ಅಮೆಜಾನ್ ಇಂಡಿಯಾದಿಂದ (Amazon India) ಇಂದು (ಜುಲೈ 12, 2021) ‘ಆಪಲ್ ಡೇಸ್’ ಮಾರಾಟವನ್ನು (Apple Day Sale) ಪ್ರಕಟಿಸಿದ್ದು, ಇದು ಇತ್ತೀಚಿನ ಐಫೋನ್ 12 ಸರಣಿ, ಐಫೋನ್ 11 ಮತ್ತು ಹೆಚ್ಚಿನವುಗಳಿಗೆ ಡೀಲ್ ಮತ್ತು ಕೊಡುಗೆಗಳನ್ನು ನೀಡುತ್ತದೆ. ಮಾರಾಟಗಾರರಿಂದ ಉತ್ತಮ ಕೊಡುಗೆಗಳೊಂದಿಗೆ ಆಪಲ್ ಡೇಸ್ ಜುಲೈ 17ರ ವರೆಗೆ ಲೈವ್ ಆಗಿರುತ್ತದೆ. ಇತರ ಉತ್ಪನ್ನಗಳ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವಹಿವಾಟಿನಲ್ಲಿ ಗ್ರಾಹಕರು ₹ 6,000 ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಲು ಸಾಧ್ಯವಾಗುತ್ತದೆ.
* ಐಫೋನ್ 12 ಮೊಬೈಲ್ಫೋನ್ ರೂ. 72,900 ಬೆಲೆಯಲ್ಲಿ ರೂ. 7,000 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ.
* ಐಫೋನ್ 12 ಮಿನಿ ಫೋನ್ ರೂ. 66,400 ಬೆಲೆಯಲ್ಲಿ ರೂ. 3,500 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ.
* ಐಫೋನ್ 12 ಪ್ರೊ (128 ಜಿಬಿ) ರೂ. 1,15,100 ಬೆಲೆಯಲ್ಲಿ ರೂ. 4,800 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ.
* ಐಫೋನ್ 11 ರೂ. 51,999 ಬೆಲೆಯಲ್ಲಿ ರೂ. 1,999 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ.
* ಎಂ 1 ಚಿಪ್‌ಸೆಟ್ 8 ಜಿಬಿ RAM ಹೊಂದಿರುವ 2020ರ ಮ್ಯಾಕ್‌ಬುಕ್ ಪ್ರೊ 13 ಇಂಚಿನದು ರೂ 1,35,799ಕ್ಕೆ ಮಾರಾಟ ಆಗುತ್ತಿದೆ
* 16 ಜಿಬಿ RAMನೊಂದಿಗೆ 2019ರ ಮ್ಯಾಕ್‌ಬುಕ್ ಪ್ರೊ 16 ಇಂಚು, 512 ಜಿಬಿಗೆ ರೂ.1,85,659 ಬೆಲೆಯೊಂದಿಗೆ ರೂ. 14,241 ರಿಯಾಯಿತಿ ನೀಡಲಾಗುತ್ತಿದೆ.
* 2020ರ ಆಪಲ್ ಮ್ಯಾಕ್‌ಬುಕ್ ಏರ್ 10ನೇ ತಲೆಮಾರಿನ ಇಂಟೆಲ್ ಐ5 ಪ್ರೊಸೆಸರ್ನೊಂದಿಗೆ ರೂ.99,990 ಬೆಲೆಯಲ್ಲಿ ಮಾರಾಟ ಆಗುತ್ತಿದೆ.
ಈ ಮಧ್ಯೆ, ಅಮೆಜಾನ್ ಇಂಡಿಯಾವು ಜುಲೈ 26 (ಸೋಮವಾರ) ಮತ್ತು ಜುಲೈ 27 (ಮಂಗಳವಾರ) ರಂದು ಪ್ರೈಮ್ ಡೇ ಮಾರಾಟವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಇ-ಕಾಮರ್ಸ್ ವೆಬ್‌ಸೈಟ್ ಈಚೆಗೆ ತಿಳಿಸಿದೆ. ಅಮೆಜಾನ್ ಪ್ರೈಮ್ ಡೇ ಮಾರಾಟವು ಜುಲೈ 26ರಂದು ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು, ಅನೇಕ ವಿಭಾಗಗಳಲ್ಲಿ “ಬೆಸ್ಟ್ ಡೀಲ್ ಮತ್ತು ಉಳಿತಾಯ”ಗಳನ್ನು ದೊರಕಿಸುತ್ತದೆ. “ಉತ್ತಮ ವ್ಯವಹಾರಗಳು, ಬ್ಲಾಕ್ಬಸ್ಟರ್ ಮನರಂಜನೆ ಮತ್ತು ಹೊಸ ಬಿಡುಗಡೆಗಳು ಅಮೆಜಾನ್ ಪ್ರೈಮ್ ಡೇ ಜುಲೈ 26 ಮತ್ತು 27ಕ್ಕೆ ಸಿದ್ಧರಾಗಿ,” ಎಂದು ಅಮೆಜಾನ್ ಇಂಡಿಯಾ ಟ್ವಿಟ್ಟರ್ನಲ್ಲಿ ಪ್ರಕಟಿಸಿತ್ತು.
ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಎಂಐನೊಂದಿಗೆ ಶೇ 10ರಷ್ಟು ತಕ್ಷಣ ರಿಯಾಯಿತಿ ಇರುತ್ತದೆ. ಅಮೆಜಾನ್ ಪ್ರೈಮ್ ಸದಸ್ಯತ್ವವು ವರ್ಷಕ್ಕೆ 999 ರೂಪಾಯಿಗೆ ಅಥವಾ ಮೂರು ತಿಂಗಳ ಅವಧಿಗೆ ರೂ. 329ಕ್ಕೆ ಲಭ್ಯವಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ: Amazon Prime Day Sale: ಅಮೆಜಾನ್ ಇಂಡಿಯಾ ಪ್ರೈಮ್ ಡೇ ಮಾರಾಟ ಜುಲೈ 26, 27 ಏನೇನು ನಿರೀಕ್ಷಿಸಬಹುದು?
(Amazon India announced Apple day sale from today. It will be live till July 17th, 2021. Here is the offer details)