AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಈ ನಾಲ್ಕನೇ ಶ್ರೀಮಂತ ವ್ಯಕ್ತಿಗೆ ಬೆಳಗಿನ ಸಮಯ ಮುಖ್ಯ; ತಲೆಗೆ ಕೆಲಸ ಕೊಡೋ ಮೀಟಿಂಗ್​ಗಳೆಲ್ಲಾ ಬೆಳಗ್ಗೆಯೇ

Amazon founder Jeff Bezos success secret: ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಅವರು ಜೀವನ ಮತ್ತು ಉದ್ಯಮವನ್ನು ಸಮತೋಲನದಿಂದ ನಿಭಾಯಿಸುತ್ತಾರೆ. ಅದಕ್ಕೆ ಕಾರಣ ಅವರು ಅಳವಡಿಸಿಕೊಂಡಿರುವ ಕೆಲಸದ ಆಚಾರ ಮತ್ತು ನಿಯಮಗಳು. ರಾತ್ರಿಯ ನಿದ್ರೆ, ಬೆಳ್ಳಂಬೆಳಗ್ಗೆ ಹಗುರತೆ, ಮಧ್ಯಾಹ್ನದವರೆಗಿನ ಶ್ರಮದ ಕೆಲಸ, ಸಂಜೆ ಆರಾಮು, ಇವು ಜೆಫ್ ಬೇಜೋಸ್ ಜೀವನಶೈಲಿ.

ವಿಶ್ವದ ಈ ನಾಲ್ಕನೇ ಶ್ರೀಮಂತ ವ್ಯಕ್ತಿಗೆ ಬೆಳಗಿನ ಸಮಯ ಮುಖ್ಯ; ತಲೆಗೆ ಕೆಲಸ ಕೊಡೋ ಮೀಟಿಂಗ್​ಗಳೆಲ್ಲಾ ಬೆಳಗ್ಗೆಯೇ
ಜೆಫ್ ಬೇಜೋಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 07, 2025 | 8:16 PM

Share

ದಾರ್ಶನಿಕರ ಮಾತುಗಳನ್ನು ಆಲಿಸಿ, ಉದ್ಯಮಿಗಳ ನಡೆಗಳನ್ನು ಗಮನಿಸಿ ಎನ್ನುವ ಹೊಸ ಮಾತಿದೆ. ಬಹಳ ಮಂದಿ ಶ್ರೀಮಂತರು ನಮಗೆ ಕಣ್ಣಿಗೆ ಐಷಾರಾಮಿ ಜೀವನಶೈಲಿ ಹೊಂದಿದವರಂತೆ ಕಾಣುತ್ತಾರೆ. ಆದರೆ, ಕೆಲಸದಲ್ಲಿ ಅವರಿಗಿರುವ ಶ್ರದ್ಧೆ, ಜಾಣ್ಮೆ ಇವು ಗಮನಿಸಬೇಕಾದ ಸಂಗತಿಗಳು. ಒಬ್ಬೊಬ್ಬ ಬಿಲಿಯನೇರ್​ಗಳ ಜೀವನದಲ್ಲಿ ಕಲಿಯಬಹುದಾದ ನೂರೆಂಟು ವಿಷಯಗಳಿರುತ್ತವೆ. ವಿಶ್ವದ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ ಜೆಫ್ ಬೇಜೋಸ್ (Jeff Bezos) ಅವರನ್ನೇ ನೋಡಿ, ಬಹಳ ಸೋಜಿಗದ ಮನುಷ್ಯ. ಲೈಫ್ ಅನ್ನು ಎಂಜಾಯ್ ಮಾಡುತ್ತಾ ಇರುವಂತೆ ಕಾಣುವ ಮನುಷ್ಯ.

ಅಮೇಜಾನ್ ಎನ್ನುವ ಇ-ಕಾಮರ್ಸ್ ದೈತ್ಯ ಕಂಪನಿಯ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಅಷ್ಟೊಂದು ದೊಡ್ಡ ಬ್ಯುಸಿನೆಸ್ ಹೇಗೆ ನಿಭಾಯಿಸುತ್ತಾರೆ?

ಇದನ್ನೂ ಓದಿ: ಜಿಯೋಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನ ಎನ್​​ಎಫ್​​ಒಗೆ ಭರ್ಜರಿ ಸ್ಪಂದನೆ; 17,800 ಕೋಟಿ ರೂ ಹೂಡಿಕೆ ಸಂಗ್ರಹ

ಬೇಗ ಮಲಗಿ ಬೇಗ ಏಳುವ ಬೇಜೋಸ್

ಅಮೇಜಾನ್ ಮಾಲೀಕರು ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುತ್ತಾರಂತೆ. ಅವರಿಗೆ ದಿನಕ್ಕೆ 8 ಗಂಟೆಯಾದರೂ ನಿದ್ರೆ ಅವಶ್ಯಕ. ನಿದ್ರೆ ಚೆನ್ನಾಗಿ ಆದರೆ ಚೆನ್ನಾಗಿ ಯೋಚಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.

ಬೆಳಗ್ಗೆ ಏನು ಮಾಡ್ತಾರೆ ಜೆಫ್ ಬೇಜೋಸ್?

ಬೆಳಗಿನ ಹೊತ್ತು ಜೆಫ್ ಬೇಜೋಸ್ ಅವರು ಹೆಚ್ಚು ಶ್ರಮದ ಕೆಲಸ ಮಾಡುವುದಿಲ್ಲವಂತೆ. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಪತ್ರಿಕೆ ಓದುತ್ತಾರೆ, ಕಾಫಿ ಕುಡಿಯುತ್ತಾರೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ಅವರೊಂದಿಗೆ ತಿಂಡಿ ತಿನ್ನುತ್ತಾರೆ. ಈ ವಿಚಾರವನ್ನು ಜೆಫ್ ಬೇಜೋಸ್ ಹಿಂದೆ ಯಾವಾಗಲೋ ಹೇಳಿದ್ದ ವಿಡಿಯೊವೊಂದು ಇದೆ. ಈ ಬೆಳಗಿನ ಅವಧಿಯು ಬೇಜೋಸ್ ಅವರಿಗೆ ಬಹಳ ಮುಖ್ಯವಂತೆ.

ಇದನ್ನೂ ಓದಿ: Shubman Gill: ಟೀಮ್ ಇಂಡಿಯಾ ಕ್ಯಾಪ್ಟನ್ ಶುಬ್​ಮನ್ ಗಿಲ್ ಆಸ್ತಿ, ಆದಾಯ, ಲಕ್ಷುರಿ ಕಾರುಗಳು…

ಮಧ್ಯಾಹ್ನ ಊಟದ ವೇಳೆ ಪ್ರಮುಖ ಕೆಲಸಗಳು…

ಜೆಫ್ ಬೇಜೋಸ್ ಅವರು ಬೆಳಗ್ಗೆ 10ಗಂಟೆಗೆ ಮೊದಲ ಮೀಟಿಂಗ್ ನಿಗದಿ ಮಾಡುತ್ತಾರೆ. ತಲೆಗೆ ಬಹಳ ಕೆಲಸ ಕೊಡುವ ಕೆಲಸವೇನೇ ಇದ್ದರೂ 10 ಗಂಟೆಯೊಳಗೆ ಮಾಡಲು ಬಯಸುತ್ತಾರೆ. ಮಧ್ಯಾಹ್ನ ಊಟದ ವೇಳೆಗೆ ಎಲ್ಲಾ ಪ್ರಮುಖ ಮೀಟಿಂಗ್​ಗಳನ್ನು ಅಟೆಂಡ್ ಮಾಡುತ್ತಾರೆ. ಸಂಜೆ 5 ಗಂಟೆ ಬಳಿಕ ಯಾವುದಾದರೂ ಕೆಲಸ ಬಂದರೆ ಮರುದಿನ ಬೆಳಗ್ಗೆಗೆ ಅದನ್ನು ದೂಡುತ್ತಾರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು