ನವದೆಹಲಿ: 1 ಲಕ್ಷ ರೂಪಾಯಿ ಮೇಲ್ಪಟ್ಟು ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದಲ್ಲಿ ವಾರ್ಷಿಕ ಬಡ್ಡಿ ದರ ಶೇ 6 ದೊರೆಯುತ್ತದೆ ಎಂದು ಸೋಮವಾರ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಘೋಷಣೆ ಮಾಡಿದೆ. ದಿನದ ಕೊನೆಗೆ ಪೇಮೆಂಟ್ಸ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹೆಚ್ಚಿನ ಹಣ ಇಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿದ ಮೇಲೆ, 2 ಲಕ್ಷ ರೂಪಾಯಿಗೆ ಉಳಿತಾಯ ಖಾತೆ ಮೊತ್ತವನ್ನು ಹೆಚ್ಚಿಸಿದ ಮೊದಲ ಪೇಮೆಂಟ್ಸ್ ಬ್ಯಾಂಕ್ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ಗೆ 5.5 ಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರು ಇದ್ದಾರೆ. 1 ಲಕ್ಷ ರೂಪಾಯಿ ತನಕದ ಠೇವಣಿಗೆ ವಾರ್ಷಿಕ ಬಡ್ಡಿ ದರ ಶೇ 2.5 ಇದೆ.
1 ಲಕ್ಷ ರೂಪಾಯಿ ಮೇಲ್ಪಟ್ಟ ಠೇವಣಿ ಮೊತ್ತಕ್ಕೆ ಹೆಚ್ಚಿನ ಬಡ್ಡಿ ದರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಸಿಇಒ ಅನುಬ್ರತ ಬಿಸ್ವಾಸ್ ಮಾತನಾಡಿ, ಆರ್ಬಿಐನಿಂದ ಉಳಿತಾಯ ಠೇವಣಿ ಮೊತ್ತದ ಮಿತಿಯನ್ನು ಏರಿಸಿದ್ದು ಪೇಮೆಂಟ್ಸ್ ಬ್ಯಾಂಕ್ಗಳ ಪಾಲಿಗೆ ಪ್ರಮುಖ ಮೈಲುಗಲ್ಲು. ಇದು ಗ್ರಾಹಕರಿಂದ ಕೇಳಿಬರುತ್ತಿದ್ದ ಬೇಡಿಕೆಯಾಗಿತ್ತು ಎಂದಿದ್ದಾರೆ. ಒಂದು ಲಕ್ಷ ಮೇಲ್ಪಟ್ಟ ಠೇವಣಿ ಮೊತ್ತಕ್ಕೆ “ಆಕರ್ಷಕ” ಬಡ್ಡಿದರದೊಂದಿಗೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಿಂದ ಇನ್ನಷ್ಟು ಹೆಚ್ಚು ಪ್ರತಿಫಲ ದೊರೆಯುತ್ತದೆ ಎಂದು ಸೇರಿಸಿದ್ದಾರೆ.
ನಮ್ಮದು 5,00,000 ಬ್ಯಾಂಕಿಂಗ್ ಪಾಯಿಂಟ್ಸ್ಗಳಿದ್ದು, ಜಾಗತಿಕವಾಗಿ ಮೊದಲ ಸುರಕ್ಷಿತ ಮತ್ತು ಸರಳ ಅನುಭವವನ್ನು ಡಿಜಿಟಲ್ ಆಗಿ ನೀಡುತ್ತದೆ. ನಗರದ ಡಿಜಿಟಲ್ ಮತ್ತು ಗ್ರಾಮೀಣ ಪ್ರದೇಶದ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಉತ್ತಮ ಸೇವೆ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಗ್ರಾಹಕರು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಕೆಲವೇ ನಿಮಿಷದಲ್ಲಿ ತೆರೆಯಬಹುದು. ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿ ಖಾತೆ ತೆರೆಯಬಹುದು.
ಬ್ಯಾಂಕ್ನಿಂದ ಡಿಜಿಟಲ್ ಸೇವಿಂಗ್ಸ್- ರಿವಾರ್ಡ್ಸ್123 ಇದ್ದು, ಖಾತೆಯನ್ನು ಬಳಸಿ, ಡಿಜಿಟಲ್ ವಹಿವಾಟು ಮಾಡಿದಾಗ ಹೆಚ್ಚಿನ ಅನುಕೂಲ ಆಗುತ್ತದೆ.
ಇದನ್ನೂ ಓದಿ: ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನಿಂದ ಹೊಸ ಉಳಿತಾಯ ಖಾತೆ ರಿವಾರ್ಡ್ಸ್123 ಘೋಷಣೆ
ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ
(Airtel payments bank announced 6% pa interest to savings account for deposits above 1 lakhs)