Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger Stock: 1 ಲಕ್ಷ ಹೂಡಿಕೆಗೆ ಮೂರೇ ವರ್ಷಗಳಲ್ಲಿ 2.4 ಕೋಟಿ ಗಳಿಸಿಕೊಟ್ಟಿದೆ ಈ ಮಲ್ಟಿಬ್ಯಾಗರ್ ಸ್ಟಾಕ್!

2023ರ ಜನವರಿ 23ರಂದು ಬಿಎಸ್​​ಇಯಲ್ಲಿ ಡೀಪ್ ಡೈಮಂಡ್ ಇಂಡಿಯಾ ಷೇರುಗಳನ್ನು 1:10 ಅನುಪಾತದಲ್ಲಿ ವಿಂಗಡಿಸಲಾಯಿತು. ಪರಿಣಾಮವಾಗಿ ಒಂದು ಷೇರು ಹೊಂದಿದ್ದವರ ಷೇರುಗಳ ಸಂಖ್ಯೆ 10 ಆಗಿ ಪರಿವರ್ತನೆಗೊಂಡಿತು.

Multibagger Stock: 1 ಲಕ್ಷ ಹೂಡಿಕೆಗೆ ಮೂರೇ ವರ್ಷಗಳಲ್ಲಿ 2.4 ಕೋಟಿ ಗಳಿಸಿಕೊಟ್ಟಿದೆ ಈ ಮಲ್ಟಿಬ್ಯಾಗರ್ ಸ್ಟಾಕ್!
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 06, 2023 | 12:28 PM

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (BSE) ಲಿಸ್ಟ್ ಆಗಿರುವ ಡೀಪ್ ಡೈಮಂಡ್ ಇಂಡಿಯಾ (Deep Diamond India) ಷೇರುಗಳು ಕಳೆದ ಒಂದು ವರ್ಷದಿಂದ ಉತ್ತಮ ಗಳಿಕೆ ದಾಖಲಿಸುತ್ತಿವೆ. 118 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಈ ಸ್ಮಾಲ್​ಕ್ಯಾಪ್ ಷೇರು ವರ್ಷದಿಂದ ವರ್ಷಕ್ಕೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಇತ್ತೀಚೆಗೆ ಷೇರುಗಳನ್ನು 1:10 ಅನುಪಾತದಲ್ಲಿ ವಿಂಗಡಿಸಿರುವುದು ದೀರ್ಘಾವಧಿಯ ಹೂಡಿಕೆದಾರರ ಷೇರುಗಳಲ್ಲಿ 10 ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಡೀಪ್ ಡೈಮಂಡ್ ಇಂಡಿಯಾ ಷೇರುಗಳು ಜನವರಿ 19ರಿಂದಲೂ ನಿರಂತರವಾಗಿ ಅಪ್ಪರ್ ಸರ್ಕ್ಯೂಟ್​​ನಲ್ಲಿವೆ. ಸತತ 12 ಟ್ರೇಡಿಂಗ್ ಅವಧಿಯಲ್ಲಿ ಅಪ್ಪರ್ ಸರ್ಕ್ಯೂಟ್​​ನಲ್ಲಿವೆ.

ಡೀಪ್ ಡೈಮಂಡ್ ಇಂಡಿಯಾ ಷೇರು ಬೆಲೆ ಇತಿಹಾಸ

ಡೀಪ್ ಡೈಮಂಡ್ ಇಂಡಿಯಾ ಷೇರುಗಳು ಕಳೆದ ಒಂದು ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 75ರ ರಿಟರ್ನ್ಸ್ ತಂದುಕೊಟ್ಟಿದೆ. ತಿಂಗಳ ಅವಧಿಯಲ್ಲಿ ಷೇರು ಮೌಲ್ಯ 13.75 ರೂ.ನಿಂದ 24.60 ರೂ.ಗೆ ಹೆಚ್ಚಳವಾಗಿದೆ. ವರ್ಷದ ಅವಧಿಯಲ್ಲಿ ಷೇರು ಮೌಲ್ಯದಲ್ಲಿ ಶೇ 96ರಷ್ಟು ಹೆಚ್ಚಳವಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ 375ರಷ್ಟು ರಿಟರ್ನ್ಸ್ ಗಳಿಸಿಕೊಟ್ಟಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರು ಮೌಲ್ಯ 1.27 ರೂ.ನಿಂದ 24.60 ರೂ.ಗೆ ತಲುಪಿದೆ. 2019ರ ಅಂತ್ಯದಲ್ಲೇ ಷೇರು ಬೆಲೆ 1 ರೂ. ಆಸುಪಾಸಿನಲ್ಲಿತ್ತು. ಮೂರು ವರ್ಷಗಳಲ್ಲಿ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಆಗಿ ಪರಿವರ್ತನೆ ಹೊಂದಿದೆ.

ಇದನ್ನೂ ಓದಿ: Multibagger Penny Stock: ಒಂದು ಲಕ್ಷ ಹೂಡಿಕೆ, ಎರಡೇ ವರ್ಷಗಳಲ್ಲಿ 2.46 ಕೋಟಿ ರಿಟರ್ನ್ಸ್; ಈ ಪೆನ್ನಿ ಸ್ಟಾಕ್ ಪವಾಡ ಸೃಷ್ಟಿಸಿದೆ ನೋಡಿ

2023ರ ಜನವರಿ 23ರಂದು ಬಿಎಸ್​​ಇಯಲ್ಲಿ ಡೀಪ್ ಡೈಮಂಡ್ ಇಂಡಿಯಾ ಷೇರುಗಳನ್ನು 1:10 ಅನುಪಾತದಲ್ಲಿ ವಿಂಗಡಿಸಲಾಯಿತು. ಪರಿಣಾಮವಾಗಿ ಒಂದು ಷೇರು ಹೊಂದಿದ್ದವರ ಷೇರುಗಳ ಸಂಖ್ಯೆ 10 ಆಗಿ ಪರಿವರ್ತನೆಗೊಂಡಿತು.

1 ಲಕ್ಷ ರೂ. ಹೂಡಿಕೆಗೆ 2.4 ಕೋಟಿ ರೂ. ರಿಟರ್ನ್ಸ್!

ಮೂರು ವರ್ಷಗಳ ಹಿಂದೆ ಷೇರಿನ ಬೆಲೆ 1 ರೂ. ಇತ್ತು. ಪ್ರಸ್ತುತ 24.60 ರೂ. ಆಗಿದೆ. ಮೂರು ವರ್ಷಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿ 1 ಲಕ್ಷ ಷೇರುಗಳನ್ನು ಖರೀದಿಸಿದ್ದವರ ಷೇರುಗಳ ಸಂಖ್ಯೆ, ಷೇರು ವಿಂಗಡಣೆಯ ಬಳಿಕ 10 ಲಕ್ಷ ಆಯಿತು. ಈಗ ಷೇರಿನ ಮುಖಬೆಲೆ 24.60 ರೂ. ಆದ ಕಾರಣ 10 ಲಕ್ಷ ಷೇರುಗಳಿಗೆ ಒಟ್ಟು 2.46 ಕೋಟಿ ರೂ. ದೊರೆತಂತಾಯಿತು.

ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಈ ಮಲ್ಟಿಬ್ಯಾಗರ್ ಷೇರುದಾರ ಕಂಪನಿಯ ಮಾರುಕಟ್ಟೆ ಬಂಡವಾಳ 118 ಕೋಟಿ ರೂ. ಇದ್ದು, ಷೇರಿನ ವಹಿವಾಟು 52 ವಾರಗಳ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ