ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?

ಪ್ರಖ್ಯಾತ ಉದ್ಯಮಿ  ರೇಮಂಡ್​​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ(Gautam Singhania) ಅವರು ಪತ್ನಿ ನವಾಜ್​ಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ದೀಪಾವಳಿ ಹಬ್ಬದಂದು ಪ್ರಕಟಿಸಿದ್ದರು. ಪತ್ನಿ ವಿಚ್ಛೇದನಕ್ಕೆ ಬದಲಾಗಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಮತ್ತು ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ ಶೇ.75ರಷ್ಟನ್ನು ತನಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?
ಗೌತಮ್ ಸಿಂಘಾನಿಯಾ
Follow us
ನಯನಾ ರಾಜೀವ್
|

Updated on:Nov 20, 2023 | 2:05 PM

ಪ್ರಖ್ಯಾತ ಉದ್ಯಮಿ  ರೇಮಂಡ್​​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ(Gautam Singhania) ಅವರು ಪತ್ನಿ ನವಾಜ್​ಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ದೀಪಾವಳಿ ಹಬ್ಬದಂದು ಪ್ರಕಟಿಸಿದ್ದರು. ಪತ್ನಿ ವಿಚ್ಛೇದನಕ್ಕೆ ಬದಲಾಗಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಮತ್ತು ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ ಶೇ.75ರಷ್ಟನ್ನು ತನಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಗೌತಮ್ ಸಿಂಘಾನಿಯಾ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್ (ಸುಮಾರು 11,660 ಕೋಟಿ ರೂ.). ಈ ಹಿನ್ನೆಲೆಯಲ್ಲಿ ನವಾಜ್ ಮೋದಿ ಸಿಂಘಾನಿಯಾ ಅವರು ವಿಚ್ಛೇದನಕ್ಕೆ ಬದಲಾಗಿ ಸಿಂಘಾನಿಯಾ ಕುಟುಂಬಕ್ಕೆ 8,745 ಕೋಟಿ ರೂ. ನೀಡುವಂತೆ ಕೇಳಿದ್ದಾರೆ.

32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು. ಹಿಂದಿನ ದೀಪಾವಳಿಯಂತೆ ಈ ಬಾರಿ ಇರುವುದಿಲ್ಲ. 32 ವರ್ಷ ಕಾಲ ದಂಪತಿಯಾಗಿ ಒಟ್ಟಿಗೆ ಇದ್ದೆವು. ಪೋಷಕರಾಗಿ ಒಟ್ಟಿಗೆ ಬೆಳೆದೆವು. ಪರಿಸ್ಪರರಿಗೆ ಶಕ್ತಿಯಾಗಿ ನಿಂತಿದ್ದೆವು. ಬದ್ಧತೆ, ನಂಬಿಕೆಯಿಂದ ಮುಂದುವರಿದೆವು. ಇಬ್ಬರು ಅದ್ಭುತ ಕುಡಿಗಳು ನಮ್ಮ ಬದುಕಿನಲ್ಲಿ ಮೇಳೈಸಿದವು. ಇಲ್ಲಿಂದ ನಾನು ಮತ್ತು ನವಾಜ್ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತೇವೆ ಎಂದು ನಂಬಿದ್ದೇನೆ. ಅವಳಿಂದ ದೂರ ಹೋಗುತ್ತಿದ್ದೇನೆ. ನಮ್ಮ ಎರಡು ಮುತ್ತುಗಳಾದ ನಿಹಾರಿಕಾ ಮತ್ತು ನೀಸಾ ಅವರಿಗೆ ಒಳಿತಾಗುವ ರೀತಿಯಲ್ಲಿ ಇಬ್ಬರೂ ಮುಂದುವರಿಯುತ್ತೇವೆ,’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ರೇಮಂಡ್ ಸಂಸ್ಥೆ ಛೇರ್ಮನ್ ಗೌತಮ್ ಸಿಂಘಾನಿಯಾ, ನವಾಜ್ ಮೋದಿ 32 ವರ್ಷದ ದಾಂಪತ್ಯ ಅಂತ್ಯ; ನಮ್ಮಿಬ್ಬರದ್ದೀಗ ಬೇರೆ ದಾರಿ ಎಂದ ಸಿಂಘಾನಿಯಾ

ಗೌತಮ್ ಸಿಂಘಾನಿಯಾ ಈ ಷರತ್ತಿಗೆ ಒಪ್ಪುತ್ತಾರಾ? ಗೌತಮ್ ಸಿಂಘಾನಿಯಾ ಅವರು ಈ ಬೇಡಿಕೆಯನ್ನು ಸ್ಥೂಲವಾಗಿ ಒಪ್ಪಬಹುದು ಎಂದು ಮೂಲಗಳು ಹೇಳುತ್ತವೆ. ಆದರೆ ಆಸ್ತಿಯ ಈ ಲೆಕ್ಕಪತ್ರವನ್ನು ನೇರವಾಗಿ ಮಾಡಲಾಗುವುದಿಲ್ಲ. ಬದಲಿಗೆ ಫ್ಯಾಮಿಲಿ ಟ್ರಸ್ಟ್ ರಚಿಸುವಂತೆ ಸಲಹೆ ನೀಡಿದ್ದಾರೆ. ಈ ಟ್ರಸ್ಟ್ ಕುಟುಂಬದ ಎಲ್ಲಾ ಆಸ್ತಿ ಮತ್ತು ಆಸ್ತಿಗಳ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುತ್ತದೆ. ಅವರು ಈ ಟ್ರಸ್ಟ್‌ನ ಏಕೈಕ ಟ್ರಸ್ಟಿಯಾಗಿರುತ್ತಾರೆ. ಅವರ ಮರಣದ ನಂತರ, ಅವರ ಕುಟುಂಬ ಸದಸ್ಯರು ಉಯಿಲು ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ನವಾಜ್ ಮೋದಿ ಸಿಂಘಾನಿಯಾ ಈ ವ್ಯವಸ್ಥೆಗೆ ಒಪ್ಪಿಗೆ ನೀಡುವ ಸಾಧ್ಯತೆಗಳು ಕಡಿಮೆ.

ರೇಮಂಡ್ಸ್​ ಗ್ರೂಪ್‌ನಲ್ಲಿ ಈಗಾಗಲೇ ಹಲವು ಟ್ರಸ್ಟ್‌ಗಳನ್ನು ರಚಿಸಲಾಗಿದೆ. ಇವರಲ್ಲಿ ಜೆ.ಕೆ. ಟ್ರಸ್ಟ್ಸ್ ಮತ್ತು ಶ್ರೀಮತಿ ಸುನೀತಿದೇವಿ ಸಿಂಘಾನಿಯಾ ಆಸ್ಪತ್ರೆ ಟ್ರಸ್ಟ್, ರೇಮಂಡ್ ಲಿಮಿಟೆಡ್‌ನಲ್ಲಿ 1.04 ಶೇಕಡಾ ಪಾಲನ್ನು ಹೊಂದಿದೆ. ಗೌತಮ್ ಸಿಂಘಾನಿಯಾ ಈ ಟ್ರಸ್ಟ್‌ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ. ಆದರೆ ನವಾಜ್ ಮೋದಿ ಸಿಂಘಾನಿಯಾ ಕೂಡ ಟ್ರಸ್ಟಿಯಾಗಿದ್ದಾರೆ.

ವಿಚ್ಛೇದನ ಷರತ್ತನ್ನು ಹೇಗೆ ಪರಿಹರಿಸಲಾಗುತ್ತದೆ? ಮಾಧ್ಯಮ ವರದಿಗಳ ಪ್ರಕಾರ, ಖೈತಾನ್ ಮತ್ತು ಪಾಲುದಾರ ಎಚ್. ಖೈತಾನ್ ಅವರನ್ನು ಈ ವಿಷಯದಲ್ಲಿ ಗೌತಮ್ ಸಿಂಘಾನಿಯಾ ಅವರ ಕಾನೂನು ಸಲಹೆಗಾರರನ್ನಾಗಿ ಮಾಡಲಾಗಿದೆ. ಆದರೆ ಮುಂಬೈನ ರಶ್ಮಿ ಕಾಂತ್ ಅವರು ನವಾಜ್ ಅವರ ವಕೀಲರಾಗಬಹುದು. ಕೌಟುಂಬಿಕ ಟ್ರಸ್ಟ್ ರಚಿಸುವ ಮೂಲಕ ಗೌತಮ್ ಸಿಂಘಾನಿಯಾ ಏಕೈಕ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿ ಉಳಿಯುವುದು ಕಷ್ಟವಾಗಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:05 pm, Mon, 20 November 23

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ