Amazon: ಅಮೆಜಾನ್​ ಕಂಪೆನಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಒಂದೇ ದಿನದಲ್ಲಿ 14.18 ಲಕ್ಷ ಕೋಟಿ ರೂಪಾಯಿ ಹೆಚ್ಚಳ

| Updated By: Srinivas Mata

Updated on: Feb 05, 2022 | 11:46 AM

ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಅಮೆಜಾನ್ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ಒಂದೇ ದಿನದಲ್ಲಿ 14.18 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Amazon: ಅಮೆಜಾನ್​ ಕಂಪೆನಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಒಂದೇ ದಿನದಲ್ಲಿ 14.18 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಫೇಸ್​ಬುಕ್​ (ಈಗ ಇದರ ಹೆಸರು Meta) ಕಂಪೆನಿಯ ಇತಿಹಾಸದಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಅತಿ ದೊಡ್ಡ ಪ್ರಮಾಣದ ನಷ್ಟವನ್ನು ದಾಖಲಿಸಿದ ನೆನಪು ಮಾಸುವ ಮುನ್ನವೇ ಅಮೆಜಾನ್ (Amazon) ಕಂಪೆನಿಯ ಇತಿಹಾಸದಲ್ಲೇ ಒಂದೇ ದಿನದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಆನ್​ಲೈನ್ ರೀಟೇಲ್ ಮತ್ತು ಕ್ಲೌಡ್ ಕಂಪ್ಯೂಂಟಿಂಗ್​ ಕಂಪೆನಿಯಾದ ಅಮೆಜಾನ್ ಷೇರು ಶುಕ್ರವಾರದಂದು (ಫೆಬ್ರವರಿ 4, 2022) ಶೇ 13.5ರಷ್ಟು ಬೆಲೆ ಏರಿಕೆ ದಾಖಲಿಸಿದೆ. ಅದ್ಭುತವಾದ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ ಬೆನ್ನಿಗೇ ಕಂಪೆನಿಯ ಷೇರುಗಳ ಬೆಲೆಯು ಗಗನಮುಖಿಯಾಗಿದೆ. ದಿನಾಂತ್ಯದ ವಹಿವಾಟಿನ ಹೊತ್ತಿಗೆ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 19,000 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 14,18,206.55 ಕೋಟಿ ಆಗುತ್ತದೆ.

14.18 ಲಕ್ಷ ಕೋಟಿ ಅಂದರೆ ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪೆನಿಯಾದ ಟಿಸಿಎಸ್​ ಮಾರುಕಟ್ಟೆ ಬಂಡವಾಳ ಮೌಲ್ಯವು ಶುಕ್ರವಾರದ ದಿನದ ಕೊನೆಗೆ 14,11,058.63 ಕೋಟಿ (14.11 ಲಕ್ಷ ಕೋಟಿ) ಇದೆ. ಅಂದರೆ, ಭಾರತದ ಎರಡನೇ ಅತ್ಯಂತ ಮೌಲ್ಯಯುತ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯದಷ್ಟು ಅಮೆಜಾನ್​ ಕಂಪೆನಿಯು ಒಂದೇ ದಿನ ಹೆಚ್ಚಿಸಿಕೊಂಡಿದೆ. ಇಲ್ಲಿಯವರೆಗೆ ಒಂದು ದಿನದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿದ್ದ ಕಂಪೆನಿ ಎಂಬ ದಾಖಲೆ ಹೊಂದಿತ್ತು ಆಪಲ್ ಇಂಕ್. 18,100 ಕೋಟಿ ಅಮೆರಿಕನ್ ಡಾಲರ್ ಒಂದೇ ದಿನ ಹೆಚ್ಚಳ ಆಗಿತ್ತು. ಆಪಲ್​ ಕಂಪೆನಿಯಿಂದ ಅಮೋಘ ಫಲಿತಾಂಶ ಪ್ರಕಟಿಸಿದ ನಂತರ ಜನವರಿ 28ರಂದು ಒಂದೇ ದಿನ ಇಷ್ಟು ಮೊತ್ತದ ಮಾರುಕಟ್ಟೆ ಬಂಡವಾಳ ಮೌಲ್ಯ ಒಂದೇ ದಿನದಲ್ಲಿ ಜಾಸ್ತಿ ಆಗಿತ್ತು.

ಅಮೆಜಾನ್ ಮೌಲ್ಯ ಈಗ 1.6 ಲಕ್ಷ ಕೋಟಿ ಡಾಲರ್ ಆಗಿದೆ. ಮೆಟಾ ಪ್ಲಾಟ್​ಫಾರ್ಮ್ಸ್ ಸ್ಟಾಕ್ ಶುಕ್ರವಾರ ಶೇ 0.3ರಷ್ಟು ಇಳಿಕೆ ಆಗಿದ್ದು, 660 ಬಿಲಿಯನ್ ಅಥವಾ 66 ಸಾವಿರ ಕೋಟಿ ಡಾಲರ್ ಆಗಿದೆ. ಗುರುವಾರದಂದು ಕಂಪೆನಿಯಿಂದ ನಿರೀಕ್ಷೆಗಿಂತ ಅತ್ಯುತ್ತಮ ಫಲಿತಾಂಶ ಪ್ರಕಟಿಸಿದ್ದು, ಯುಎಸ್​ ವಾರ್ಷಿಕ ಪ್ರೈಮ್ ಸಬ್​ಸ್ಕ್ರಿಪ್ಷನ್ ಅನ್ನು ಶೇ 17ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

“2021ರಲ್ಲಿ ಲಾಕ್‌ಡೌನ್ ನಂತರದ ಪರಿಸ್ಥಿತಿ ವಿರುದ್ಧ ಹೋರಾಡಿದ ಮೇಲೆ 2022 ಆರಂಭಗೊಳ್ಳುತ್ತಿದ್ದಂತೆ ಅಮೆಜಾನ್‌ನ ಅದೃಷ್ಟವು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ನಂಬುತ್ತೇವೆ,” ಎಂಬುದಾಗಿ ಮೊನ್ನೆಸ್ ಕ್ರೆಸ್ಪಿ ಹಾರ್ಡ್ಟ್ ವಿಶ್ಲೇಷಕ ಬ್ರಿಯಾನ್ ವೈಟ್ ಸಂಶೋಧನಾ ಟಿಪ್ಪಣಿಯಲ್ಲಿ ಬರೆದಿದ್ದಾರೆ. “ವೇಗವರ್ಧಿತ ಡಿಜಿಟಲ್ ರೂಪಾಂತರದ ಅತಿದೊಡ್ಡ ಫಲಾನುಭವಿಗಳಲ್ಲಿ ಒಂದಾಗಿ ಈ ಬಿಕ್ಕಟ್ಟಿನಿಂದ ಹೊರಬರಲು ಅಮೆಜಾನ್ ವಿಶಿಷ್ಟ ಸ್ಥಾನ ಪಡೆದಿದೆ.” ಚಿಲ್ಲರೆ ಹೂಡಿಕೆದಾರರು ಅಮೆಜಾನ್‌ನ ಏರಿಕೆ ಲಾಭ ಪಡೆಯಲು ಬಳಸಿಕೊಂಡಿದ್ದಾರೆ. ಫಿಡೆಲಿಟಿಯ ವೆಬ್‌ಸೈಟ್‌ನಲ್ಲಿನ ಡೇಟಾವು ಶುಕ್ರವಾರದಂದು ಅಮೆಜಾನ್ ತನ್ನ ಗ್ರಾಹಕರಲ್ಲಿ ಹೆಚ್ಚು ವಹಿವಾಟು ನಡೆಸಿದ ಷೇರು ಎಂದು ತೋರಿಸಿದ್ದು, ಮಾರಾಟದ ಆದೇಶಗಳು ಎರಡಕ್ಕಿಂತ ಹೆಚ್ಚು ಖರೀದಿ ಆದೇಶಗಳನ್ನು ಮೀರಿದೆ.

ಅಮೆಜಾನ್‌ನ ಮೌಲ್ಯದಲ್ಲಿನ ಹೆಚ್ಚಳದ ಗಾತ್ರವು AT&T ಇಂಕ್, ಮೋರ್ಗನ್ ಸ್ಟ್ಯಾನ್ಲಿ ಮತ್ತು ನೆಟ್​ಫ್ಲಿಕ್ಸ್ ಇಂಕ್ ಸೇರಿದಂತೆ ಕಂಪೆನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಮೀರಿಸಿದೆ. ಆಪಲ್, ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮತ್ತು ಗೂಗಲ್ ಮಾಲೀಕ ಆಲ್ಫಾಬೆಟ್ ಇಂಕ್​, ರೆಫಿನಿಟಿವ್ ಪ್ರಕಾರ ಕ್ರಮವಾಗಿ 2.8 ಟ್ರಿಲಿಯನ್ ಯುಎಸ್​ಡಿ, 2.3 ಟ್ರಿಲಿಯನ್ ಯುಎಸ್​ಡಿ ಮತ್ತು 1.9 ಟ್ರಿಲಿಯನ್ ಯುಎಸ್​ಡಿ ಮಾರುಕಟ್ಟೆ ಬಂಡವಾಳ ಮೌಲ್ಯದೊಂದಿಗೆ ವಾಲ್ ಸ್ಟ್ರೀಟ್‌ನ ಅತ್ಯಮೂಲ್ಯ ಕಂಪೆನಿಗಳಾಗಿ ಉಳಿದಿವೆ. ಅಮೆಜಾನ್‌ನ ಷೇರು ಬೆಲೆಯು ಜುಲೈನಲ್ಲಿ ಅದರ ದಾಖಲೆಯ ಗರಿಷ್ಠವಾದ 3,731.41 ಯುಎಸ್​ಡಿಯಿಂದ ಶೇ 15ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: Mukesh Ambani: ಭಾರತದಲ್ಲಿ ಈವರೆಗಿನ ಅತ್ಯಂತ ದುಬಾರಿ ಕಾರು ಖರೀದಿಸಿದ ಮುಕೇಶ್ ಅಂಬಾನಿ

Published On - 11:45 am, Sat, 5 February 22