ಕೌಟುಂಬಿಕ ಕಲಹ; ರೇಮಂಡ್ ಮುಖ್ಯಸ್ಥರಿಗೆ ಚೆಕ್​ಮೇಟ್ ಹಾಕಿದ್ದರಾ ಅಂಬಾನಿ ಫ್ಯಾಮಿಲಿ?

|

Updated on: Nov 22, 2023 | 4:31 PM

Singhania family and Ambani family: ನವಾಜ್ ಮೋದಿ ಅವರು ಪತಿ ಮನೆಯ ದೀಪಾವಳಿ ಕಾರ್ಯಕ್ರಮ ಸ್ಥಳಕ್ಕೆ ಹೋಗಲು ಅವಕಾಶ ಸಿಕ್ಕದೇ ಬಾಗಿಲಲ್ಲೇ ಕೂತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬತೊಡಗಿತ್ತು. ಇದೀಗ ಸಿಂಘಾನಿಯಾ ಕೌಟುಂಬಿಕ ಕಲಹ ಘಟನೆಯೊಂದರಲ್ಲಿ ಭಾರತದ ಅತಿಶ್ರೀಮಂತ ಮನೆತನವಾದ ಅಂಬಾನಿ ಕುಟುಂಬದವರು ಮಧ್ಯಪ್ರವೇಶಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

ಕೌಟುಂಬಿಕ ಕಲಹ; ರೇಮಂಡ್ ಮುಖ್ಯಸ್ಥರಿಗೆ ಚೆಕ್​ಮೇಟ್ ಹಾಕಿದ್ದರಾ ಅಂಬಾನಿ ಫ್ಯಾಮಿಲಿ?
ಗೌತಮ್ ಸಿಂಘಾನಿಯಾ, ನವಾಜ್ ಮೋದಿ
Follow us on

ನವದೆಹಲಿ, ನವೆಂಬರ್ 22: ಕೆಲ ಗಂಭೀರ ವಿವಾದಗಳಿಗೆ ಗುರಿಯಾಗಿರುವ ರೇಮಂಡ್ಸ್ ಮುಖ್ಯಸ್ಥ ಗೌತಮ್ ಸಿಂಘಾನಿಯಾ (Gautam Singhania) ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯಲು ದುಬಾರಿ ಬೆಲೆ ತೆರೆಬೇಕಾಗುವ ಸಾಧ್ಯತೆ ಇದೆ. ಸಿಂಘಾನಿಯಾ ಪತ್ನಿ ನವಾಜ್ ಮೋದಿ (Nawaz Modi) ಅವರು ಪತಿಯ ಶೇ. 75ರಷ್ಟು ಆಸ್ತಿಯನ್ನು ಪರಿಹಾರವಾಗಿ ಪಡೆಯಲು ಕಾನೂನು ಅಂಗಳದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಗೌತಮ್ ಸಿಂಘಾನಿಯಾ ಅವರು ತಾನು ಪತ್ನಿಯಿಂದ ದೂರ ಇರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ಅದಾದ ಕೆಲ ಹೊತ್ತಿನಲ್ಲೇ ಅವರ ಪತ್ನಿ ನವಾಜ್ ಮೋದಿ ಅವರು ಪತಿ ಮನೆಯ ದೀಪಾವಳಿ ಕಾರ್ಯಕ್ರಮ ಸ್ಥಳಕ್ಕೆ ಹೋಗಲು ಅವಕಾಶ ಸಿಕ್ಕದೇ ಬಾಗಿಲಲ್ಲೇ ಕೂತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬತೊಡಗಿತ್ತು. ಇದೀಗ ಸಿಂಘಾನಿಯಾ ಕೌಟುಂಬಿಕ ಕಲಹ ಘಟನೆಯೊಂದರಲ್ಲಿ ಭಾರತದ ಅತಿಶ್ರೀಮಂತ ಮನೆತನವಾದ ಅಂಬಾನಿ ಕುಟುಂಬದವರು ಮಧ್ಯಪ್ರವೇಶಿಸಿದ್ದ ವಿಚಾರ ಬೆಳಕಿಗೆ ಬಂದಿದೆ.

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಗೌತಮ್ ಸಿಂಘಾನಿಯಾ ಅವರು ಸೆಪ್ಟೆಂಬರ್ 10ರಂದು ತಮ್ಮ ಜನ್ಮದಿನ ಕಾರ್ಯಕ್ರಮ ಆಯೋಜಿಸಿದ್ದರು. ನವಾಜ್ ಮೋದಿ ಆರೋಪಿಸಿರುವ ಪ್ರಕಾರ, ಆ ಕಾರ್ಯಕ್ರಮದ ಬಳಿಕ ಗೌತಮ್ ಸಿಂಘಾನಿಯಾ ತನ್ನ ಪತ್ನಿ ಹಾಗೂ ಮಗಳು ನಿಹಾರಿಕಾ ಅವರ ಮೇಲೆ ಹಲ್ಲೆ ಎಸಗಿದ್ದಾರೆ. ರೂಮಿನಲ್ಲಿ ಅಡಗಿಕೊಂಡ ನವಾಜ್ ಮೋದಿ ಮತ್ತು ನಿಹಾರಿಕಾ ಇಬ್ಬರೂ ಕೂಡ ಪೊಲೀಸರಿಗೆ ಕರೆ ಮಾಡಿ ರಕ್ಷಣೆ ಪಡೆಯಲು ಪ್ರಯತ್ನಿಸಿದ್ದರು. ಈ ವಿಚಾರದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಅಮ್ಮ, ಮಗಳ ನೆರವಿಗೆ ಧಾವಿಸಿ ಬಂದಿದ್ದರೆನ್ನಲಾಗಿದೆ.

ಇದನ್ನೂ ಓದಿ: ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?

ಮೊದಲಿಗೆ ನವಾಜ್ ಮೋದಿ ತನ್ನ ಸ್ನೇಹಿತೆ ಅನನ್ಯಾ ಗೋಯೆಂಕಾಗೆ ಹಲ್ಲೆ ವಿಚಾರ ತಿಳಿಸಿದ್ದಾರೆ. ಅನಂತ್ ಅಂಬಾನಿ ಜೊತೆ ತಾನು ಪೊಲೀಸ್ ಠಾಣೆಗೆ ಹೋಗಿ ಅಲ್ಲಿಗೆ ಬರುವುದಾಗಿ ಅನನ್ಯಾ ಹೇಳಿದ್ದಾರೆ. ಅದೇ ವೇಳೆ, ಸಿಂಘಾನಿಯಾ ಮಗಳು ನಿಹಾರಿಕಾ ಅವರು ತನ್ನ ಸ್ನೇಹಿತ ವಿಶ್ವರೂಪ್​ಗೆ ಕರೆ ಮಾಡಿದ್ದಾರೆ. ವಿಶ್ವರೂಪ್ ಅವರು ಗೌತಮ್ ಸಿಂಘಾನಿಯಾ ಅವರ ಸಮೀಪದ ಬಂಧು ತ್ರಿಶಾಕರ್ ಬಜಾಜ್ ಅವರ ಮಗ.

ಅಂಬಾನಿ ಕುಟುಂಬದವರ ಎಂಟ್ರಿ

ವಿಶ್ವರೂಪ್ ಹಾಗೂ ಅವರ ತಂದೆ ಸಹಾಯಕ್ಕೆ ಬರುವಷ್ಟರಲ್ಲಿ ನೀತಾ ಅಂಬಾನಿ ಹಾಗು ಅವರ ಮಗ ಅನಂತ್ ಅಂಬಾನಿ ಅಖಾಡಕ್ಕೆ ಇಳಿದಿದ್ದರು. ಗೌತಮ್ ಸಿಂಘಾನಿಯಾ ಮನೆಗೆ ಪೊಲೀಸರು ಹೋಗುತ್ತಾರೆ. ಆದರೆ, ನಿರೀಕ್ಷೆಯಂತೆ ಸಿಂಘಾನಿಯಾ ಅವರು ಪೊಲೀಸರನ್ನು ತಡೆಯುತ್ತಾರೆ. ಆದರೆ, ಅಂಬಾನಿ ಕುಟುಂಬದವರ ಒತ್ತಾಯದಿಂದ ಪೊಲೀಸರು ಸಿಂಘಾನಿಯಾ ಮಾತು ಕೇಳುವುದಿಲ್ಲ. ಕೊನೆಗೆ ಗೌತಮ್ ಸಿಂಘಾನಿಯಾ ವಿರುದ್ಧ ಪೊಲೀಸರು ಎನ್​ಸಿ ರಿಪೋರ್ಟ್ ಫೈಲ್ ಮಾಡುತ್ತಾರೆ.

ಇದನ್ನೂ ಓದಿ: Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ

ಗೌತಮ್ ಸಿಂಘಾನಿಯಾ ಈ ಪ್ರಕರಣದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ‘ನನ್ನ ಇಬ್ಬರು ಚಂದದ ಮಕ್ಕಳ ಹಿತಾಸಕ್ತಿ ಮುಖ್ಯ. ಹೀಗಾಗಿ, ನನ್ನ ಕುಟುಂಬದ ಘನತೆ ಉಳಿಸುವ ದೃಷ್ಟಿಯಿಂದ ಯಾವುದೇ ಪ್ರತಿಕ್ರಿಯೆ ಕೊಡಲು ಇಷ್ಟಪಡುವುದಿಲ್ಲ. ದಯವಿಟ್ಟ ನನ್ನ ಗೌಪ್ಯತೆಯನ್ನು ಗೌರವಿಸಿ,’ ಎಂದು ಗೌತಮ್ ಸಿಂಘಾನಿಯಾ ಅವರು ಸ್ಪಷ್ಟಪಡಿಸಿದ್ದಾರೆ.

11,000 ಕೋಟಿ ರೂ ಡಿವೋರ್ಸ್ ಪರಿಹಾರ

ನವಾಜ್ ಮೋದಿ ಫಿಟ್ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಾರೆ. ಅವರು ಮತ್ತು ಸಿಂಘಾನಿಯಾ ಅವರ 32 ವರ್ಷದ ದಾಂಪತ್ಯ ಮುರಿದುಬಿದ್ದಿದೆ. ಸಿಂಘಾನಿಯಾ ಆಸ್ತಿಯ ಶೇ 75ರಷ್ಟು ಪಾಲು ಪರಿಹಾರವಾಗಿ ಬೇಕೆಂದು ನವಾಜ್ ಒತ್ತಾಯಿಸಿದ್ದಾರೆ. ಅಂದರೆ ಸುಮಾರು 1.4 ಬಿಲಿಯನ್ ಡಾಲರ್ ಮೊತ್ತದ (ಸುಮಾರು11,600 ಕೋಟಿ ರೂ) ಪರಿಹಾರಕ್ಕಾಗಿ ನವಾಜ್ ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ