ಹಣಕಾಸು ವರ್ಷ 2021-22ರಲ್ಲಿ (FY22) ಎಲ್ಲ ಮುಖಬೆಲೆಯ ನಕಲಿ ನೋಟುಗಳು (Fake Notes) ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಹೇಳಿದೆ. ಕೇಂದ್ರೀಯ ಬ್ಯಾಂಕ್ ಇತ್ತೀಚಿನ ವರದಿಯ ಪ್ರಕಾರ, ನಕಲಿ ನೋಟುಗಳ ಹೆಚ್ಚಳವನ್ನು ಕಂಡ ಎಲ್ಲ ನೋಟುಗಳ ಪೈಕಿ 500 ರೂಪಾಯಿ ನೋಟುಗಳ ಪ್ರಮಾಣ ಹೆಚ್ಚು. ಕಳೆದ ವರ್ಷಕ್ಕೆ ಹೋಲಿಸಿದರೆ, 500 ರೂಪಾಯಿ ಮುಖಬೆಲೆಯ ಶೇ 101.9ರಷ್ಟು ಹೆಚ್ಚು ನಕಲಿ ನೋಟುಗಳನ್ನು ಆರ್‌ಬಿಐ ಪತ್ತೆಹಚ್ಚಿದೆ ಮತ್ತು ರೂ. 2,000 ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ 54.16ರಷ್ಟು ಹೆಚ್ಚಳವಾಗಿದೆ. 500 ರೂಪಾಯಿ ನೋಟಿನ ಸತ್ಯಾಸತ್ಯತೆ ನೀವು ಹೇಗೆ ತಿಳಿಯಬಹುದು ಎಂಬುದು ಇಲ್ಲಿದೆ.
1. ಕರೆನ್ಸಿ ನೋಟಿನ ಮೇಲೆ ಬೆಳಕು ಚೆಲ್ಲಿದರೆ ವಿಶೇಷ ಸ್ಥಳಗಳಲ್ಲಿ 500 ಬರೆದಿರುವುದನ್ನು ನೀವು ನೋಡಲು ಸಾಧ್ಯವಾಗುತ್ತದೆ.
2. ಕರೆನ್ಸಿ ನೋಟಿನ ಮೇಲೆ ದೇವನಾಗರಿಯಲ್ಲಿ 500 ಎಂದು ಬರೆಯಲಾಗಿರುತ್ತದೆ
3. ಮಹಾತ್ಮ ಗಾಂಧಿ ಫೋಟೋದ ದೃಷ್ಟಿಕೋನ ಮತ್ತು ಸಂಬಂಧಿತ ಸ್ಥಾನವು ಬಲಕ್ಕೆ ಬದಲಾಗುತ್ತದೆ.
4. ರೂ 500 ಕರೆನ್ಸಿ ನೋಟಿನ ಮೇಲೆ ಭಾರತ ಎಂದು ಬರೆಯಲಾಗಿರುತ್ತದೆ.
5. ಕರೆನ್ಸಿ ನೋಟು ಬಾಗಿಸಿದಾಗ, ಭದ್ರತಾ ತಲೆಯ ಬಣ್ಣವು ಹಸಿರು ಬಣ್ಣದಿಂದ ಇಂಡಿಗೊಗೆ ಬದಲಾಗುತ್ತದೆ.
6. ಗವರ್ನರ್ ಸಹಿ, ಗ್ಯಾರಂಟಿ ಷರತ್ತು, ಭರವಸೆ ಷರತ್ತು ಮತ್ತು ಆರ್‌ಬಿಐ ಲಾಂಛನವನ್ನು ಕರೆನ್ಸಿ ನೋಟಿನ ಬಲಕ್ಕೆ ಸ್ಥಳಾಂತರಿಸಲಾಗಿದೆ
7. ಕರೆನ್ಸಿ ನೋಟಿನ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಮತ್ತು ಎಲೆಕ್ಟ್ರೋಟೈಪ್ ವಾಟರ್‌ಮಾರ್ಕ್ ಇದೆ.
8. ನೋಟಿನ ಮೇಲೆ ಬರೆದಿರುವ 500 ರೂ.ಗಳ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
9. ಕರೆನ್ಸಿ ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭ
10. ಮುದ್ರಿತ ಸ್ವಚ್ಛ ಭಾರತ ಲಾಂಛನ ಮತ್ತು ಘೋಷಣೆ
2000 ರೂಪಾಯಿ ಕರೆನ್ಸಿ ನೋಟುಗಳ ಸಂಖ್ಯೆ ಇಳಿಕೆಯಾಗುತ್ತಲೇ ಇದೆ
2000 ರೂಪಾಯಿ ಮುಖಬೆಲೆಯ ಬ್ಯಾಂಕ್ ನೋಟುಗಳ ಸಂಖ್ಯೆಯು ವರ್ಷಗಳಲ್ಲಿ ಸ್ಥಿರವಾಗಿ 214 ಕೋಟಿ ಅಥವಾ ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ನೋಟುಗಳ ಶೇಕಡಾ 1.6ರಷ್ಟು ಕಡಿಮೆಯಾಗಿದೆ.
ಮಾರ್ಚ್ 2020ರ ಅಂತ್ಯದ ವೇಳೆಗೆ, ಚಲಾವಣೆಯಲ್ಲಿರುವ ರೂ. 2000 ಮುಖಬೆಲೆಯ ನೋಟುಗಳ ಸಂಖ್ಯೆ 274 ಕೋಟಿಯಷ್ಟಿತ್ತು. ಇದು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ನೋಟುಗಳ ಶೇಕಡಾ 2.4ರಷ್ಟಿತ್ತು. ಈ ಎಣಿಕೆಯು ಮಾರ್ಚ್ 2021ರ ಹೊತ್ತಿಗೆ ಚಲಾವಣೆಯಲ್ಲಿರುವ ಒಟ್ಟು ಬ್ಯಾಂಕ್ ನೋಟುಗಳ 245 ಕೋಟಿ ಅಥವಾ ಶೇಕಡಾ 2ಕ್ಕೆ ಇಳಿದಿದೆ ಮತ್ತು ಕಳೆದ ಆರ್ಥಿಕ ವರ್ಷದ ಕೊನೆಯಲ್ಲಿ 214 ಕೋಟಿ ಅಥವಾ ಶೇಕಡಾ 1.6ಕ್ಕೆ ಕುಸಿಯಿತು.
ರೂ. 500 ನೋಟುಗಳು
ವರದಿಯ ಪ್ರಕಾರ, ಚಲಾವಣೆಯಲ್ಲಿರುವ 500 ರೂ. ಮುಖಬೆಲೆಯ ನೋಟುಗಳ ಸಂಖ್ಯೆ ಈ ವರ್ಷದ ಮಾರ್ಚ್ ಅಂತ್ಯಕ್ಕೆ 4,554.68 ಕೋಟಿಗೆ ಏರಿದ್ದು, ಹಿಂದಿನ ವರ್ಷದ ಅವಧಿಯಲ್ಲಿ 3,867.90 ಕೋಟಿ ಇತ್ತು.
“ಪರಿಮಾಣದಲ್ಲಿ (ವಾಲ್ಯೂಮ್) ರೂ. 500 ಮುಖಬೆಲೆಯ ಶೇಕಡಾ 34.9 ರಷ್ಟು ಅತ್ಯಧಿಕ ಪಾಲನ್ನು ಹೊಂದಿದ್ದು, ಆ ನಂತರ ರೂ. 10 ಮುಖಬೆಲೆಯ ಬ್ಯಾಂಕ್ ನೋಟುಗಳು ಮಾರ್ಚ್ 31, 2022 ರಂತೆ ಚಲಾವಣೆಯಲ್ಲಿರುವ ಒಟ್ಟು ಬ್ಯಾಂಕ್ ನೋಟುಗಳಲ್ಲಿ ಶೇ 21.3ರಷ್ಟಿದೆ,” ಎಂದು 2021-22ರ ವಾರ್ಷಿಕ ವರದಿ ಶುಕ್ರವಾರ ಬಿಡುಗಡೆ ಮಾಡಿದೆ.
ರೂ. 500 ಮುಖಬೆಲೆಯ ನೋಟುಗಳು ಮಾರ್ಚ್ 2021ರ ಅಂತ್ಯದ ವೇಳೆಗೆ ಶೇ 31.1ರ ಪಾಲನ್ನು ಮತ್ತು ಮಾರ್ಚ್ 2020ರ ವೇಳೆಗೆ ಶೇ 25.4ರಷ್ಟನ್ನು ಹೊಂದಿವೆ. ಮೌಲ್ಯದ ಪರಿಭಾಷೆಯಲ್ಲಿ, ಈ ನೋಟುಗಳು ಮಾರ್ಚ್ 2020ರಿಂದ ಮಾರ್ಚ್ 2022ರ ವರೆಗೆ ಶೇಕಡಾ 60.8ರಿಂದ ಶೇಕಡಾ 73.3ಕ್ಕೆ ಏರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ