊತ್ತದ ಹೂಡಿಕೆ ಮಾಡುವವರಿಗಾದರೆ ಹೆಚ್ಚು ಅನುಕೂಲವಾಗಬಹುದು.

ಆಸ್ತಿ ಭೋಗ್ಯಕ್ಕೆ ನೀಡುವುದು

ಆಸ್ತಿಯನ್ನು ಭೊಗ್ಯಕ್ಕೆ ನೀಡುವ ಮೂಲಕವೂ ಉತ್ತಮ ರಿಟರ್ನ್ಸ್ ಗಳಿಸಬಹುದು. ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಗಳಿಕೆ ತಂದುಕೊಡಬಹುದಾದ ಹೂಡಿಕೆ ಇದು. ಶೇ 12ರ ಪೋಸ್ಟ್ ಟ್ಯಾಕ್ಸ್ ಪ್ರಾಫಿಟ್ ಪಡೆಯಲೂ ಇದು ನೆರವಾಗಬಲ್ಲದು. ಮಾರುಕಟ್ಟೆ ಸಂಯೋಜಿತವಲ್ಲ, ಸ್ಥಿರ ಆದಾಯ ಗಳಿಸಲು ಇದು ಉತ್ತಮ ದಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ