ಅಮೆಜಾನ್ ತನ್ನ 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ಬುಧವಾರ ಸಿಬ್ಬಂದಿಗೆ ಮೆಮೊದಲ್ಲಿ ಘೋಷಿಸಿದ್ದಾರೆ. ಇದು ಕಂಪನಿಯ ವಾರ್ಷಿಕ ಯೋಜನೆಯ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಅಂದರೆ 2022ರಿಂದ ದೈತ್ಯ ಕಂಪನಿಗಳಿಂದ ಈ ರೀತಿಯ ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಇದರ ಪರಿಣಾಮ ಸುಮಾರು 10,000 ಜನರ ಮೇಲೆ ಬೀರುವ ನಿರೀಕ್ಷೆಯಿದೆ. ಈ ಉದ್ಯೋಗ ವಜಾಗೊಳಿಸುವ ಪ್ರಕ್ರಿಯೆ ಸಂಸ್ಥೆಯ ಕಾರ್ಪೊರೇಟ್ ಶ್ರೇಣಿಗಳಲ್ಲಿ ಕೇಂದ್ರೀಕೃತವಾಗಿದೆ, ಹೆಚ್ಚಾಗಿ Amazon ನ ಚಿಲ್ಲರೆ ವಿಭಾಗ ಮತ್ತು ನೇಮಕಾತಿಯಂತಹ ಮಾನವ ಸಂಪನ್ಮೂಲ ವಿಭಾಗಗಳ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡಿದೆ.
ಅಮೆಜಾನ್ ಕಂಪನಿಯು ಅನಿಶ್ಚಿತ ಮತ್ತು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಆ ಕಾರಣದಿಂದ ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ. ಇದರಿಂದ ಕಂಪನಿಗೆ ಆಗಿರುವ ನಷ್ಟ ಮತ್ತು ಹೊರೆಯನ್ನು ಕಡಿಮೆ ಮಾಡಲು ಈ ಕಾರ್ಯದಿಂದ ಮಾತ್ರ ಸಾಧ್ಯ ಎಂದು ಸಂಸ್ಥೆಯು ಈ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ವಜಾಗೊಳಿಸುವ ಪ್ರಕ್ರಿಯೆಯು ಅಮೆಜಾನ್‌ನಲ್ಲಿ ತಿಂಗಳುಗಟ್ಟಲೆಯಿಂದ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಕಂಪನಿಯು ಹಲವಾರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದೆ ಎಂದು ಕಂಪನಿಯು ಹೇಳಿದೆ. ಈ ಕಾರಣದಿಂದ ಕಂಪನಿಯ ನಷ್ಟವನ್ನು ಕಡಿಮೆ ಮಾಡಲು ಮತ್ತು ಕಂಪನಿಯ ದೃಷ್ಟಿಕೋನವು ಕತ್ತಲೆಯಾಗಿರುವ ಕಾರಣ. ಈಗ ಅಮೆಜಾನ್ ವಜಾಗೊಳಿಸಿದ ಇತರ ಟೆಕ್ ಕಂಪನಿಗಳ ಸಾಲಿಗೆ ಈ ಕಂಪನಿಯು ಸೇರುತ್ತದೆ. ಹಿಂದಿನ ಬುಧವಾರ, ಸೇಲ್ಸ್‌ಫೋರ್ಸ್ ಇಂಕ್ ತನ್ನ 10% ದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಅಮೆಜಾನ್ ಹೂಡಿಕೆದಾರರು ಈ ವಿಚಾರಕ್ಕೆ ಸಂಬಂಧಿಸಿದಂತೆ, ಕಠಿಣ ಕ್ರಮಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು, ಇದು ಇ-ಕಾಮರ್ಸ್ ಕಂಪನಿಯಲ್ಲಿ ಲಾಭವನ್ನು ಹೆಚ್ಚಿಸಬಹುದು. ವಾಲ್ ಸ್ಟ್ರೀಟ್ ಜರ್ನಲ್ ಈ ರೀತಿಯ ಕ್ರಮವನ್ನು ಕೈಗೊಂಡ ನಂತರ ಷೇರುಗಳು ತಡವಾದ ವಹಿವಾಟಿನಲ್ಲಿ ಸುಮಾರು 2% ರಷ್ಟು ಏರಿತು.
ಪ್ರಸ್ತುತ ವಜಾಗೊಳಿಸಿದ ಕಂಪನಿಗಳಲ್ಲಿ ಅಮೆಜಾನ್ ಕೂಡ ದೊಡ್ಡ ಪಾತ್ರವನ್ನು ವಹಿಸಿದೆ. 18,000 ಕಾರ್ಮಿಕರನ್ನು ತೆಗೆಯುವ ಮೂಲಕ ಇದು ದೊಡ್ಡ ಕಡಿತವಾಗಿದೆ, ಆದರೆ ಅಮೆಜಾನ್ ಸಿಲಿಕಾನ್ ವ್ಯಾಲಿಗಿಂತ ದೊಡ್ಡಮಟ್ಟದ ಉದ್ಯೋಗಿಗಳನ್ನು ಹೊಂದಿದೆ. ಇದು ಸೆಪ್ಟೆಂಬರ್ ಅಂತ್ಯದ ವೇಳೆಗೆ 1.5 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು, ಇದೀಗ 1.5 ಮಿಲಿಯನ್ ಉದ್ಯೋಗಿಗಳಲ್ಲಿ 1% ಮಾತ್ರ ವಜಾಗೊಳಿಸಿದೆ.
ಇದನ್ನು ಓದಿ:Amazon: ಆಹಾರ ವಿತರಣೆ ಉದ್ಯಮವನ್ನೂ ಸ್ಥಗಿತಗೊಳಿಸಲಿದೆ ಅಮೆಜಾನ್
ಅಮೆಜಾನ್ ಈ ಬಗ್ಗೆ ನವೆಂಬರ್‌ನಲ್ಲಿ ಯೋಜನೆಯನ್ನು ಹಾಕಿಕೊಂಡಿತ್ತು. ಅಮೆಜಾನ್ ವಿಶ್ವಾದ್ಯಂತ ಸುಮಾರು 350,000 ಕಾರ್ಪೊರೇಟ್ ಉದ್ಯೋಗಿಗಳನ್ನು ಹೊಂದಿದೆ ಎಂದು ವಕ್ತಾರರು ಹೇಳಿದರು. ವಿಶ್ವದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಕಳೆದ ವರ್ಷದ ಅಂತ್ಯದ ವೇಳೆಗೆ ಇ-ಕಾಮರ್ಸ್ ಬೆಳವಣಿಗೆಯಲ್ಲಿ ಮಂದಗತಿಗೆ ಹೊಂದಿಕೊಂಡಿದೆ. ಏಕೆಂದರೆ ಶಾಪರ್‌ಗಳು ಕೋವಿಡ್ ಮೊದಲ ಅನುಸರಿಸಿದ ಕ್ರಮವನ್ನು ಮುಂದುವರಿಸಿಕೊಂಡಿದ್ದಾರೆ. ಅಮೆಜಾನ್ ಗೋದಾಮುಗಳು ಅಥವಾ ಶಾಖೆಗಳು ಕೂಡ ಕಡಿಮೆಯಾಗಿದೆ. ಇದರ ಜೊತೆಗೆ ನೇಮಕಾತಿಯನ್ನು ನಿಲ್ಲಿಸಿದೆ. ಈ ಕಾರಣದಿಂದ ವಜಾಗೊಳಿಸುವ ನಿರ್ಧಾರವನ್ನು ಮಾಡಲಾಗಿದೆ.
ಟೆಲಿಹೆಲ್ತ್ ಸೇವೆ, ಡೆಲಿವರಿ ರೋಬೋಟ್ ಮತ್ತು ಮಕ್ಕಳ ವೀಡಿಯೊ ಕರೆ ಮಾಡುವ ಸಾಧನ, ಇತರ ಯೋಜನೆಗಳಲ್ಲಿ ಕೆಲಸ ಮಾಡುವ ತಂಡಗಳು ಸೇರಿದಂತೆ ಪ್ರಾಯೋಗಿಕ ಮತ್ತು ಲಾಭದಾಯಕವಲ್ಲದ ವ್ಯವಹಾರಗಳನ್ನು Jassy ಮೊಟಕುಗೊಳಿಸಿದ್ದಾರೆ. ಆನ್‌ಲೈನ್ ಪುಸ್ತಕದಂಗಡಿಯಾಗಿ ಪ್ರಾರಂಭವಾದ ಅಮೆಜಾನ್ ತನ್ನ ವ್ಯವಹಾರದ ಕೆಲವು ಭಾಗಗಳನ್ನು ಕಡಿಮೆ ಮಾಡುತ್ತಿದೆ. ಆದರೆ ಇದು ತನ್ನ ಕ್ಲೌಡ್-ಕಂಪ್ಯೂಟಿಂಗ್ ಮತ್ತು ಜಾಹೀರಾತು ವ್ಯವಹಾರಗಳಲ್ಲಿ ಮತ್ತು ವೀಡಿಯೊ ಸ್ಟ್ರೀಮಿಂಗ್‌ನಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Thu, 5 January 23