Amazon Offers and Deals: ಯುವಜನರನ್ನೇ ಗುರಿಯಾಗಿಸಿ ಅಮೆಜಾನ್ ಆಫರ್, ಡೀಲ್ಗಳು
ಅಮೆಜಾನ್ ಇಂಡಿಯಾದಿಂದ ಪ್ರೈಮ್ ಸದಸ್ಯರಿಗಾಗಿ ಸ್ಮಾರ್ಟ್ಫೋನ್ ಹಾಗೂ ಲ್ಯಾಪ್ಟಾಪ್ಗಳ ಮೇಲೆ ಆಫರ್, ಡೀಲ್ಗಳನ್ನು ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಅಮೆಜಾನ್ ಇಂಡಿಯಾದಿಂದ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ಗಳೂ ಸೇರಿದಂತೆ ಕೆಲವು ಹೆಸರಾಂತ ಪ್ರಾಡಕ್ಟ್ಗಳ ಸೆಗ್ಮಂಟ್ಗಳ ಡೀಲ್ಗಳ ಬಗ್ಗೆ ಅನಾವರಣಗೊಳಿಸಲಾಗಿದೆ. ಇ- ಕಾಮರ್ಸ್ ಕಂಪೆನಿಯಾದ ಅಮೆಜಾನ್ ಇಂಡಿಯಾದಿಂದ ಜುಲೈ 26 ಹಾಗೂ 27ನೇ ತಾರೀಕಿನಂದು ಪ್ರೈಮ್ ಡೇ ಮಾರಾಟ ಆಯೋಜಿಸಲಾಗಿದೆ. ಅಮೆಜಾನ್ ಇಂಡಿಯಾದಿಂದ ಪ್ರೈಮ್ ಸದಸ್ಯರಿಗಾಗಿಯೇ ಈ ಡೀಲ್ಗಳಿವೆ. ಅಮೆಜಾನ್ನಿಂದ 18ರಿಂದ 24 ವರ್ಷದೊಳಗಿನ ಗ್ರಾಹಕರಿಗಾಗಿ ಈ ವಿಶೇಷ ಡೀಲ್ಗಳನ್ನು ನೀಡಲಾಗುತ್ತಿದೆ. ಯುವಜನರಿಗಾಗಿ ಪ್ರೈಮ್ ಸದಸ್ಯತ್ವವನ್ನು ಶೇ 50ರಷ್ಟು ಕ್ಯಾಶ್ಬ್ಯಾಂಕ್ನೊಂದಿಗೆ ಎರಡು ಆಯ್ಕೆಗಳ ಪ್ಲಾನ್ಗಳೊಂದಿಗೆ ಬರುತ್ತದೆ. ಗ್ರಾಹಕರು ಪ್ರೈಮ್ಗೆ ಸೈನ್ ಅಪ್ ಮಾಡುವ ಮೂಲಕ ಆಫರ್ ಪಡೆಯಬಹುದು ಮತ್ತು ವಯಸ್ಸು ದೃಢೀಕರಿಸಬಹುದು.
ಅಮೆಜಾನ್ ಇಂಡಿಯಾದಿಂದ ಸ್ಮಾರ್ಟ್ಫೋನ್ ಆಫರ್ಗಳು ಹಾಗೂ ಡೀಲ್ಗಳಿವು: 1. ಆಯ್ದ ಫೋನ್ಗಳಿಗೆ 12 ತಿಂಗಳ ತನಕ ನೋ ಕಾಸ್ಟ್ ಇಎಂಐ 2. ಕೂಪನ್ಗಳ ಜತೆಗೆ 3000 ರೂಪಾಯಿ ಕಡಿತದೊಂದಿಗೆ ಆಫರ್ಗಳಿವೆ ಮತ್ತು ಹೆಚ್ಚುವರಿಯಾಗಿ ರೂ. 5000 ತನಕ ಕಡಿತ ಆಗುತ್ತದೆ. 3. 6 ತಿಂಗಳ ಉಚಿತ ಸ್ಕ್ರೀನ್ ರೀಪ್ಲೇಸ್ಮೆಂಟ್ ಮತ್ತು ಹೆಚ್ಚುವರಿಯಾಗಿ 3 ತಿಂಗಳು ನೋ ಕಾಸ್ಟ್ ಇಎಂಐ ಅವಧಿಯು ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ಗಳ ಮೇಲೆ ಸಿಗುತ್ತದೆ. 4. ಒನ್ಪ್ಲಸ್ ಸ್ಮಾರ್ಟ್ಫೋನ್ಗಳು: ಕೂಪನ್ಗಳೊಂದಿಗೆ ರೂ. 4000 ತನಕ ಕಡಿತ ಮತ್ತು ವಿನಿಮಯದೊಂದಿಗೆ 5000 ರೂಪಾಯಿ ತನಕ ಹೆಚ್ಚುವರಿ ಕಡಿತ. 9 ತಿಂಗಳ ತನಕ ನೋ ಕಾಸ್ಟ್ ಇಎಂಐ ಆಫರ್ಗಳಿವೆ. 5. ಶಿಯೋಮಿ ಸ್ಮಾರ್ಟ್ಫೋನ್ಗಳು: 12 ತಿಂಗಳ ತನಕ ನೋ ಕಾಸ್ಟ್ ಇಎಂಐ. ವಿನಿಮಯದೊಂದಿಗೆ ಹೆಚ್ಚುವರಿಯಾಗಿ ರೂ. 3000 ಸಿಗುತ್ತದೆ. ಆಯ್ದ ಮಾಡೆಲ್ಗಳ ಮೇಲೆ ಉಚಿತ ಸ್ಕ್ರೀನ್ ರೀಪ್ಲೇಸ್ಮೆಂಟ್ ಬರುತ್ತದೆ. 6. ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು: ಸ್ಯಾಮ್ಸಂಗ್ ಎಂ ಸರಣಿಯ ಮೇಲೆ 10,000 ರೂಪಾಯಿ ತನಕ ಕಡಿತ ಜತೆಗೆ ಕೂಪನ್ ಆಫರ್ಗಳಿವೆ, 9 ತಿಂಗಳ ತನಕ ನೋ ಕಾಸ್ಟ್ ಇಎಂಐ ಹಾಗೂ 6 ತಿಂಗಳು ಉಚಿತ ಸ್ಕ್ರೀನ್ ರೀಪ್ಲೇಸ್ಮೆಂಟ್ ಆಫರ್ ಇದೆ. 7. iQOOO ಸ್ಮಾರ್ಟ್ಫೋನ್ಗಳು: ಕೂಪನ್ಸ್ ಬಳಕೆಯೊಂದಿಗೆ ರೂ. 2000 ತನಕ ಉಳಿತಾಯ ಜತೆಗೆ ಇಎಂಐ ಆಫರ್ಗಳು ಹಾಗೂ ಉಚಿತ ಸ್ಕ್ರೀನ್ ರೀಪ್ಲೇಸ್ಮೆಂಟ್ ಆಫರ್ಗಳಿವೆ. 8. ಆಪಲ್ ಐಫೋನ್ಗಳು: ಐಫೋನ್ 11 ಹಾಗೂ ಐಫೋನ್ 12 ಪ್ರೋ ಮೇಲೆ ಆಫರ್ಗಳು. 9. ಟೆಕ್ನೋ ಸ್ಮಾರ್ಟ್ಫೋನ್ಗಳ ಮೇಲೆ ಶೇ 20ರ ತನಕ ಕಡಿತ ಜತೆಗೆ ಹೆಚ್ಚುವರಿಯಾಗಿ ಅಮೆಜಾನ್ ಕೂಪನ್ಗಳು. 10. ಶೇ 30ರ ತನಕ ವಿವೋ ಸ್ಮಾರ್ಟ್ಫೋನ್ಗಳ ಮೇಲೆ ಕಡಿತ ಹಾಗೂ ಜತೆಗೆ ವಿನಿಮಯದ ಮೇಲೆ ರೂ. 2500 ಕಡಿತ 11. ಶೇ 20ರ ತನಕ ಒಪ್ಪೋ ಸ್ಮಾರ್ಟ್ಫೋನ್ಗಳ ಮೇಲೆ ಕಡಿತ ಹಾಗೂ ಜತೆಗೆ 12 ತಿಂಗಳ ತನಕ ನೋ ಕಾಸ್ಟ್ ಇಎಂಐ. 12. ಮೊಬೈಲ್ ಆಕ್ಸೆಸರಿಗಳು ರೂ. 69ರಿಂದ ಶುರುವಾಗುತ್ತದೆ. 13. ಪವರ್ಬ್ಯಾಂಕ್ಸ್ ರೂ.399ರಿಂದ ಶುರು. 15 ಹೆಡ್ಸೆಟ್ಗಳು 179ರಿಂದ ಆರಂಭ.