ಕಾರ್ಬನ್ ಟ್ಯಾಕ್ಸ್ ಹೇರಿಕೆ ಕ್ರಮ ನೈತಿಕವಲ್ಲ; ಶ್ರೀಮಂತ ದೇಶಗಳ ವಿರುದ್ಧ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ

Nirmala Sitharaman @ CII global Economic Policy forum: ಕ್ರಾಸ್ ಬಾರ್ಡರ್ ಅಡ್ಜಸ್ಟ್​ಮೆಂಟ್ ಮೆಕ್ಯಾನಿಸಂ ಅಥವಾ ಕಾರ್ಬನ್ ಟ್ಯಾಕ್ಸ್ 2026ರ ಜನವರಿ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಕಾರ್ಬನ್ ಟ್ಯಾಕ್ಸ್ ಹೇರಿಕೆ ಕ್ರಮವು ನೈತಿಕವಾಗಿ ತಪ್ಪು. ಇದು ಅಭಿವೃದ್ಧಿ ದೇಶಗಳಿಗೆ ಮಾರಕ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಒಂದು ಸಂಸ್ಥೆಯ ಉತ್ಪನ್ನಗಳ ತಯಾರಿಕೆಯಲ್ಲಿ ಎಷ್ಟು ಕಾರ್ಬನ್ ಹೊರಸೂಸುವಿಕೆ ಆಗುತ್ತದೋ ಅಷ್ಟಕ್ಕೆ ತೆರಿಗೆ ವಿಧಿಸುವುದು ಕಾರ್ಬನ್ ಟ್ಯಾಕ್ಸ್.

ಕಾರ್ಬನ್ ಟ್ಯಾಕ್ಸ್ ಹೇರಿಕೆ ಕ್ರಮ ನೈತಿಕವಲ್ಲ; ಶ್ರೀಮಂತ ದೇಶಗಳ ವಿರುದ್ಧ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 07, 2023 | 5:11 PM

ನವದೆಹಲಿ, ಡಿಸೆಂಬರ್ 7: ಎರಡು ವರ್ಷದ ನಂತರ ಜಾರಿಗೆ ತರಲು ಉದ್ದೇಶಿಸಲಾಗಿರುವ ಅಂತಾರಾಷ್ಟ್ರೀಯ ಕಾರ್ಬನ್ ಟ್ಯಾಕ್ಸ್ (Carbon Tax) ಕ್ರಮವನ್ನು ಭಾರತ ಪ್ರಶ್ನಿಸಿದೆ. ಮುಂದುವರಿದ ದೇಶಗಳು ಆಮದು ವಸ್ತುಗಳ ಮೇಲೆ ಕಾರ್ಬನ್ ಟ್ಯಾಕ್ ವಿಧಿಸುವುದು ನೈತಿಕವಾಗಿ ತಪ್ಪು. ಅಷ್ಟೇ ಅಲ್ಲ, ಅದು ಅಭಿವೃದ್ಧಿಶೀಲ ದೇಶಗಳ (developing economies) ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು ಗುರುವಾರ ಹೇಳಿದ್ದಾರೆ. ಸಿಐಐ ಗ್ಲೋಬಲ್ ಎಕನಾನಿಕ್ ಪಾಲಿಸಿ ಫೋರಂ ಸಭೆಯಲ್ಲಿ ಡಿಸೆಂಬರ್ 7ರಂದು ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್, ‘ಕ್ರಾಸ್ ಬಾರ್ಡರ್ ತೆರಿಗೆ ಹೇರಿಕೆ ಮಾಡುವುದು ಮತ್ತು ಯಾರದ್ದೋ ಗ್ರೀನ್ ಅಜೆಂಡಾಗೆ ಹಣ ಹೋಗುವುದು ಏನೇ ಆದರೂ ನೈತಿಕವಾಗಿ ಸರಿಯಲ್ಲ,’ ಎಂದು ಟೀಕಿಸಿದ್ದಾರೆ.

ಏನಿದು ಕಾರ್ಬನ್ ಟ್ಯಾಕ್ಸ್?

ಕಾರ್ಬನ್ ಟ್ಯಾಕ್ಸ್ ಎಂಬುದು ಇಂಗಾಲ ಹೊರಸೂಸುವಿಕೆಯನ್ನು (carbon emission) ನಿಯಂತ್ರಿಸಲು ಮಾಡಿರುವ ಒಂದು ಕ್ರಮ. ಕಾರ್ಬನ್ ಅನಿಲ ಪರಿಸರಕ್ಕೆ ಹಾನಿಕರ. ಒಂದು ಸಂಸ್ಥೆ ತನ್ನ ಉತ್ಪಾದನಾ ಕಾರ್ಯದಲ್ಲಿ ಎಷ್ಟು ಕಾರ್ಬನ್ ಅನ್ನು ಪರಿಸರಕ್ಕೆ ಹಾಕುತ್ತದೆ, ಅಷ್ಟಕ್ಕೆ ತೆರಿಗೆ ವಿಧಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕಾರ್ಬನ್ ಹೊರಸೂಸುವಿಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವ ಪ್ರಯತ್ನ ಆಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುವುದು ಕಡಿಮೆ ಆಗುತ್ತದೆ ಎಂದು ಭಾವಿಸಲಾಗಿದೆ.

ಇದನ್ನೂ ಓದಿ: Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್​ಬಕ್ಸ್

ಕ್ರಾಸ್ ಬಾರ್ಡರ್ ಅಡ್ಜಸ್ಟ್​ಮೆಂಟ್ ವ್ಯವಸ್ಥೆಯಲ್ಲಿ (ಸಿಬಿಎಎಂ) ಒಂದು ವಸ್ತುವನ್ನು ರಫ್ತು ಮಾಡುವ ಕಂಪನಿಯು ಆ ವಸ್ತುವಿನ ಉತ್ಪಾದನೆಯಲ್ಲಿ ಹೊರಸೂಸಿದ ಕಾರ್ಬನ್​ಗೆ ತೆರಿಗೆ ಕಟ್ಟಬೇಕು.

ಈ ರೀತಿ ಆದಾಗ ಭಾರತದಂತಹ ದೇಶಗಳಿಂದ ಆಗುವ ರಫ್ತಿನ ಮೇಲೆ ಮುಂದುವರಿದ ದೇಶಗಳು ಕಾರ್ಬನ್ ಟ್ಯಾಕ್ಸ್ ವಿಧಿಸಿ ಲಾಭ ಮಾಡಿಕೊಳ್ಳಲು ಅವಕಾಶ ಇದೆ. ಇದು ಅಭಿವೃದ್ಧಿಶೀಲ ದೇಶಗಳಿಗೆ ಮಾರಕವಾಗುತ್ತದೆ ಎಂಬುದು ಇನ್ನೊಂದು ವಾದ.

ಇದನ್ನೂ ಓದಿ: Flipkart vs Consumer: ಬೆಂಗಳೂರಿನಲ್ಲಿ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ ಫ್ಲಿಪ್​ಕಾರ್ಟ್​ಗೆ 20,000 ರೂ ದಂಡ

ನಿರ್ಮಲಾ ಸೀತಾರಾಮನ್ ಹೇಳುವ ಪ್ರಕಾರ, ಭಾರತದಂತಹ ದೇಶದಲ್ಲಿ ವಿದ್ಯುತ್ ಅಥವಾ ಶಕ್ತಿಯ ಮೂಲ ಇನ್ನೂ ಕೂಡ ಕಲ್ಲಿದ್ದಲು ಮೇಲೆ ಅವಲಂಬನೆ ಇದೆ. ನವೀಕರಣ ಇಂಧನ ಮಾತ್ರದಿಂದಲೇ ಸದ್ಯಕ್ಕೆ ಎಲ್ಲಾ ವಿದ್ಯುತ್ ಅಗತ್ಯತೆಗಳನ್ನು ಪೂರೈಸಲು ಆಗುವುದಿಲ್ಲ. ಮರುಬಳಕೆ ಇಂಧನ ಅಥವಾ ರಿನಿವಬಲ್ ಎನರ್ಜಿ ಸೌಕರ್ಯ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಮಯ ಬೇಕಾಗುತ್ತದೆ.

2026ರ ಜನವರಿ 1ರಿಂದ ಜಾಗತಿಕವಾಗಿ ಕಾರ್ಬನ್ ಟ್ಯಾಕ್ಸ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ