AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2025-26ರಲ್ಲಿ ಭಾರತವೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ: ಆರ್​ಬಿಐ ಬುಲೆಟಿನ್ ಅಂದಾಜು

RBI monthly bulletin: 2025-26ರಲ್ಲೂ ಭಾರತವೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆಯಾಗಿರಲಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತ ಉತ್ತಮ ಬೆಳವಣಿಗೆ ಕಾಣಬಹುದು ಎಂದು ಆರ್​ಬಿಐ ಬುಲೆಟ್​ನಲ್ಲಿ ಅಂದಾಜು ಮಾಡಲಾಗಿದೆ. 2024-25ರಲ್ಲಿ ಮೊದಲಾರ್ಧಕ್ಕೆ ಹೋಲಿಸಿದರೆ ಎರಡನೇ ಭಾಗದಲ್ಲಿ ಆರ್ಥಿಕ ಚಟುವಟಿಕೆ ಚುರುಕುಗೊಂಡಿದೆ ಎಂದು ಹೇಳಿರುವ ಆರ್​ಬಿಐ, ಈ ನಿಟ್ಟಿನಲ್ಲಿ ಪುಷ್ಟೀಕರಿಸುವ ವಿವಿಧ ಸೂಚಕಗಳ ದತ್ತಾಂಶವನ್ನು ಉಲ್ಲೇಖಿಸಿದೆ.

2025-26ರಲ್ಲಿ ಭಾರತವೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ: ಆರ್​ಬಿಐ ಬುಲೆಟಿನ್ ಅಂದಾಜು
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 21, 2025 | 4:32 PM

Share

ಮುಂಬೈ, ಫೆಬ್ರುವರಿ 21: ಪ್ರಸಕ್ತ ಹಣಕಾಸು ವರ್ಷದ (2024-25) ದ್ವಿತೀಯಾರ್ಧದಲ್ಲಿ ಭಾರತದ ಆರ್ಥಿಕ ಚಟುವಟಿಕೆ ಮತ್ತೆ ಹುರುಪು ಪಡೆದಿದೆ. ಇದರ ಕಿಡಿಯಿಂದ ಬೆಳವಣಿಗೆಯ ಹಾದಿ ಮತ್ತಷ್ಟು ದೂರ ಸಾಗಬಹುದು ಎಂದು ಆರ್​​ಬಿಐನ ಮಾಸಿಕ ಬುಲೆಟ್​ನಲ್ಲಿ ತಿಳಿಸಲಾಗಿದೆ. ಜಾಗತಿಕ ಸವಾಲಿನ ವಾತಾರಣದ ಮಧ್ಯೆಯೂ 2025-26ರಲ್ಲಿ ಭಾರತದ ಆರ್ಥಿಕತೆ ಅತಿವೇಗದ ಬೆಳವಣಿಗೆ ಹೊಂದಬಹುದು ಎಂದು ಎಂದು ಐಎಂಎಫ್ ಮತ್ತು ವಿಶ್ವಬ್ಯಾಂಕ್ ಮಾಡಿರುವ ಅಂದಾಜನ್ನು ಆರ್​ಬಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಬಾರಿಯ ಬಜೆಟ್​ನಲ್ಲಿ ತೆಗೆದುಕೊಳ್ಳಲಾಗಿರುವ ಕೆಲ ನಿರ್ಧಾರಗಳನ್ನು ಆರ್​ಬಿಐ ಶ್ಲಾಘಿಸಿದೆ. ಹಣಕಾಸು ಶಿಸ್ತು ಮತ್ತು ಪ್ರಗತಿಯ ಗುರಿ ಎರಡೂ ಉದ್ದೇಶಗಳನ್ನು ಬಜೆಟ್​ನಲ್ಲಿ ಸಮತೋಲಿತವಾಗಿ ಒಳಗೊಳ್ಳಲಾಗಿದೆ. ಗೃಹ ಆದಾಯ ಮತ್ತು ಅನುಭೋಗ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಗತಿ ಹೆಚ್ಚಿಸಲು ಬಂಡವಾಳ ವೆಚ್ಚದತ್ತಲೂ ಗಮನ ಕೊಡಲಾಗಿದೆ ಎಂದು ಆರ್​ಬಿಐನ ಮಾಸಿಕ ಬುಲೆಟ್​ನಲ್ಲಿ ವಿಶ್ಲೇಷಿಸಲಾಗಿದೆ.

ರೀಟೇಲ್ ಹಣದುಬ್ಬರ ಜನವರಿಯಲ್ಲಿ ಶೇ. 4.3ರಕ್ಕೆ ಇಳಿದಿದೆ. ಇದು ಐದು ತಿಂಗಳಲ್ಲೇ ಅತಿಕಡಿಮೆ ಹಣದುಬ್ಬರ ಸ್ಥಿತಿಯಾಗಿದೆ. ಮುಂಗಾರು ಫಸಲು ಉತ್ತಮವಾಗಿ ಬಂದು ಆಹಾರವಸ್ತುಗಳು ಮಾರುಕಟ್ಟೆಗೆ ಬಂದಿದ್ದರಿಂದ ತರಕಾರಿ ಬೆಲೆ ಸಾಕಷ್ಟು ಕಡಿಮೆ ಆಗಿದೆ. ಇದರಿಂದಾಗಿ ಹಣದುಬ್ಬರ ದರ ಇಳಿಯಲು ಸಾಧ್ಯವಾಯಿತು ಎಂಬುದನ್ನು ಆರ್​ಬಿಐ ವರದಿಯಲ್ಲಿ ಗಮನಿಸಲಾಗಿದೆ.

ಇದನ್ನೂ ಓದಿ: ಓಪನ್ ಅಕ್ಸೆಸ್ ಮೂಲಕ ವಿದ್ಯುತ್ ಖರೀದಿ; ಸೆಂಟ್ರಲ್ ರೈಲ್ವೆಗೆ ಆರು ಸಾವಿರ ಕೋಟಿ ರೂ ಉಳಿತಾಯ

ಹಿಂದಿನ ಕ್ವಾರ್ಟರ್​ಗೆ ಹೋಲಿಸಿದರೆ ಮೂರನೇ ಕ್ವಾರ್ಟರ್​ನಲ್ಲಿ (ಅಕ್ಟೋಬರ್​ನಿಂದ ಡಿಸೆಂಬರ್) ಔದ್ಯಮಿಕ ಚಟುವಟಿಕೆ ಉತ್ತಮಗೊಂಡಿದೆ. ಜನವರಿಯಲ್ಲಿನ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್​ನ ದತ್ತಾಂಶವು ಇದನ್ನು ದೃಢಪಡಿಸುತ್ತದೆ.

ಟ್ರಾಕ್ಟರ್​ಗಳ ಮಾರಾಟ, ಇಂಧನ ಬಳಕೆ ಹೆಚ್ಚಳ, ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ, ಇತ್ಯಾದಿ ಅಂಶಗಳು ಒಟ್ಟಾರೆ ಆರ್ಥಿಕತೆ ಚುರುಕುಗೊಂಡಿರುವುದರ ಸಂಕೇತವಾಗಿವೆ ಎಂಬುದನ್ನು ಈ ಬುಲೆಟ್​ನಲ್ಲಿ ಎತ್ತಿ ತೋರಿಸಲಾಗಿದೆ.

ಮೂರನೇ ಕ್ವಾರ್ಟರ್​ನಲ್ಲಿ ಆರ್​ಬಿಐ ನಿರೀಕ್ಷೆಗಿಂತ ಹೆಚ್ಚು ಆರ್ಥಿಕ ವೃದ್ಧಿ?

ಭಾರತದ ಆರ್ಥಿಕತೆ ಡಿಸೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ನಿರೀಕ್ಷೆಗಿಂತ ತುಸು ಹೆಚ್ಚೇ ಬೆಳವಣಿಗೆ ಕಾಣಬಹುದು ಎಂಬುದು ಆರ್ಥಿಕ ತಜ್ಞರ ಸಮೀಕ್ಷೆಯಿಂದ ವ್ಯಕ್ತವಾಗಿದೆ. ಎಕನಾಮಿಕ್ ಟೈಮ್ಸ್ ನಡೆಸಿದ ಪೋಲಿಂಗ್​ನಲ್ಲಿ, ಭಾರತದ ಜಿಡಿಪಿ ದರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಶೇ. 6.3ರಷ್ಟಿರಬಹುದು ಎನ್ನುವ ಸರಾಸರಿ ಅಂದಾಜು ಸಿಕ್ಕಿದೆ. ಪೋಲಿಂಗ್​ನಲ್ಲಿ ಪಾಲ್ಗೊಂಡಿದ್ದ ವಿವಿಧ ಆರ್ಥಿಕ ತಜ್ಞರು ಜಿಡಿಪಿ ದರ ಶೇ. 5.8ರಿಂದ ಶೇ. 6.5ರ ಶ್ರೇಣಿಯಲ್ಲಿ ಅಂದಾಜು ಮಾಡಿದ್ದರು. ಸರಾಸರಿಯಾಗಿ ಅದು ಶೇ. 6.3ರಷ್ಟಾಗುತ್ತದೆ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್; 2ನೇ ಸುತ್ತಿನಲ್ಲಿ 1 ಲಕ್ಷ ಇಂಟರ್ನಿಗಳಿಗೆ ಅವಕಾಶ

ಆರ್​ಬಿಐನ ಎಂಪಿಸಿ ಸಭೆಯಲ್ಲಿ ಮಾಡಲಾಗಿದ್ದ ಅಂದಾಜು ಪ್ರಕಾರ ಡಿಸೆಂಬರ್ ಕ್ವಾರ್ಟರ್​ನಲ್ಲಿ ಆರ್ಥಿಕತೆ ಶೇ. 6.2ರಷ್ಟು ಬೆಳೆಯಬಹುದು ಎನ್ನಲಾಗಿತ್ತು. ಈಗ ಬೇರೆ ಬೇರೆ ಆರ್ಥಿಕ ತಜ್ಞರು ಬೆಳವಣಿಗೆ ವಿಚಾರದಲ್ಲಿ ಹೆಚ್ಚು ಆಶಾದಾಯಕವಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ