ವಾಯುಪ್ರದೇಶ ನಿರ್ಬಂಧ: ಪಾಕಿಸ್ತಾನಕ್ಕೆ ಆದಾಯ ನಷ್ಟ; ಭಾರತೀಯರಿಗೆ ವಿಮಾನ ಪ್ರಯಾಣ ದರ ಏರಿಕೆ

Effects of Pakistan Airspace Ban: ಪಾಕಿಸ್ತಾನದಿಂದ ಭಾರತೀಯ ವಿಮಾನಗಳಿಗೆ ವಾಯುಪ್ರದೇಶದ ಪ್ರವೇಶ ನಿರ್ಬಂಧಿಸಿರುವುದರಿಂದ ಭಾರತೀಯರಿಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ದರಗಳು ಏರಿಕೆಯಾಗುತ್ತಿವೆ. ಪರ್ಯಾಯ ಮಾರ್ಗಗಳನ್ನು ಬಳಸುವುದರಿಂದ ಇಂಧನ ವೆಚ್ಚ ಹೆಚ್ಚಾಗುವುದೇ ಇದಕ್ಕೆ ಕಾರಣ. ಇದರಿಂದ ಭಾರತೀಯ ವಿಮಾನಯಾನ ಕಂಪನಿಗಳಿಗೆ ಮಾತ್ರವಲ್ಲದೇ ಪಾಕಿಸ್ತಾನಕ್ಕೂ ಆರ್ಥಿಕ ನಷ್ಟವಾಗುತ್ತದೆ. ಪಾಕಿಸ್ತಾನವು ಓವರ್‌ಫ್ಲೈಟ್ ಶುಲ್ಕದಿಂದ ದೊಡ್ಡ ಪ್ರಮಾಣದ ಆದಾಯವನ್ನು ಕಳೆದುಕೊಳ್ಳುತ್ತದೆ.

ವಾಯುಪ್ರದೇಶ ನಿರ್ಬಂಧ: ಪಾಕಿಸ್ತಾನಕ್ಕೆ ಆದಾಯ ನಷ್ಟ; ಭಾರತೀಯರಿಗೆ ವಿಮಾನ ಪ್ರಯಾಣ ದರ ಏರಿಕೆ
ವಿಮಾನ

Updated on: Apr 27, 2025 | 12:30 PM

ನವದೆಹಲಿ, ಏಪ್ರಿಲ್ 27: ಭಾರತದಿಂದ ಬರುವ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯು ಪ್ರದೇಶದ (Pakistan Airspace) ಮೇಲೆ ಹಾರದಂತೆ ಪ್ರವೇಶ ನಿರ್ಬಂಧಿಸಿರುವುದು ಭಾರತದ ಕೆಲ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಗಳ ದರ ಏರಿಕೆ ಆಗುವಂತೆ ಮಾಡುತ್ತದೆ. ಪಹಲ್ಗಾಂ ಉಗ್ರ ದಾಳಿ ಘಟನೆ ಬಳಿಕ ಸಿಂಧೂ ಜಲ ಒಪ್ಪಂದವನ್ನು (Sindhu Water Treaty) ಭಾರತ ರದ್ದುಗೊಳಿಸಿರುವುದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೈಗೊಂಡ ಪ್ರತೀಕಾರ ಕ್ರಮಗಳಲ್ಲಿ ಇದೂ ಒಂದು. ಆದರೆ, ಅದರ ಈ ಕ್ರಮದಿಂದ ಭಾರತೀಯ ವಿಮಾನ ಕಂಪನಿಗಳಿಗೂ ನಷ್ಟ, ಪಾಕಿಸ್ತಾನಕ್ಕೂ ನಷ್ಟವಾಗುತ್ತದೆ.

ಭಾರತೀಯ ಏರ್ಲೈನ್ ಕಂಪನಿಗಳಿಗೆ ಆಗುವ ನಷ್ಟ ಏನು?

ಭಾರತದಿಂದ ಹೋಗುವ ಹಲವು ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳು ಪಾಕಿಸ್ತಾನದ ವಾಯು ಪ್ರದೇಶದ ಮೇಲೆ ಹೋಗುತ್ತವೆ. ಪಶ್ಚಿಮ ಏಷ್ಯಾ, ಐರೋಪೀಯ ದೇಶಗಳನ್ನು ತಲುಪಲು ಇದು ಹತ್ತಿರದ ಮಾರ್ಗವಾಗುತ್ತದೆ. ಇಲ್ಲದಿದ್ದರೆ ಪರ್ಯಾಯ ಮಾರ್ಗಗಳಲ್ಲಿ ಹೋಗಬೇಕು. ಇಂಥ ಕೆಲ ಮಾರ್ಗಗಳು ಬಳಸು ಮಾರ್ಗಗಳಾಗಿರುತ್ತವೆ. ದೆಹಲಿಯಿಂದ ಹೊರಡುವ ಫ್ಲೈಟ್​​ಗಳು ನೈಋತ್ಯ ದಿಕ್ಕಿಗೆ ಬಂದು ಅಲ್ಲಿಂದ ಓಮನ್, ದುಬೈ ಹಾಗೂ ಇತರೆಡೆಗೆ ಹೋಗತೊಡಗಿವೆ.

ಯೂರೋಪ್, ಅಮೆರಿಕಕ್ಕೆ ಹೋಗುವ ಇನ್ನೂ ಕೆಲ ಫ್ಲೈಟ್​​ಗಳು ತುರ್ಕ್​​ಮೆನಿಸ್ತಾನ, ಉಜ್ಬೆಕಿಸ್ತಾನದಂಥ ಸೆಂಟ್ರಲ್ ಏಷ್ಯನ್ ದೇಶಗಳ ಮೇಲೆ ಹೋಗಿ ಅಲ್ಲಿಂದ ತನ್ನ ಡೆಸ್ಟಿನೇಶನ್ ತಲುಪುತ್ತವೆ.

ಇದನ್ನೂ ಓದಿ
ಪಹಲ್ಗಾಮ್ ದಾಳಿಗೆ ಪುರಾವೆ ಕೇಳಿದ ಶಾಹಿದ್ ಅಫ್ರಿದಿ
ಕೇವಲ ನೀರಿಗಾಗಿ ಅಲ್ಲ, ಔಷಧಿಗಾಗಿಯೂ ಹಾತೊರೆಯಲಿದೆ ಪಾಕಿಸ್ತಾನ
ದಕ್ಷಿಣ ಏಷ್ಯಾದ ನಂ. 1 ಆಗಿದ್ದ ಪಾಕಿಸ್ತಾನ ಭಿಕಾರಿ ಆದ ಕಥೆ
ಭಾರತ-ಪಾಕಿಸ್ತಾನದ ಮಿಲಿಟರಿ ಬಲ ಹೇಗಿದೆ?

ಇದನ್ನೂ ಓದಿ: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು

ಇವು ತುಸು ಬಳಸು ಮಾರ್ಗಗಳಾದ್ದರಿಂದ ಸಹಜವಾಗಿ ಇಂಧನ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ವಿಮಾನ ಪ್ರಮಾಣ ದರವನ್ನು ಏರಿಸುವುದು ಅನಿವಾರ್ಯವಾಗುತ್ತದೆ. ಇದು ವಿಮಾನ ಕಂಪನಿಗಳ ಆದಾಯಕ್ಕೂ ಸಂಚಕಾರಿ ಹಾಗೂ ಪ್ರಯಾಣಿಕರಿಗೂ ಸಂಚಕಾರಿ ಎನಿಸುವ ಬೆಳವಣಿಗೆ.

ವಾಯು ಪ್ರದೇಶ ನಿರ್ಬಂಧಿಸುವುದರಿಂದ ಪಾಕಿಸ್ತಾನಕ್ಕೆ ಏನು ನಷ್ಟ?

ಯಾವುದೇ ವಿಮಾನವು ಒಂದು ದೇಶದ ವಾಯುಪ್ರದೇಶದ ಮೇಲೆ ಹೋದರೆ, ಆ ದೇಶಕ್ಕೆ ಓವರ್​​ಫ್ಲೈಟ್ ಫೀ ಅಥವಾ ನ್ಯಾವಿಗೇಶನ್ ಚಾರ್ಜ್ ಅನ್ನು ನೀಡುತ್ತದೆ. ಆ ಪ್ರದೇಶದ ಫ್ಲೈಟ್ ಟ್ರಾಫಿಕ್ ನಿರ್ವಹಣೆಗೆ ಆಗುವ ವೆಚ್ಚವನ್ನು ಭರಿಸಲು ಈ ಶುಲ್ಕವನ್ನು ಪಡೆಯಲಾಗುತ್ತದೆ.

ಭಾರತದಿಂದ ನಿತ್ಯವೂ ನೂರಾರು ವಿಮಾನಗಳು ಪಾಕಿಸ್ತಾನದ ವಾಯು ಭಾಗದ ಮೇಲೆ ಹೋಗುತ್ತಿದ್ದುವು. ನಿತ್ಯವೂ ಕೆಲ ಕೋಟಿ ರೂಗಳಷ್ಟು ಶುಲ್ಕವನ್ನು ಈ ವಿಮಾನಗಳು ಪಾಕಿಸ್ತಾನಕ್ಕೆ ಪಾವತಿಸುತ್ತಿದ್ದುವು.

ಇದನ್ನೂ ಓದಿ: ಯಾರ ಬಲ ಹೆಚ್ಚು? ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಶಕ್ತಿಗಳ ಒಂದು ಹೋಲಿಕೆ

2019ರಲ್ಲಿ ಬಾಲಾಕೋಟ್ ಏರ್​​ಸ್ಟ್ರೈಕ್ ಆದ ಬಳಿಕ ಪಾಕಿಸ್ತಾನವೂ ಇದೇ ರೀತಿ ಭಾರತೀಯ ವಿಮಾನಗಳಿಗೆ ಪ್ರವೇಶ ನಿರ್ಬಂಧ ಹಾಕಿತ್ತು. ಆಗ ಐದು ತಿಂಗಳಲ್ಲಿ ಪಾಕಿಸ್ತಾನಕ್ಕೆ 100 ಮಿಲಿಯನ್ ಡಾಲರ್ ಆದಾಯ ಕೈತಪ್ಪಿತ್ತು. ಅಂದರೆ, ಸರಾಸರಿಯಾಗಿ ಒಂದು ದಿನದಲ್ಲಿ 6,50,000 ಡಾಲರ್ ಆದಾಯವನ್ನು ಪಾಕಿಸ್ತಾನ ಕಳೆದುಕೊಂಡಿತ್ತು.

ಆರು ವರ್ಷದ ಬಳಿಕ ಈಗ ಭಾರತದಿಂದ ಆಪರೇಟ್ ಆಗುವ ವಿಮಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈಗ ಪಾಕಿಸ್ತಾನಕ್ಕೆ ಆಗುವ ಆದಾಯ ನಷ್ಟ ಇನ್ನೂ ಹೆಚ್ಚಿರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ