ನವದೆಹಲಿ, ಆಗಸ್ಟ್ 8: ಲೋಕೋ ಪೈಲಟ್ಸ್ ಅಥವಾ ರೈಲು ಚಾಲಕರಿಗೆ ಸರ್ಕಾರ ಯಾವ ರೀತಿಯ ಸೌಲಭ್ಯಗಳನ್ನು ಕೊಟ್ಟಿದೆ, ಅವರ ಪರಿಸ್ಥಿತಿ ಹೇಗಿದೆ ಎಂಬ ವಿಚಾರವನ್ನು ಕೇಂದ್ರ ರೈಲ್ವೆ ಸಚಿವ ಡಾ. ಎ ವೈಷ್ಣವ್ ಇಂದು ಗುರುವಾರ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ ಅವರು, ಯುಪಿಎ ಅವಧಿಯಲ್ಲಿ ಮತ್ತು ಈಗಿನ ಎನ್ಡಿಎ ಸರ್ಕಾರದ ಅವಧಿಯಲ್ಲಿ ಲೋಕೋ ಪೈಲಟ್ಗಳ ಪರಿಸ್ಥಿತಿ ಹೇಗಿದೆ ಎಂದು ತುಲನೆ ಮಾಡಿದ್ದಾರೆ. ಲೋಕೋ ಪೈಲಟ್ಗಳು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಧ್ವನಿ ಎತ್ತಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವರು ಈ ಮೂಲಕ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ.
‘ಕಾಂಗ್ರೆಸ್ ಅವಧಿಯಲ್ಲಿದ್ದುದಕ್ಕಿಂತ ಇವತ್ತು ಭಾರತೀಯ ರೈಲ್ವೇಸ್ ಉತ್ತಮ ಸ್ಥಿತಿಯಲ್ಲಿದೆ. ಲೋಕೋ ಪೈಲಟ್ಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು 2014ರಿಂದಲೂ ಉತ್ತಮಗೊಳ್ಳುತ್ತಿವೆ. ಅವರಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚು ಸೌಲಭ್ಯ ಕೊಡಲು ತಯಾರಿದ್ದೇವೆ’ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಸರ್ಕಾರದಿಂದ ಇಂದು ಲೋಕಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ
ಲೋಕೋ ಪೈಲಟ್ಗಳು ರೈಲ್ವೆ ಕುಟುಂಬದ ಪ್ರಮುಖ ಸದಸ್ಯರು. ಕಳೆದ ಹತ್ತು ವರ್ಷದಲ್ಲಿ ಅವರ ಕೆಲಸದ ಪರಿಸ್ಥಿತಿ ಸಾಕಷ್ಟು ಸುಧಾರಿಸಲಾಗಿದೆ. ಟ್ರಿಪ್ ಮುಗಿಸಿ ಬರುವ ಚಾಲಕರು ರನಿಂಗ್ ರೂಮ್ಗೆ ಬರುತ್ತಾರೆ. 2014ರ ನಂತರ ಈ ರನ್ನಿಂಗ್ ರೂಮ್ನ ಪರಿಸ್ಥಿತಿ ಸುಧಾರಿಸಲಾಗಿದೆ. ಎಲ್ಲಾ 558 ರನ್ನಿಂಗ್ ರೂಮ್ಗಳು ಈಗ ಏರ್ ಕಂಡೀಷನ್ ಹೊಂದಿವೆ. ಈ ರೂಮುಗಳಲ್ಲಿ ಫೂಟ್ ಮಸಾಜರ್ಗಳನ್ನು ಒದಗಿಸಲಾಗಿದೆ ಎಂದು ಈ ಪೋಸ್ಟ್ನಲ್ಲಿ ವಿವರಿಸಲಾಗಿದೆ.
कांग्रेस के काल से आज हम भारतीय रेलवे को एक बेहतर स्थिति में लाने में कामयाब हुए है। “लोको पायलट” के लिए सुविधाओं में 2014 के बाद निरंतर सुधार हुआ है। और आगे भविष्य में भी उन्हें और ज्यादा सुविधाएं देने के लिए हम तत्पर हैं।
याद रहे, ‘हम मेहनत करने वाले लोग है’। pic.twitter.com/pMyuBLSs2b
— Ashwini Vaishnaw (@AshwiniVaishnaw) August 7, 2024
ಲೋಕೋ ಪೈಲಟ್ಗಳು ಕಾರ್ಯಾಚರಿಸುವ ಎಲ್ಲಾ 7,075 ಕ್ಯಾಬ್ಗಳೂ ಎಸಿ ಹೊಂದಿವೆ. 2014ಕ್ಕೆ ಮುಂಚೆ ಒಂದೂ ಎಸಿ ಎಂಜಿನ್ ಕ್ಯಾಬ್ಗಳಿರಲಿಲ್ಲ. 815 ಲೋಕೋ ಕ್ಯಾಬ್ಗಳಲ್ಲಿ ವಾಷ್ರೂಮ್ ಅಳವಡಿಸಲಾಗಿದೆ. ಲೋಕೋ ಕ್ಯಾಬ್ಗಳಲ್ಲಿ ಚಾಲಕರಿಗೆ 7,286 ಎರ್ಗೋನೋಮಿಕ್ ಸೀಟ್ಗಳನ್ನು ಹಾಕಲಾಗಿದೆ ಎಂಬ ಮಾಹಿತಿಯನ್ನು ವೈಷ್ಣವ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಶೇ. 6.5ರ ಬಡ್ಡಿದರ ಮುಂದುವರಿಸಲು ಆರ್ಬಿಐ ನಿರ್ಧಾರ
ಇದೇ ಪೋಸ್ಟ್ನಲ್ಲಿ ವೈಷ್ಣವ್ ಅವರು ರಾಹುಲ್ ಗಾಂಧಿ ಹಿಂದೆ ಲೋಕೋ ಪೈಲಟ್ಗಳ ಬಗ್ಗೆ ನೀಡಿದ್ದ ಹೇಳಿಕೆಯ ಸ್ಕ್ರೀನ್ಶಾಟ್ ಅನ್ನೂ ಲಗತ್ತಿಸಿದ್ದಾರೆ.
‘ಇವತ್ತು ಪಾರ್ಲಿಮೆಂಟ್ ಹೌಸ್ನಲ್ಲಿ ಲೋಕೋ ಪೈಲಟ್ಗಳನ್ನು ಭೇಟಿ ಮಾಡಿದೆ. ತಮ್ಮ ಕ್ಯಾಬಿನ್ಗಳಲ್ಲಿ ಉತ್ತಮ ಸೌಲಭ್ಯ ಕೊಡುವಂತೆ ಅವರು ಮತ್ತೆ ಬೇಡಿಕೆ ಇಟ್ಟರು…’ ಎಂದು ರಾಹುಲ್ ಗಾಂಧಿ ತಮ್ಮ ಆ ಪೋಸ್ಟ್ನಲ್ಲಿ ಹೇಳಿದ್ದರು. ಅದಕ್ಕೆ ಉತ್ತರವಾಗಿ ರೈಲ್ವೆ ಸಚಿವ ಎ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್ ಹಾಕಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ