AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​ನಲ್ಲಿ ಸಸ್ಯಾಹಾರ, ಮಾಂಸಾಹಾರ ಊಟದ ಬೆಲೆ ಶೇ. 10ರವರೆಗೂ ಹೆಚ್ಚಳ: ವರದಿ

Meals Become Costlier in November: ಟೊಮೆಟೋ, ಈರುಳ್ಳಿ ಬೆಲೆ ಹೆಚ್ಚಳದಿಂದಾಗಿ ನವೆಂಬರ್ ತಿಂಗಳಲ್ಲಿ ವೆಜ್ ಮತ್ತು ನಾನ್​ವೆಜ್ ಊಟದ ವೆಚ್ಚ ಹೆಚ್ಚಾಗಿದೆ. ಕ್ರಿಸಿಲ್ ರೋಟಿ ರೈಸ್ ರೇಟ್ ಇಂಡೆಕ್ಸ್ ಪ್ರಕಾರ ನವೆಂಬರ್​ನಲ್ಲಿ ವೆಜ್ ಥಾಲಿ ಶೇ. 10ರಷ್ಟು ಹೆಚ್ಚಾಗಿದೆ. ಬ್ರಾಯ್ಲರ್ ಚಿಕನ್ ಬೆಲೆ ಕಡಿಮೆಗೊಂಡ ಕಾರಣಕ್ಕೆ ಮಾಂಸಾಹಾರ ಅಡುಗೆ ವೆಚ್ಚದ ಹೆಚ್ಚಳ ಶೇ. 5ಕ್ಕೆ ಸೀಮಿತಗೊಂಡಿದೆ.

ನವೆಂಬರ್​ನಲ್ಲಿ ಸಸ್ಯಾಹಾರ, ಮಾಂಸಾಹಾರ ಊಟದ ಬೆಲೆ ಶೇ. 10ರವರೆಗೂ ಹೆಚ್ಚಳ: ವರದಿ
ಊಟ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 07, 2023 | 12:41 PM

Share

ಮುಖ್ಯಾಂಶಗಳು

  • ಟೊಮೆಟೋ, ಈರುಳ್ಳಿ ಬೆಲೆ ಹೆಚ್ಚಳದಿಂದಾಗಿ ನವೆಂಬರ್ ತಿಂಗಳಲ್ಲಿ ವೆಜ್ ಮತ್ತು ನಾನ್​ವೆಜ್ ಊಟದ ವೆಚ್ಚ ಹೆಚ್ಚಾಗಿದೆ.
  • ಕ್ರಿಸಿಲ್ ರೋಟಿ ರೈಸ್ ರೇಟ್ ಇಂಡೆಕ್ಸ್ ಪ್ರಕಾರ ನವೆಂಬರ್​ನಲ್ಲಿ ವೆಜ್ ಥಾಲಿ ಶೇ. 10ರಷ್ಟು ಹೆಚ್ಚಾಗಿದೆ.
  • ಬ್ರಾಯ್ಲರ್ ಚಿಕನ್ ಬೆಲೆ ಕಡಿಮೆಗೊಂಡ ಕಾರಣಕ್ಕೆ ಮಾಂಸಾಹಾರ ಅಡುಗೆ ವೆಚ್ಚದ ಹೆಚ್ಚಳ ಶೇ. 5ಕ್ಕೆ ಸೀಮಿತಗೊಂಡಿದೆ.

ನವದೆಹಲಿ, ಡಿಸೆಂಬರ್ 7: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಊಟದ ಬೆಲೆ ಹೆಚ್ಚಾಗಿದೆ ಎಂದು ಕ್ರಿಸಿಲ್ ರೇಟಿಂಗ್ ಏಜೆನ್ಸಿಯ ರೋಟಿ ರೈಸ್ ದರ ಸೂಚ್ಯಂಕ (Crisil Ratings Roti Rice Rate Index) ಹೇಳಿದೆ. ಭಾರತೀಯ ಅಡುಗೆಗಳಲ್ಲಿ ಬಹಳ ಸಾಮಾನ್ಯವಾಗಿ ಬಳಕೆ ಮಾಡುವ ಟೊಮೆಟೋ ಮತ್ತು ಈರುಳ್ಳಿಯ ಬೆಲೆ ಹೆಚ್ಚಿರುವುದು ಊಟದ ಬೆಲೆ ಹೆಚ್ಚಳಕ್ಕೆ ಕಾರಣ ಇರಬಹುದು ಎಂಬುದು ರೇಟಿಂಗ್ ಏಜೆನ್ಸಿಯ ಅನಿಸಿಕೆ. ಬೆಲೆ ಏರಿಕೆ ಹೋಟೆಲ್ ಊಟದಲ್ಲಿ ಮಾತ್ರವಲ್ಲ, ಮನೆಯ ಆಹಾರದಲ್ಲೂ ಆಗಿದೆ. ಮನೆಯಲ್ಲಿ ಮಾಡಲಾಗುವ ಸಸ್ಯಾಹಾರ ಅಡುಗೆ ವೆಚ್ಚ ನವೆಂಬರ್ ತಿಂಗಳಲ್ಲಿ ಶೇ. 10ರಷ್ಟು ಹೆಚ್ಚಿದೆ. ಮಾಂಸಾಹಾರ ಅಡುಗೆ ವೆಚ್ಚ ಶೇ. 5ರಷ್ಟು ಹೆಚ್ಚಿದೆ ಎಂದು ಕ್ರಿಸಿಲ್ ಎಂಐ ಅಂಡ್ ಎ ರಿಸರ್ಚ್ ಸಂಸ್ಥೆ ಅಂದಾಜು ಮಾಡಿದೆ.

ಕ್ರಿಸಿಲ್ ಸಂಸ್ಥೆ ಉತ್ತರಭಾರತೀಯ ಶೈಲಿಯ ಅಡುಗೆಯನ್ನು ಗಣನೆಗೆ ತೆಗೆದುಕೊಂಡಿದೆ. ರೋಟಿ, ದಾಲ್, ತರಕಾರಿ, ಮೊಸರು, ಅನ್ನ, ಸಲಾಡ್​ಗಳು ವೆಜ್ ಥಾಲಿಯಲ್ಲಿರುತ್ತವೆ. ತರಕಾರಿಯಲ್ಲಿ ಈರುಳ್ಳಿ, ಟೊಮೆಟೋ, ಆಲೂಗಡ್ಡೆ ಇವೆ. ಇನ್ನು, ಮಾಂಸಾಹಾರ ಊಟದಲ್ಲಿ ದಾಲ್ ಬದಲು ಚಿಕನ್ ಸೇರಿಸಲಾಗುತ್ತದೆ. ಉಳಿದೆಲ್ಲವೂ ಸಸ್ಯಾಹಾರ ಊಟದ ವಸ್ತುಗಳೇ ಇರುತ್ತವೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗಳಿಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮುಗಿಬೀಳುತ್ತಿರುವುದು ಯಾಕೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಈ ಎರಡೂ ಊಟದಲ್ಲಿ ಈರುಳ್ಳಿ, ಟೊಮೆಟೋ ಮತ್ತು ಆಲೂಗಡ್ಡೆಗಳ ಬಳಕೆ ಸಾಮಾನ್ಯವಾಗಿದೆ. ಕಳೆದ ತಿಂಗಳು, ಅಂದರೆ ನವೆಂಬರ್​ನಲ್ಲಿ ಟೊಮೆಟೋ ಮತ್ತು ಈರುಳ್ಳಿ ಬೆಲೆ ಕ್ರಮವಾಗಿ ಶೇ. 35 ಮತ್ತು ಶೇ. 58ರಷ್ಟು ಹೆಚ್ಚಾಗಿತ್ತು. ಇದು ಅಡುಗೆ ವೆಚ್ಚವನ್ನು ಹೆಚ್ಚಿಸಿದೆ.

ಆದರೆ, ಮಾಂಸಾಹಾರ ಊಟಕ್ಕಿಂತ ಸಸ್ಯಾಹಾರ ಊಟದ ವೆಚ್ಚ ಹೆಚ್ಚು ಇತ್ತು. ಇದಕ್ಕೆ ಕಾರಣ ಮಾಂಸಾಹಾರ ಊಟದಲ್ಲಿ ಬಳಸುವ ಬ್ರಾಯ್ಲರ್ ಚಿಕನ್ ಬೆಲೆ ಶೇ. 3ರವರೆಗೆ ಕಡಿಮೆ ಆಗಿದ್ದುದು. ಆದರೆ, ಈರುಳ್ಳಿ ಮತ್ತು ಟೊಮೆಟೋ ಪ್ರಧಾನವಾಗಿರುವ ಸಸ್ಯಾಹಾರ ಊಟ ಗಣನೀಯವಾಗಿ ಹೆಚ್ಚಾಗಿದೆ.

ಇದನ್ನೂ ಓದಿ: Flipkart vs Consumer: ಬೆಂಗಳೂರಿನಲ್ಲಿ ಎಂಆರ್​ಪಿಗಿಂತ ಹೆಚ್ಚಿನ ಬೆಲೆಗೆ ಶಾಂಪೂ ಮಾರಿದ ಫ್ಲಿಪ್​ಕಾರ್ಟ್​ಗೆ 20,000 ರೂ ದಂಡ

ಜನವರಿಯಿಂದ ಮೇ ತಿಂಗಳವರೆಗೆ ವೆಜ್ ಊಟದ ಬೆಲೆ ಅತ್ಯಂತ ಕಡಿಮೆ ಇತ್ತು. ಇದಕ್ಕೆ ಕಾರಣ ಆ ಸಂದರ್ಭದಲ್ಲಿ ಈರುಳ್ಳಿ, ಟೊಮೆಟೋ ಮತ್ತು ಎಣ್ಣೆ ಬೆಲೆ ಕಡಿಮೆಗೊಂಡಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಟೊಮೆಟೋ ಬೆಲೆ ಏರಿಕೆಯಿಂದಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಊಟದ ಬೆಲೆ ಹೆಚ್ಚಾಗಿತ್ತು. ಆಗಸ್ಟ್ ತಿಂಗಳಲ್ಲಿ ವೆಜ್ ಥಾಲಿ ಬೆಲೆ ಶೇ. 24ರಷ್ಟು ಹೆಚ್ಚಾದರೆ, ನಾನ್ ವೆಜ್ ಥಾಲಿ ಬೆಲೆ ಶೇ. 13ರಷ್ಟು ಹೆಚ್ಚಾಗಿತ್ತು.

ಕ್ರಿಸಿಲ್​ನ ರೋಟಿ ರೈಸ್ ರೇಟ್ ಇಂಡೆಕ್ಸ್​ನಲ್ಲಿ ಭಾರತದ ನಾಲ್ಕೂ ಕಡೆಗಳ ಸರಾಸರಿ ಅಡುಗೆ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Thu, 7 December 23

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ