
ವಾಷಿಂಗ್ಟನ್, ಫೆಬ್ರುವರಿ 21: ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಧ್ಯಕ್ಷರ ಶ್ವೇತಭವನಕ್ಕೆ ನಿನ್ನೆ ಗುರುವಾರ ತೆರಳಿ ಟ್ರಂಪ್ರನ್ನು ಭೇಟಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇಬ್ಬರ ಮಧ್ಯೆ ಯಾವ ವಿಚಾರ ಚರ್ಚೆಯಾಯಿತು ಎಂಬುದು ಗೊತ್ತಾಗಿಲ್ಲ. ಚೀನಾದ ಸರಕುಗಳ ಮೇಲೆ ಅಮೆಇರಕ ಸರ್ಕಾರ ಶೇ. 10ರಷ್ಟು ಸುಂಕ ವಿಧಿಸಿರುವ ಕುರಿತು ಟಿಮ್ ಕುಕ್ ಮಾತನಾಡಿರಬಹುದು ಎಂದು ಹೇಳಲಾಗುತ್ತಿದೆ.
ಆ್ಯಪಲ್ ಕಂಪನಿಯ ಉತ್ಪನ್ನಗಳಲ್ಲಿ ಹೆಚ್ಚಿನವು ಚೀನಾದಲ್ಲೇ ತಯಾರಾಗುತ್ತವೆ. ಶೇ. 90ಕ್ಕಿಂತಲೂ ಹೆಚ್ಚು ಭಾಗ ಚೀನಾದಲ್ಲಿ ಮ್ಯಾನುಫ್ಯಾಕ್ಚರ್ ಆಗುತ್ತದೆ. ಅ್ಯಪಲ್ಗೆ ಚೀನಾ ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾದರೆ, ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆ್ಯಪಲ್ನ ಹೆಚ್ಚಿನ ಉತ್ಪನ್ನಗಳ ಮಾರಾಟ ಅಮೆರಿಕದ ಮಾರುಕಟ್ಟೆಯಲ್ಲಿ ಆಗುತ್ತದೆ. ಈಗ ಅಮೆರಿಕ ಮತ್ತು ಚೀನಾ ಮಧ್ಯೆ ಟ್ರೇಡಿಂಗ್ ಘರ್ಷಣೆ ನಡೆದರೆ ಘಾಸಿಗೊಳ್ಳುವ ಕಂಪನಿಗಳಲ್ಲಿ ಆ್ಯಪಲ್ ಒಂದು.
ಇದನ್ನೂ ಓದಿ: ಪುಣೆ ಬಳಿ ಟೆಸ್ಲಾ ಫ್ಯಾಕ್ಟರಿ ಸ್ಥಾಪನೆ? ಟಾಟಾ ಮೋಟಾರ್ಸ್ ಜೊತೆ ಟೆಸ್ಲಾ ಹೊಂದಾಣಿಕೆಗೆ ಮಾತುಕತೆ: ವರದಿ
ಆ್ಯಪಲ್ ಕಂಪನಿಗೆ ಚೀನಾದಲ್ಲೂ ಸಂಕಷ್ಟ ಎದುರಾಗಿದೆ. ಆ್ಯಪಲ್ ಕಂಪನಿ ತನ್ನ ಪ್ಲಾಟ್ಫಾರ್ಮ್ನಲ್ಲಿ ಆ್ಯಪ್ ಡೆವಲಪರ್ಸ್ಗೆ ಶುಲ್ಕ ವಿಧಿಸುವ ನೀತಿ ಬಗ್ಗೆ ಚೀನಾ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸಲು ಆಲೋಚಿಸುತ್ತಿದೆ. ಇದಕ್ಕಿಂತ ಗಂಭೀರವಾದುದು ಅಮೆರಿಕದ ಟ್ಯಾರಿಫ್ ಕ್ರಮ.
ಡೊನಾಲ್ಡ್ ಟ್ರಂಪ್ ಈ ಹಿಂದೆ ಅಧ್ಯಕ್ಷರಾಗಿದ್ದಾಗ ಐಫೋನ್ಗಳ ಆಮದಿಗೆ ಸುಂಕದಿಂದ ರಿಯಾಯಿತಿ ಕೊಟ್ಟಿದ್ದರು. ಆದರೆ, ಈ ಬಾರಿ ಡೊನಾಲ್ಡ್ ಟ್ರಂಪ್ ತಮ್ಮ ನಿಲುವಿನಲ್ಲಿ ಬಹಳ ಸ್ಪಷ್ಟವಾಗಿದ್ದಾರೆ. ಯಾವುದಕ್ಕೂ, ಯಾರಿಗೂ ಆಮದು ಸುಂಕದಿಂದ ವಿನಾಯಿತಿ ಕೊಡಬಾರದು ಎನ್ನುವ ಅಚಲ ನಿಲುವು ಅವರದ್ದಾಗಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಭಾರತದ ಸರಕುಗಳಿಗೆ ಅಮೆರಿಕ ಶೇ. 20ರಷ್ಟು ಸುಂಕ ವಿಧಿಸಿದರೆ ಆರ್ಥಿಕತೆಗೆ ಎಷ್ಟು ನಷ್ಟವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಆ್ಯಪಲ್ ತನ್ನ ಐಫೋನ್ಗೆ ಸಾಕಷ್ಟು ಪ್ರಬಲ ರಕ್ಷಣಾ ಕ್ರಮಗಳನ್ನು ಅಳವಡಿಸಿದೆ. ಐಫೋನ್ ಅನ್ನು ಅದರ ಬಳಕೆದಾರ ಬಿಟ್ಟು ಬೇರೆ ಯಾರೂ ಕೂಡ ತೆಗೆದು ನೋಡಲು ಸಾಧ್ಯವಿಲ್ಲದಷ್ಟು ಎನ್ಕ್ರಿಪ್ಷನ್ ವ್ಯವಸ್ಥೆ ಇದೆ. ಕ್ರಿಮಿನಲ್ ಕೇಸ್ಗಳಲ್ಲಿ ಆರೋಪಿಗಳ ಐಫೋನ್ಗಳಲ್ಲಿನ ಡಾಟಾ ತೆಗೆಯಲು ತನಿಖಾಧಿಕಾರಿಗಳಿಂದ ಸಾಧ್ಯವಾಗುವುದಿಲ್ಲ. ಸ್ವತಃ ಆ್ಯಪಲ್ ಕಂಪನಿಗೂ ಇದನ್ನು ಡೀಕ್ರಿಪ್ಟ್ ಮಾಡಲು ಆಗುವುದಿಲ್ಲ. ಆ ರೀತಿಯ ವ್ಯವಸ್ಥೆ ಇದೆ. ಡೀಕ್ರಿಪ್ಟ್ ಮಾಡಬೇಕೆಂದು ಅಮೆರಿಕ ಸರ್ಕಾರ ಮಾತ್ರವಲ್ಲ, ಭಾರತ ಸೇರಿದಂತೆ ವಿಶ್ವದ ಹಲವು ಸರ್ಕಾರಗಳು ಮನವಿ ಮಾಡಿದರೂ ಆ್ಯಪಲ್ ಕಂಪನಿ ಮಾತ್ರ ಒಪ್ಪಿಲ್ಲ. ಗ್ರಾಹಕರ ನಂಬಿಕೆ ಹುಸಿಗೊಳಿಸಬಾರದು, ಮತ್ತು ಹ್ಯಾಕರ್ಗಳಿಗೆ ದಾರಿ ಕೊಡಬಾರದು ಎಂಬುದು ಆ್ಯಪಲ್ನ ಈ ನಿಲುವಿಗೆ ಕಾರಣ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ