AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Apple Office: ಬೆಂಗಳೂರಿನಲ್ಲಿ ಸಾವಿರ ಕೋಟಿ ರೂಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ಆ್ಯಪಲ್ ಕಂಪನಿ

Apple leases office space in Bengaluru for Rs 1,010 crore in 10 years: ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ ಕಟ್ಟಡದಲ್ಲಿ 9 ಅಂತಸ್ತುಗಳನ್ನು ಆ್ಯಪಲ್ ಕಂಪನಿ ಬಾಡಿಗೆಗೆ ಪಡೆದಿದೆ. 5ರಿಂದ 13ನೇ ಮಹಡಿವರೆಗಿನ ಸ್ಥಳಕ್ಕೆ ಮಾಸಿಕ 6.315 ಕೋಟಿ ರೂ ಬಾಡಿಗೆ ನೀಡುತ್ತದೆ. 10 ವರ್ಷಕ್ಕೆ ಕರಾರು ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ. 4.5ರಷ್ಟು ಬಾಡಿಗೆ ಹೆಚ್ಚಳ ಇರುತ್ತದೆ.

Apple Office: ಬೆಂಗಳೂರಿನಲ್ಲಿ ಸಾವಿರ ಕೋಟಿ ರೂಗೆ ಕಚೇರಿ ಸ್ಥಳ ಬಾಡಿಗೆಗೆ ಪಡೆದ ಆ್ಯಪಲ್ ಕಂಪನಿ
ಎಂಬಸಿ ಜೆನಿತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 18, 2025 | 5:40 PM

Share

ಬೆಂಗಳೂರು, ಆಗಸ್ಟ್ 18: ಆ್ಯಪಲ್ ಕಂಪನಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ. ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ (Embassy Zenith) ಎನ್ನುವ ಕಟ್ಟಡದಲ್ಲಿ ಒಂಬತ್ತು ಅಂತಸ್ತುಗಳನ್ನು ಆ್ಯಪಲ್ ಕಂಪನಿ ಬಾಡಿಗೆಗೆ (Rent) ಪಡೆದಿದೆ. 10 ವರ್ಷ ಕಾಲ ಬಾಡಿಗೆ ಕರಾರು ಆಗಿದೆ. ಈ 9 ಅಂತಸ್ತುಗಳಿಂದ ಸೇರಿ ಒಟ್ಟು 2.7 ಲಕ್ಷ ಚದರಡಿ ಜಾಗವನ್ನು ಆ್ಯಪಲ್ (Apple) ಬಳಸಿಕೊಳ್ಳಲಿದೆ. ವರದಿಗಳ ಪ್ರಕಾರ ಜೆನಿತ್ ಎಂಬಸಿ ಕಟ್ಟಡದಲ್ಲಿ 5ರಿಂದ 13ನೇ ಮಹಡಿವರೆಗೂ ಸ್ಥಳವನ್ನು ಆ್ಯಪಲ್ ಬಳಸುತ್ತದೆ.

ಈ 9 ಫ್ಲೋರ್​​ಗಳಿಗೆ ಆ್ಯಪಲ್ ಕಂಪನಿ ಮಾಸಿಕವಾಗಿ 6.315 ಕೋಟಿ ರೂ ಬಾಡಿಗೆ ನೀಡುತ್ತದೆ. ಪ್ರತೀ ಚದರಡಿಗೆ 235 ರೂ ಬಾಡಿಗೆ ಆದಂತಾಗುತ್ತದೆ. ಕರಾರು ಪ್ರಕಾರ ಈ ಕಟ್ಟಡಕ್ಕೆ ಬಾಡಿಗೆ ವರ್ಷಕ್ಕೆ ಶೇ. 4.5ರಷ್ಟು ಹೆಚ್ಚಳ ಮಾಡಲಾಗುತ್ತದೆ.

ಅಡ್ವಾನ್ಸ್ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಆಗಿ ಆ್ಯಪಲ್ ಕಂಪನಿ 31.57 ಕೋಟಿ ರೂ ನೀಡಿದೆ. ಹತ್ತು ವರ್ಷ ಕಾಲ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮಾಸಿಕ ಬಾಡಿಗೆ ಹಾಗೂ ವಾರ್ಷಿಕವಾಗಿ ಹೆಚ್ಚಿಸಲಾಗುವ ಬಾಡಿಗೆ ಮೊತ್ತ, ಇವೆಲ್ಲವನ್ನೂ ಸೇರಿಸಿದರೆ 10 ವರ್ಷದಲ್ಲಿ ಒಟ್ಟು ವೆಚ್ಚ 1,010 ಕೋಟಿ ರೂ ಆಗುತ್ತದೆ. ಇದರಲ್ಲಿ ಕಟ್ಟಡಕ್ಕೆ ಬಾಡಿಗೆ ಮಾತ್ರವಲ್ಲ, ಕಾರ್ ಪಾರ್ಕ್, ಮೈಂಟೆನೆನ್ಸ್ ಫೀಗಳೂ ಒಳಗೊಂಡಿವೆ. ಈ ಕಟ್ಟಡದಲ್ಲಿ 1,200 ಮಂದಿ ಕೆಲಸ ಮಾಡಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಫಾಕ್ಸ್​ಕಾನ್ ಘಟಕದಲ್ಲಿ ಐಫೋನ್17 ಸ್ಮಾರ್ಟ್​ಫೋನ್​ಗಳ ತಯಾರಿಕೆ ಆರಂಭ: ವರದಿ

ಬೆಂಗಳೂರಿನಲ್ಲಿ ದಾಖಲಾಗಿರುವ ಅತಿದೊಡ್ಡ ಬಾಡಿಗೆ ಕರಾರು ಒಪ್ಪಂದಗಳಲ್ಲಿ ಇದೂ ಒಂದೆನಿಸಿದೆ. ಎಂಬಸಿ ಗ್ರೂಪ್​ಗೆ ಸೇರಿದ ಮ್ಯಾಕ್​ಚಾರ್​ಲ್ಸ್ ಇಂಡಿಯಾ ಲಿಮಿಟೆಡ್ ಎನ್ನುವ ಕಂಪನಿಯು ಎಂಬಸಿ ಜೆನಿತ್​ನ ಮಾಲೀಕ ಸಂಸ್ಥೆಯಾಗಿದೆ. ಇದೇ ಎಂಬಸಿ ಕಟ್ಟಡದಲ್ಲಿ ಕೆಳಗಿನ ಮಹಡಿಯಿಂದ ನಾಲ್ಕನೇ ಮಹಡಿವರೆಗಿನ ಜಾಗವನ್ನೂ ಆ್ಯಪಲ್ ಬಾಡಿಗೆಗೆ ಪಡೆಯುವ ಆಲೋಚನೆಯಲ್ಲಿದೆ. ಈ ನಾಲ್ಕು ಮಹಡಿಗಳಲ್ಲಿ ಒಟ್ಟು 1,21,203 ಚದರಡಿ ವಿಸ್ತೀರ್ಣದ ಆಫೀಸ್ ಸ್ಪೇಸ್ ಇದೆ. ಈ ಎಲ್ಲಾ 13 ಮಹಡಿಗಳಿಂದ ಒಟ್ಟು ಆಫೀಸ್ ಸ್ಪೀಸ್ ವಿಸ್ತೀರ್ಣ 4 ಲಕ್ಷ ಚದರಡಿ ದಾಟುತ್ತದೆ.

ಬೆಂಗಳೂರಿನಲ್ಲಿ ಹೆಚ್ಚಿನ ಆ್ಯಪಲ್ ಉಪಸ್ಥಿತಿ

ಬೆಂಗಳೂರಿನ ಕಬ್ಬನ್ ರೋಡ್​ನಲ್ಲಿರುವ ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್​ನಲ್ಲಿ ಆ್ಯಪಲ್ ಕಂಪನಿ 1.16 ಲಕ್ಷ ಚದರಡಿ ವಿಸ್ತೀರ್ಣದ ಜಾಗವನ್ನು 2.43 ಕೋಟಿ ರೂ ಮಾಸಿಕ ಬಾಡಿಗೆಗೆ ಪಡೆದಿದೆ. ಬ್ಯಾಟರಾಯನಪುರದಲ್ಲಿ 8,000 ಚದರಡಿ ವಿಸ್ತೀರ್ಣದ ಜಾಗವೊಂದನ್ನೂ ಆ್ಯಪಲ್ ಲೀಸ್​ಗೆ ಪಡೆದಿದೆ.

ಇದನ್ನೂ ಓದಿ: ಭಾರತದಲ್ಲಿ ಕ್ವಿಕ್ ಡೆಲಿವರಿ 10 ನಿಮಿಷ, ಅಮೆರಿಕದಲ್ಲಿ 24 ಗಂಟೆ; ಡೆಲಿವರಿ ಚಾರ್ಜ್ 1,000 ರೂ?

ದೆಹಲಿ ಮತ್ತು ಮುಂಬೈನಲ್ಲಿ ರೀಟೇಲ್ ಸ್ಟೋರ್​ಗಳನ್ನು ಹೊಂದಿರುವ ಆ್ಯಪಲ್ ಕಂಪನಿ ಬೆಂಗಳೂರು ಹಾಗೂ ಪುಣೆ ನಗರಗಳಲ್ಲಿ ಮತ್ತೂ ನಾಲ್ಕು ರೀಟೆಲ್ ಸ್ಟೋರ್​ಗಳನ್ನು ಆರಂಭಿಸುವ ಪ್ಲಾನ್ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Mon, 18 August 25

ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ