Unlimited 5G: 4ಜಿ ಬೆಲೆಗೆ ಏರ್​ಟೆಲ್ ಅನ್​ಲಿಮಿಟೆಡ್ 5ಜಿ; ಭರ್ಜರಿ ಆಫರ್ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Airtel 5G Offer Details: ದೇಶಾದ್ಯಂತ 5ಜಿ ನೆಟ್ವರ್ಕ್ ಅಳವಡಿಸುತ್ತಿರುವ ಏರ್​ಟೆಲ್ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ 5ಜಿ ಸೇವೆಯ ರುಚಿ ಉಣಿಸುವ ಸಲುವಾಗಿ ಭರ್ಜರಿ ಆಫರ್ ಕೊಟ್ಟಿದೆ. 4ಜಿ ದರದಲ್ಲೇ 5ಜಿ ಸೇವೆ ನೀಡುತ್ತಿದೆ. ಬಹಳ ಸರಳ ವಿಧಾನದಲ್ಲಿ ನೀವು ಏರ್​ಟೆಲ್ 5ಜಿ ಸೇವೆ ಪಡೆಯಬಹುದು.

Unlimited 5G: 4ಜಿ ಬೆಲೆಗೆ ಏರ್​ಟೆಲ್ ಅನ್​ಲಿಮಿಟೆಡ್ 5ಜಿ; ಭರ್ಜರಿ ಆಫರ್ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಏರ್​ಟೆಲ್ 5ಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2023 | 11:02 AM

ಭಾರತದಲ್ಲಿ 4ಜಿ ಬಹಳ ಕಡಿಮೆ ದರದಲ್ಲಿ ಸಿಗುತ್ತಿರುವಂತೆ 5ಜಿ ಇರುವುದಿಲ್ಲ. ಇನ್ನೂ ಬಹಳ ಹೆಚ್ಚು ಬೆಲೆ ತೆರಬೇಕು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಭಾರ್ತಿ ಏರ್ಟೆಲ್ (Bharti Airtel) ತನ್ನ ಗ್ರಾಹಕರಿಗೆ 5ಜಿ ಸೌಲಭ್ಯವನ್ನು (Airtel 5G) ಕಡಿಮೆ ಬೆಲೆ ನೀಡುವ ಆಫರ್​ವೊಂದನ್ನು ಕೊಟ್ಟಿದೆ. ಅನ್​ಲಿಮಿಟೆಡ್ 4ಜಿ ಸಿಗುವಷ್ಟೇ ದರದಲ್ಲಿ ಅನ್​ಲಿಮಿಟೆಡ್ 5ಜಿ (Unlimited Airtel 5G) ಆಫರ್ ಅನ್ನು ಏರ್ಟೆಲ್ ನೀಡಿದೆ. ಇದು ಪೋಸ್ಟ್ ಪೇಡ್ ಮತ್ತು ಪ್ರೀಪೇಡ್ ಒಳಗೊಂಡಂತೆ ಎಲ್ಲಾ ಏರ್​ಟೆಲ್ ಗ್ರಾಹಕರಿಗೂ ಲಭ್ಯ ಇರುವ ಆಫರ್. ಈ ಆಫರ್ ಪಡೆಯಲು ಈ ವಿಧಾನ ಅನುಸರಿಸಿ:

ಏರ್​ಟೆಲ್ ಅನ್​ಲಿಮಿಟೆಡ್ 5ಜಿ ಡೇಟಾ ಪಡೆಯುವ ವಿಧಾನ:

  • ಏರ್​ಟೆಲ್ ಥ್ಯಾಂಕ್ಸ್ ಆ್ಯಪ್ (Airtel Thanks) ತೆರೆಯಿರಿ. ಈ ಆ್ಯಪ್ ಇಲ್ಲದಿದ್ದರೆ ಡೌನ್​ಲೋಡ್ ಮಾಡಿಕೊಂಡು ತೆರೆಯಿರಿ
  • ಅಲ್ಲಿ ಕೆಳಗೆ ಸ್ಕ್ರಾಲ್ ಮಾಡಿದರೆ ‘ಕ್ಲೈಮ್ ಅನ್​ಲಿಮಿಟೆಡ್ 5ಜಿ ಡೇಟಾ ಬ್ಯಾನರ್’ (Claim Unlimited 5G Data Banner) ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ
  • ಈಗ ಅನ್​ಲಿಮಿಟೆಡ್ 5ಜಿ ಡೇಟಾ ಪುಟ (Unlimited 5G Data page) ತೆರೆದುಕೊಳ್ಳುತ್ತದೆ.
  • ಕ್ಲೈಮ್ ನೌ (Claim Now) ಬಟನ್ ಮೇಲೆ ಕ್ಲಿಕ್ ಮಾಡಿ

ಇಷ್ಟು ಮಾಡಿದರೆ ಸಾಕು ನಿಮಗೆ ಅನ್​ಲಿಮಿಟೆಡ್ 5ಜಿ ಡೇಟಾ ಸೌಲಭ್ಯ ಆ್ಯಕ್ಟಿವೇಟ್ ಆಗಿ ಹೋಗುತ್ತದೆ. ಇದನ್ನು ಖಚಿತಪಡಿಸಲು ಏರ್​ಟೆಲ್​ನಿಂದ ನಿಮ್ಮ ಮೊಬೈಲ್ ನಂಬರ್​ಗೆ ಎಸ್ಸೆಮ್ಮೆಸ್ ಮೆಸೇಜ್ ಕೂಡ ಬರುತ್ತದೆ. ನೀವು ಹೆಚ್ಚಿನ ಬೆಲೆ ನೀಡದೇ ಅಪರಿಮಿತವಾಗಿ 5ಜಿ ಸೇವೆ ಪಡೆಯಬಹುದು. ಅದೂ 4ಜಿ ದರದಲ್ಲೇ.

ಇದನ್ನೂ ಓದಿPPF Account: ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?

ಅನ್​ಲಿಮಿಟೆಡ್ ಏರ್​ಟೆಲ್ 5ಜಿ ಕೆಲ ಪ್ರೀಪೇಡ್ ಗ್ರಾಹಕರಿಗೆ ಮಾತ್ರ;

ಏರ್ಟೆಲ್ ಸಂಸ್ಥೆ ನೀಡಿರುವ ಈ ಅನ್​ಲಿಮಿಟೆಡ್ 5ಜಿ ಡೇಟಾ ಆಫರ್ ಎಲ್ಲಾ ಪೋಸ್ಟ್ ಪೇಡ್ ಗ್ರಾಹಕರಿಗೆ ಲಭ್ಯ ಇದೆ. ಆದರೆ, ಪ್ರೀಪೇಡ್ ಗ್ರಾಹಕರೆಲ್ಲರಿಗೂ ಇದು ಇಲ್ಲ. ರು 455 ಮತ್ತು ರು 1,799 ಪ್ಲಾನ್​ಗಳನ್ನು ಹೊಂದಿರುವ ಪ್ರೀಪೇಡ್ ಗ್ರಾಹಕರಿಗೆ ಇದು ಸಿಗುವುದಿಲ್ಲ. ಇದು ಬಿಟ್ಟರೆ 239 ರುಪಾಯಿ ಹಾಗು ಅದಕ್ಕಿಂತ ಹೆಚ್ಚಿನ ದರಗಳ ಎಲ್ಲಾ ಪ್ಲಾನ್​ಗಳಿಗೂ ಈ ಆಫರ್ ಅನ್ವಯ ಆಗುತ್ತದೆ.

ಪೋಸ್ಟ್ ಪೇಡ್ ಗ್ರಾಹಕರು ಪ್ರತೀ ತಿಂಗಳು ಬಿಲ್ ಜನರೇಟ್ ಆಗುವ ವೇಳೆ ಈ ಆಫರ್ ಕ್ಲೇಮ್ ಮಾಡಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ: Government Scheme: ಎಸ್​ಸಿಎಸ್​ಎಸ್ ಸ್ಕೀಮ್​ನಿಂದ ಏನೇನು ಲಾಭ? ಈ ಯೋಜನೆಗಿರುವ ಬಡ್ಡಿ, ತೆರಿಗೆ ರಿಯಾಯಿತಿ ಇತ್ಯಾದಿ ವಿವರ ತಿಳಿಯಿರಿ

ಏರ್​ಟೆಲ್ 5ಜಿ ಎಲ್ಲರಿಗೂ ಸಿಗುತ್ತಾ?

ಏರ್​ಟೆಲ್ ಅನ್​ಲಿಮಿಟೆಡ್ 5ಜಿ ಆಫರ್ ಕೊಟ್ಟಿರುವುದಾದರೂ ಅದನ್ನು ಬಳಸಲು 5ಜಿ ಸಪೋರ್ಟ್ ಮಾಡುವ ಮೊಬೈಲ್ ನಿಮ್ಮಲ್ಲಿರಬೇಕು. ಜೊತೆಗೆ, ಈಗ 5ಜಿ ನೆಟ್ವರ್ಕ್ ಇರುವ ಪ್ರದೇಶದಲ್ಲಿ ನೀವಿರಬೇಕು. ಹಾಗಿದ್ದರೆ ಮಾತ್ರ ನೀವು 5ಜಿ ಡೇಟಾದ ಅಗಾಧ ವೇಗ ಮತ್ತು ಸೇವೆಯನ್ನು ಪಡೆಯಬಹುದು. ಇಲ್ಲದಿದ್ದರೆ 4ಜಿ ನೆಟ್ವರ್ಕ್ ಮಾತ್ರವೇ ನಿಮಗೆ ಸಿಗುತ್ತದೆ.

ಏರ್​ಟೆಲ್ ನಾನಾ ಕಡೆ 5ಜಿ ನೆಟ್ವರ್ಕ್ ಅಳವಡಿಸುತ್ತಿದೆ. ನೀವಿರುವ ಪ್ರದೇಶದಲ್ಲಿ 5ಜಿ ನೆಟ್ವರ್ಕ್ ಇದೆಯಾ ಎಂಬುದನ್ನು ಏರ್​ಟೆಲ್ ಥ್ಯಾಂಕ್ಸ್ ಆ್ಯಪ್​ನಿಂದ ತಿಳಿಯಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್