ನೆಟ್ಟಗಾಗದ ಪೇಟಿಎಂ ಹಣೆಬರಹ; ಗುರುವಾರ ಅದರ ಷೇರುಬೆಲೆ ಶೇ. 20ರಷ್ಟು ಕುಸಿತ; ಈ ಹೊಸ ಹಿನ್ನಡೆಗೆ ಏನು ಕಾರಣ?

Paytm Share Price: ಪೇಟಿಎಂ ಮಾತೃಸಂಸ್ಥೆ ಒನ್97 ಕಮ್ಯೂನಿಕೇಶನ್ಸ್​ನ ಷೇರುಬೆಲೆ ಡಿ. 7ರಂದು ಶೇ. 20ರಷ್ಟು ಕುಸಿದಿದೆ. 50,000 ರೂಗಿಂತ ಕಡಿಮೆ ಮೌಲ್ಯದ ಸಾಲ ಹೆಚ್ಚು ನೀಡುವುದಿಲ್ಲ ಎಂದು ಪೇಟಿಎಂ ಹೇಳಿದ್ದು ಅದರ ಷೇರು ಹಿನ್ನಡೆಗೆ ಕಾರಣ ಇರಬಹುದು. ಪೇಟಿಎಂ ಷೇರಿನ ಪ್ರೈಸ್ ಟಾರ್ಗೆಟ್ ಅನ್ನು 1,250ರಿಂದ 840 ರೂಗೆ ಇಳಿಸಿತ್ತು ಗೋಲ್ಡ್​ಮನ್ ಸ್ಯಾಕ್ಸ್. ಇದೂ ಕೂಡ ಕುಸಿತಕ್ಕೆ ಕಾರಣವಾಗಿರಬಹುದು.

ನೆಟ್ಟಗಾಗದ ಪೇಟಿಎಂ ಹಣೆಬರಹ; ಗುರುವಾರ ಅದರ ಷೇರುಬೆಲೆ ಶೇ. 20ರಷ್ಟು ಕುಸಿತ; ಈ ಹೊಸ ಹಿನ್ನಡೆಗೆ ಏನು ಕಾರಣ?
ಪೇಟಿಎಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 07, 2023 | 2:24 PM

ನವದೆಹಲಿ, ಡಿಸೆಂಬರ್ 7: ಪೇಟಿಎಂನ ಷೇರುಬೆಲೆ ಇಂದು ಗುರುವಾರ ತೀವ್ರ ಮಟ್ಟದಲ್ಲಿ ಕುಸಿತ ಅನುಭವಿಸಿದೆ. ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯೂನಿಕೇಶನ್ಸ್ (One97 Communications) ಷೇರುಬೆಲೆ ಡಿಸೆಂಬರ್ 7ರಂದು ಶೇ 20ರಷ್ಟು ಇಳಿಕೆ ಕಂಡಿದೆ. ಎರಡು ವರ್ಷದ ಹಿಂದೆ ಷೇರುಪೇಟೆಗೆ ಲಿಸ್ಟ್ ಆದಾಗಿನಿಂದ ಒಂದೇ ದಿನದಲ್ಲಿ ಪೇಟಿಎಂ ಅನುಭವಿಸಿದ ಅತಿದೊಡ್ಡ ಹಿನ್ನಡೆ ಇದಾಗಿದೆ. ನಿನ್ನೆ 812 ರೂ ಇದ್ದ ಅದರ ಷೇರುಬೆಲೆ ಗುರುವಾರ ಬೆಳಗಿನ ವಹಿವಾಟಿನಲ್ಲಿ 662 ರುಪಾಯಿಗೆ ಇಳಿದುಹೋಗಿತ್ತು. ಮಧ್ಯಾಹ್ನ 2 ಗಂಟೆ ಹೊತ್ತಿಗೆ 674 ರುಪಾಯಿಗೆ ಏರಿತ್ತಾದರೂ ಒಂದೇ ದಿನದಲ್ಲಿ 140 ರೂಗಳಿಗೂ ಹೆಚ್ಚು ಕುಸಿತ ಕಂಡಿರುವುದು ಹೌದು.

ಪೇಟಿಎಂ ಷೇರುಬೆಲೆ ಕುಸಿಯಲು ಏನು ಕಾರಣ?

  • ಕಡಿಮೆ ಮೌಲ್ಯದ ಸಾಲವನ್ನು ಹೆಚ್ಚು ನೀಡುವುದಿಲ್ಲ ಎಂದು ಡಿಸೆಂಬರ್ 6ರಂದು ಪೇಟಿಎಂ ಹೇಳಿತ್ತು.
  • ಗೋಲ್ಡ್​ಮ್ಯಾನ್ ಸ್ಯಾಕ್ಸ್ ಸಂಸ್ಥೆಯು ಪೇಟಿಎಂ ಷೇರಿನ ಪ್ರೈಸ್ ಟಾರ್ಗೆಟ್ ಅನ್ನು 1,250 ರೂನಿಂದ 840 ರೂಗೆ ಇಳಿಸಿತ್ತು.

ಗೋಲ್ಡ್​ಮ್ಯಾನ್ ಸ್ಯಾಕ್ಸ್ ಪ್ರಕಾರ ಪೇಟಿಎಂನ ನಿವ್ವಳ ಆದಾಯ ಮೊದಲ ಬಾರಿಗೆ ಮೈನಸ್ ಮಟ್ಟದಿಂದ ಮೇಲೇರುವುದು 2025-26ರಲ್ಲಿ. ಈ ಹಂತಕ್ಕೆ ಪೇಟಿಎಂ ನಿರೀಕ್ಷೆಗಿಂತ ವಿಳಂಬವಾಗಿ ಬರುತ್ತಿದೆ. ಅಂದರೆ ಪೇಟಿಎಂ ಸಂಸ್ಥೆ ಲಾಭದ ಹಳಿಗೆ ಒಂದು ವರ್ಷ ತಡವಾಗಿ ಬರಲಿದೆ. ಈ ಕಾರಣಕ್ಕೆ ಒನ್97 ಕಮ್ಯುನಿಕೇಶನ್ಸ್​ನ ಷೇರು ಪ್ರೈಸ್ ಟಾರ್ಗೆಟ್ ಅನ್ನು ಗೋಲ್ಡ್​ಮ್ಯಾನ್ ಸ್ಯಾಕ್ಸ್ ಇಳಿಸಿರುವುದು.

ಇದನ್ನೂ ಓದಿ: ಭಾರತದ ಮಾರುಕಟ್ಟೆಗಳಿಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮುಗಿಬೀಳುತ್ತಿರುವುದು ಯಾಕೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಸಾಲ ನೀಡಿಕೆಯಲ್ಲಿ ಪೇಟಿಎಂಗೆ ಹಿನ್ನಡೆ

ಪೇಟಿಎಂ ಕೇವಲ ಡಿಜಿಟಲ್ ಪಾವತಿ ಪ್ಲಾಟ್​ಫಾರ್ಮ್ ಮಾತ್ರವಲ್ಲ, ಅದರ ಬ್ಯಾಂಕ್ ಕೂಡ ಇದೆ. 50,000 ರೂ ಗಿತ ಕಡಿಮೆ ಮೊತ್ತದ ಸಾಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡುವುದಿಲ್ಲ. ದೊಡ್ಡ ಮೊತ್ತದ ವೈಯಕ್ತಿಕ ಮತ್ತು ವಾಣಿಜ್ಯ ಸಾಲಗಳಿಗೆ ಒತ್ತು ಕೊಡುತ್ತೇವೆ ಎಂದು ಪೇಟಿಎಂ ಹೇಳಿಕೆ. ಆದರೆ, ಇದು ಪೇಟಿಎಂನ ಸಾಲ ನೀಡಿಕೆಯ ಪ್ರಮಾಣವನ್ನು ತಗ್ಗಿಸುವ ಸಾಧ್ಯತೆ ಇದೆ. ತತ್​ಪರಿಣಾಮವಾಗಿ ಪೇಟಿಎಂ ಆದಾಯವೂ ಕಡಿಮೆ ಆಗುತ್ತದೆ. ಈ ಎಲ್ಲಾ ಲೆಕ್ಕಾಚಾರದ ಮೇಲೆ ಹೂಡಿಕೆದಾರರು ಪೇಟಿಎಂ ಷೇರಿನಿಂದ ಹೊರಹೋಗಿರಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ