Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Loan: ವಾಟ್ಸ್​ಆ್ಯಪ್​ನಲ್ಲೇ ಗೃಹ ಸಾಲ! ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ವಿವರ ನೀಡಬೇಕು? ಇಲ್ಲಿದೆ ಮಾಹಿತಿ

ಮನೆ ಖರೀದಿಗೆ ಮುಂದಾಗುವವರಿಗೆ ಗೃಹ ಸಾಲ ಪಡೆಯುವುದು ಈಗ ಮತ್ತಷ್ಟು ಸುಲಭ ಮತ್ತು ಸರಳವಾಗಿದೆ. ವಾಟ್ಸ್​ಆ್ಯಪ್​ನಲ್ಲೇ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Home Loan: ವಾಟ್ಸ್​ಆ್ಯಪ್​ನಲ್ಲೇ ಗೃಹ ಸಾಲ! ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ವಿವರ ನೀಡಬೇಕು? ಇಲ್ಲಿದೆ ಮಾಹಿತಿ
ಗೃಹ ಸಾಲ (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on: Feb 06, 2023 | 5:40 PM

ಮನೆ ಖರೀದಿಗೆ ಮುಂದಾಗುವವರಿಗೆ ಗೃಹ ಸಾಲ (Home Loan) ಪಡೆಯುವುದು ಈಗ ಮತ್ತಷ್ಟು ಸುಲಭ ಮತ್ತು ಸರಳವಾಗಿದೆ. ವಾಟ್ಸ್​ಆ್ಯಪ್ (WhatsApp) ಮೂಲಕವೇ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಬಜಾಜ್ ಹೌಸಿಂಗ್ ಫೈನಾನ್ಸ್ (Bajaj Housing Finance) ಸೋಮವಾರ ಚಾಲನೆ ನೀಡಿದೆ. ವೇತನದಾರ ವರ್ಗದಲ್ಲಿ ಬರುವ ಯಾರು ಬೇಕಾದರೂ ವಾಟ್ಸ್​ಆ್ಯಪ್​ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಯಾವ ಸಮಯದಲ್ಲಿ ಬೇಕಿದ್ದರೂ ಸರಳವಾಗಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಸಲುವಾಗಿ ಈ ಆಯ್ಕೆ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ. ಹೊಸದಾಗಿ ಗೃಹ ಸಾಲ ಪಡೆಯಲು ಇಚ್ಛಿಸುವವರೂ ವಾಟ್ಸ್​​ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ಗೃಹ ಸಾಲದ ಬ್ಯಾಲೆನ್ಸ್ ಟ್ರಾನ್ಸ್​ಫರ್​​ ಮಾಡಲೂ ಅರ್ಜಿ ಸಲ್ಲಿಸಬಹುದು ಎಂದು ಬಜಾಜ್ ಹೌಸಿಂಗ್ ಫೈನಾನ್ಸ್ ಹೇಳಿದೆ.

ಯಾವೆಲ್ಲ ವಿವರಗಳನ್ನು ನೀಡಬೇಕು?

ವಾಟ್ಸ್​ಆ್ಯಪ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಕೆಲವೊಂದು ವಿವರಗಳನ್ನು ನೀಡಿದರೆ ಸಾಕಾಗಲಿದೆ ಎಂದು ಕಂಪನಿ ತಿಳಿಸಿದೆ. ಅರ್ಜಿದಾರನ ಪೂರ್ತಿ ಹೆಸರು, ಮೊಬೈಲ್ ಸಂಖ್ಯೆ, ಪ್ಯಾನ್ ಇತ್ಯಾದಿ ವಿವರಗಳನ್ನು ನೀಡಬೇಕಾಗುತ್ತದೆ. ವಿವರಗಳನ್ನು ಒದಗಿಸಿದ ತಕ್ಷಣ ಅರ್ಜಿದಾರನ ಸಾಲ ಪಡೆಯುವ ಅರ್ಹತೆಗೆ ಸಂಬಂಧಿಸಿದ ವಿವರಗಳು ಮತ್ತು ಎಷ್ಟು ಮೊತ್ತದ ಸಾಲ ಸಿಗಬಹುದು ಎಂಬ ಮಾಹಿತಿ ದೊರೆಯಲಿವೆ ಎಂಬುದನ್ನು ತಿಳಿಯಬಹುದಾಗಿದೆ. ಡಿಜಿಟಲ್ ಇನ್​-ಪ್ರಿನ್ಸಿಪಲ್ ಸ್ಯಾಂಕ್ಷನ್ ಲೆಟರ್ (ಮಂಜೂರಾತಿ ಪತ್ರ) ಪಡೆಯಲು ಬಯಸುವವರು 1,999 ರೂ. ಹಾಗೂ ಜಿಎಸ್​​ಟಿ ಪಾವತಿಸಿ ಪಡೆಯಬಹುದು ಎಂದು ಬಜಾಜ್ ಹೌಸಿಂಗ್ ಫೈನಾನ್ಸ್ ತಿಳಿಸಿದೆ.

ವಾಟ್ಸ್​ಆ್ಯಪ್​ನಲ್ಲೇ ಗೃಹ ಸಾಲಕ್ಕೆ ಅರ್ಜಿ ಸಲ್ಲಿವುದು ಹೇಗೆ?

  • ಬಜಾಜ್ ಹೌಸಿಂಗ್ ಫೈನಾನ್ಸ್​​ನ ವಾಟ್ಸ್​ಆ್ಯಪ್ ಸಂಖ್ಯೆ ‘75075 07315’ ಇದಕ್ಕೆ ‘Hi’ ಎಂಬ ಸಂದೇಶ ಕಳುಹಿಸಿ.
  • ಎಂಟು ದಾಖಲೆಗಳನ್ನು (ಹೆಸರು, ಸಂಪರ್ಕ ಸಂಖ್ಯೆ, ಪ್ಯಾನ್ ಇತ್ಯಾದಿ) ನೀಡಿ ಗೃಹ ಸಾಲದ ಅರ್ಹತೆ ಮತ್ತು ಆಫರ್​​ಗಳ ಬಗ್ಗೆ ತಿಳಿಯಿರಿ.
  • 1,999 ರೂ. ಹಾಗೂ ಜಿಎಸ್​ಟಿ ಪಾವತಿಸಿ ಡಿಜಿಟಲ್ ಇನ್​-ಪ್ರಿನ್ಸಿಪಲ್ ಸ್ಯಾಂಕ್ಷನ್ ಲೆಟರ್ ಪಡೆಯಿರಿ.

ಇದನ್ನೂ ಓದಿ: Good News: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ 30,000 ಉದ್ಯೋಗ ಸೃಷ್ಟಿಸಲಿದೆ ಪಿಡಬ್ಲ್ಯುಸಿ

ಗೃಹ ಸಾಲದ ಬಡ್ಡಿ ದರ ಎಷ್ಟು?

ಬಜಾಜ್ ಹೌಸಿಂಗ್ ಫೈನಾನ್ಸ್​ನ ಗೃಹ ಸಾಲವು ವೇತನದಾರ ಮತ್ತು ವೃತ್ತಿಪರರಿಗೆ ಶೇ 8.60 ಬಡ್ಡಿಯಿಂದ ಆರಂಭವಾಗುತ್ತದೆ. ತಮ್ಮ ಬಡ್ಡಿ ದರವನ್ನು ರೆಪೊ ದರದೊಂದಿಗೆ ಸಂಯೋಜನೆಗೊಳಿಸುವ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ