AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿದಂಬರಂ, ರಾಜನ್​ರಿಗೆ ಮ್ಯಾನುಫ್ಯಾಕ್ಚರಿಂಗ್ ಪಾಠ ಬೋಧಿಸಿ, ಟ್ರೋಲ್ ಮಾಡಿದ ಸಚಿವ ಎ ವೈಷ್ಣವ್

Ashwini Vaishnaw Trolls Raghuram Rajan: ಭಾರತದ ಮ್ಯಾನುಫ್ಯಾಕ್ಚರಿಂಗ್ ಯೋಜನೆ ಬಗ್ಗೆ ಟೀಕಿಸುವ ರಘುರಾಮ್ ರಾಜನ್, ಪಿ ಚಿದಂಬರಂಗೆ ಸಚಿವ ಎ ವೈಷ್ಣವ್ ತಿರುಗೇಟು ನೀಡಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಅಸೆಂಬ್ಲಿಂಗ್ ಮಧ್ಯೆ ಏನು ವ್ಯತ್ಯಾಸ ಎಂಬುದನ್ನು ಅವರಿಬ್ಬರು ಮೊದಲು ತಿಳಿದುಕೊಳ್ಳಲಿ ಎಂದಿದ್ದಾರೆ ವೈಷ್ಣವ್. ಎಎನ್​ಐ ಸಂದರ್ಶನದಲ್ಲಿ ಅವರು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಹೇಗೆ ನಡೆಯುತ್ತಿದೆ ಎಂದು ಸ್ಯಾಂಪಲ್ ಸಹಿತ ಉದಾಹರಣೆ ನೀಡಿದ್ದಾರೆ.

ಚಿದಂಬರಂ, ರಾಜನ್​ರಿಗೆ ಮ್ಯಾನುಫ್ಯಾಕ್ಚರಿಂಗ್ ಪಾಠ ಬೋಧಿಸಿ, ಟ್ರೋಲ್ ಮಾಡಿದ ಸಚಿವ ಎ ವೈಷ್ಣವ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 07, 2023 | 6:22 PM

Share

ನವದೆಹಲಿ, ಡಿಸೆಂಬರ್ 7: ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಟೀಕಿಸುತ್ತಿರುವ ಮಾಜಿ ಸಚಿವ ಪಿ ಚಿದಂಬರಂ ಮತ್ತು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಅವರನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಟ್ರೋಲ್ ಮಾಡಿದ್ದಾರೆ. ಚಿದಂಬರಂ ಮತ್ತು ರಘುರಾಮ್ ರಾಜನ್ ಅವರಿಗೆ ಮ್ಯಾನುಫ್ಯಾಕ್ಚರಿಂಗ್ ಬಗ್ಗೆ ಅಶ್ವಿನಿ ವೈಷ್ಣವ್ ಪಾಠ ಮಾಡಿರುವ ವಿಡಿಯೋವನ್ನು ಎಎನ್​ಐ ಬಿಡುಗಡೆ ಮಾಡಿದೆ. ಎಎನ್​ಐ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ವೈಷ್ಣವ್ ಅವರು ಅವರಿಬ್ಬರನ್ನು ಟ್ರೋಲ್ ಮಾಡಿದ್ದಾರೆ.

‘ಚಿದಂಬರಂ ಮತ್ತು ರಘುರಾಮ್ ರಾಜನ್ ಅವರು ಮ್ಯಾನುಫ್ಯಾಕ್ಚರಿಂಗ್ ಮತ್ತು ಅಸೆಂಬ್ಲಿಂಗ್ ಮಧ್ಯೆ ವ್ಯತ್ಯಾಸ ತಿಳಿಯಬೇಕು. ಭಾರತದ ಯುವಕ ಯುವತಿಯರು ಪ್ರಿಸಿಶನ್ ಮ್ಯಾನುಫ್ಯಾಕ್ಚರಿಂಗ್ ಮಾಡುತ್ತಿದ್ದಾರೆ. ಇದಕ್ಕೆ ಹೆಮ್ಮ ಪಡಬೇಕು,’ ಎಂದು ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.

ಆ್ಯಪಲ್ ಐಫೋನ್​ನ ಹೊರಕವಚ ತಯಾರಿಸಲು ಉಪಯೋಗಿಸುವ ಮೆಷೀನ್​ನಿಂದಲೇ ತಯಾರಿಸಲಾಗಿರುವ ಉತ್ಪನ್ನವೊಂದನ್ನು ಅವರು ಆ ವಿಡಿಯೋದಲ್ಲಿ ತೋರಿಸಿ ವಿವರಣೆ ನೀಡಿದ್ದಾರೆ. ಇದು ಮ್ಯಾನುಫ್ಯಾಕ್ಚರಿಂಗ್ ಅಲ್ಲದಿದ್ದರೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾರ್ಬನ್ ಟ್ಯಾಕ್ಸ್ ಹೇರಿಕೆ ಕ್ರಮ ನೈತಿಕವಲ್ಲ; ಶ್ರೀಮಂತ ದೇಶಗಳ ವಿರುದ್ಧ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ

ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಖಾತೆ, ರೈಲ್ವೆ ಮತ್ತು ಕಮ್ಯೂನಿಕೇಶನ್ಸ್ ಖಾತೆ ಸಚಿವರಾಗಿರುವ ಡಾ. ಅಶ್ವಿನಿ ವೈಷ್ಣವ್ ಅವರು ಈ ಹಿಂದೆಯೂ ಸಾಕಷ್ಟು ಬಾರಿ ಪಿ ಚಿದಂಬರಂ ಮತ್ತು ರಘುರಾಮ್ ರಾಜನ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಿದೆ.

ಭಾರತ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಹೆಚ್ಚು ಮುಂದುವರಿಯಲಾಗದು. ಪಿಎಲ್​ಐ ಸ್ಕೀಮ್​ನಲ್ಲಿ ನಡೆಯುತ್ತಿರುವುದು ಮ್ಯಾನುಫ್ಯಾಕ್ಚರಿಂಗ್ ಅಲ್ಲ, ಕೇವಲ ಅಸೆಂಬ್ಲಿಂಗ್ ಮಾತ್ರ. ಐಫೋನ್​ಗಳನ್ನು ಭಾರತದಲ್ಲಿ ಅಸೆಂಬ್ಲಿಂಗ್ ಮಾಡಲು ಸಬ್ಸಿಡಿ ಕೊಡಲಾಗುತ್ತಿದೆ. ಭಾರತ ಚೀನಾದಂತೆ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಪೈಪೋಟಿಗೆ ಇಳಿಯುವ ಬದಲು ಸರ್ವಿಸ್ ಸೆಕ್ಟರ್​ನತ್ತ ಗಮನ ಹರಿಸಬೇಕು ಎಂದು ರಘುರಾಮ್ ರಾಜನ್ ಸಾಕಷ್ಟು ಬಾರಿ ಹೇಳುತ್ತಲೇ ಬಂದಿದ್ದಾರೆ. ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಕೂಡ ಭಾರತದ ಪಿಎಲ್​ಐ ಸ್ಕೀಮ್ ವಿರುದ್ಧ ಸಾಕಷ್ಟು ಬಾರಿ ಮಾತನಾಡಿದ್ದಾರೆ.

ಇದನ್ನೂ ಓದಿ: Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್​ಬಕ್ಸ್

ಮೊನ್ನೆಯಷ್ಟೇ ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಸಚಿವ ಎ ವೈಷ್ಣವ್ ಅವರು ರಘುರಾಮ್ ರಾಜನ್ ಅವರನ್ನು ವ್ಯಂಗ್ಯ ಮಾಡಿದ್ದರು. ‘ರಘುರಾಮ್ ರಾಜನ್ ಅವರಿಗೆ ಮ್ಯಾನುಫ್ಯಾಕ್ಚರಿಂಗ್ ಮತ್ತು ಅಸೆಂಬ್ಲಿಂಗ್ ಬಗ್ಗೆ ವ್ಯತ್ಯಾಸ ಗೊತ್ತಿದೆ. ಆದರೂ ಕೂಡ ಗೊತ್ತಿಲ್ಲದವರಂತೆ ಮಾಡನಾಡಿ ತಮ್ಮ ಆಷಾಡಭೂತಿತನ ತೋರುತ್ತಿದ್ದಾರೆ,’ ಎಂದು ವೈಷ್ಣವ್ ಟೀಕಿಸಿದ್ದರು.

‘ರಘುರಾಮ್ ರಾಜನ್ ಅವರ ಸಮಸ್ಯೆ ಏನೆಂದರೆ ಅವರು ತಮ್ಮನ್ನು ತಾವು ಮುಂದಿನ ಹಣಕಾಸು ಸಚಿವ ಎಂದು ಭಾವಿಸಿಕೊಂಡಿದ್ದಾರೆ. ಅವರು ಪೂರ್ಣವಾಗಿ ರಾಜಕೀಯಕ್ಕೆ ಇಳಿಯದೆಯೇ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ’ ಎಂದು ಟ್ರೋಲ್ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Thu, 7 December 23

ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ನವರಾತ್ರಿ ಎರಡನೇ ದಿನದ ದ್ವಾದಶ ರಾಶಿ ಭವಿಷ್ಯ ಹೇಗಿದೆ? ಇಲ್ಲಿದೆ ನೋಡಿ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ