ಭಾರತ-ಅಮೆರಿಕದ ಮಧ್ಯೆ ಮುಖ್ಯ ಖನಿಜಗಳ ವಿಚಾರಕ್ಕೆ ಸಭೆ; ಭಾರತಕ್ಕೇನು ಲಾಭ?
Ashwini Vaishnaw participates in US-India critical minerals meet: ಅಮೆರಿಕದಲ್ಲಿ ಅತ್ಯಗತ್ಯ ಖನಿಜಗಳ ಪೂರೈಕೆ ಸರಪಳಿ ವಿಚಾರವಾಗಿ ಸಭೆ ನಡೆದಿದೆ. ಭಾರತದ ಸಚಿವ ಅಶ್ವಿನಿ ವೈಷ್ಣವ್ ಇದರಲ್ಲಿ ಭಾಗವಹಿಸಿದ್ದಾರೆ. ಈ ಸಭೆ ಯಾಕಾಗಿ ನಡೆಯಿತು, ಇದರಲ್ಲಿ ಚರ್ಚಿತವಾದ ವಿಷಯವೇನು, ಭಾರತಕ್ಕೆ ಆಗುವ ಲಾಭವೇನು ಎಂಬುದನ್ನು ವೈಷ್ಣವ್ ವಿವರಿಸಿದ್ದಾರೆ.

ನವದೆಹಲಿ, ಜನವರಿ 13: ಮುಖ್ಯ ಖನಿಜಗಳ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುವ ದೃಷ್ಟಿಯಿಂದ ಅಂತರರಾಷ್ಟ್ರೀಯ ಸಚಿವ ಮಟ್ಟದ ಸಭೆ ನಡೆಯಿತು. ಅಮೆರಿಕದ ವಾಷಿಂಗ್ಟನ್ನ್ಲಲಿ ನಡೆದ ಈ ಸಭೆಯಲ್ಲಿ ಭಾರತದ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೇ ಸಚಿವ ಡಾ. ಎ ವೈಷ್ಣವ್ ಪಾಲ್ಗೊಂಡಿದ್ದರು. ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಸಭೆ ಆಯೋಜಿಸಿದ್ದರು. ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಿಂದಲೂ ಪ್ರತಿನಿಧಿಗಳು ಪಾಲ್ಗೊಂಡು ಚರ್ಚಿಸಿದರು ಎಂದು ವರದಿಗಳು ಹೇಳುತ್ತಿವೆ.
ಆ ಸಭೆ ಹಾಗೂ ಅದರಲ್ಲಿ ಚರ್ಚಿತವಾದ ವಿಷಯದ ಬಗ್ಗೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಮುಖ್ಯ ಖನಿಜಗಳ ಪೂರೈಕೆ ಸರಪಳಿಯಲ್ಲಿ ಭಾರತವೂ ಸೇರಿದರೆ ಏನು ಲಾಭ ಎಂಬುದನ್ನೂ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ
‘ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಬಹಳ ವೇಗದಲ್ಲಿ ಬೆಳೆಯುತ್ತಿರುವಾಗ ಮುಖ್ಯ ಖನಿಜಗಳ ಪೂರೈಕೆ ಸರಪಳಿ ವ್ಯವಸ್ಥೆ ಸಮರ್ಪಕವಾಗಿರುವುದು ಬಹಳ ಮುಖ್ಯ. ಈ ಸಭೆಯಲ್ಲಿ ಹಲವಾರು ದೇಶಗಳಿಂದ ಬಂದಿದ್ದ ಪ್ರತಿನಿಧಿಗಳು ತಮ್ಮ ಅನುಭವ ಹಂಚಿಕೊಂಡರು. ಸಪ್ಲೈ ಚೈನ್ ಸುದೃಢಗೊಳಿಸಲು, ಖನಿಜ ಅದಿರುಗಳ ಸಂಸ್ಕರಣೆ ಮಾಡುವ ತಂತ್ರಜ್ಞಾನ ಅಭಿವೃದ್ದಿಪಡಿಸುವುದು ಮೊದಲಾದ ವಿಷಯಗಳನ್ನು ಚರ್ಚಿಸಲಾಯಿತು’ ಎಂದು ಸಚಿವ ವೈಷ್ಣವ್ ತಿಳಿಸಿದ್ದಾರೆ.
ಮುಖ್ಯ ಖನಿಜಗಳು ಯಾಕೆ ಮುಖ್ಯ?
ಬ್ಯಾಟರಿ ಹಾಗೂ ನವೀಕರಣ ವಿದ್ಯುತ್ ಶಕ್ತಿ ತಯಾರಿಕೆಗೆ ಬಳಸಲು ಬಹಳ ಅಗತ್ಯವಾಗಿರುವ ಖನಿಜಗಳನ್ನು ಕ್ರಿಟಿಕಲ್ ಮಿನರಲ್ ಎಂದು ಪರಿಗಣಿಸಲಾಗುತ್ತದೆ. ಲಿಥಿಯಮ್, ಕೊಬಾಲ್ಟ್, ನಿಕಲ್, ಗ್ರಾಫೈಟ್ ಮೊದಲಾದವನ್ನು ಅತ್ಯಗತ್ಯ ಖನಿಜ ಅಥವಾ ಕ್ರಿಟಿಕಲ್ ಮಿನರಲ್ ಎನಿಸಿವೆ. ಇದರಲ್ಲಿ ನಿಯೋಡೈಮಿಯಮ್, ವೈಟ್ರಿಯಮ್, ಸೆರಿಯಂ ಇತ್ಯಾದಿ 17 ರೇರ್ ಅರ್ಥ್ ವಸ್ತು ಅಥವಾ ವಿರಳ ಭೂ ಖನಿಜಗಳೂ ಸೇರಿವೆ. 21ನೇ ಶತಮಾನದ ತಂತ್ರಜ್ಞಾನ ಅಳವಡಿಕೆಗೆ ಈ ಖನಿಜಗಳ ಅಗತ್ಯ ಬಹಳ ಇದೆ. ಸದ್ಯ ಚೀನಾ ದೇಶ ಈ ಖನಿಜಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ವಾಮ್ಯ ಹೊಂದಿದೆ. ಈ ಅವಲಂಬನೆಯಿಂದ ಹೊರಬರುವುದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಗುರಿ.
ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ಖನಿಜಗಳ ಪೂರೈಕೆ ಸರಪಳಿಯ ಭಾಗವಾದರೆ ಭಾರತಕ್ಕೇನು ಲಾಭ?
- ಭಾರತದಲ್ಲಿ ಎಲೆಕ್ಟ್ರಾನಿಕ್ಸ್, ಸೋಲಾರ್ ಪ್ಯಾನಲ್ ಇತ್ಯಾದಿ ಉತ್ಪಾದನೆ ನಡೆಯುತ್ತಿದ್ದು, ಅದಕ್ಕೆ ಖನಿಜಗಳ ಸ್ಥಿರ ಪೂರೈಕೆ ಸಾಧ್ಯವಾಗಬಹುದು.
- ಬೇರೆ ಬೇರೆ ದೇಶಗಳ ತಂತ್ರಜ್ಞಾನಗಳ ನೆರವು ಪಡೆಯಬಹುದು.
- ಬೇರೆ ಬೇರೆ ದೇಶಗಳ ಸಂಶೋಧನೆಗಳ ನೆರವು ಪಡೆಯಬಹುದು.
- ವಿರಳ ಭೂ ಖನಿಜ ಸೇರಿದಂತೆ ಕ್ರಿಟಿಕಲ್ ಮಿನರಲ್ಗಳನ್ನು ಶೋಧಿಸಿ ತೆಗೆಯಲು ಬೇಕಾದ ತಂತ್ರಜ್ಞಾನವನ್ನು ಭಾರತ ಪಡೆಯಬಹುದು.
- ಭಾರತದ ಉತ್ಪಾದನಾ ಕ್ಷೇತ್ರ ಮತ್ತಷ್ಟು ಬಲಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Tue, 13 January 26




