ಭಾರತದ ಮಾರುಕಟ್ಟೆಗಳಿಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮುಗಿಬೀಳುತ್ತಿರುವುದು ಯಾಕೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

Why FIIs Flowing Into Indian Markets: ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಡಿಸೆಂಬರ್ ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಿಸಿದ್ದಾರೆ. ಭಾರತದ ಆರ್ಥಿಕತೆ ಗರಿಗೆದರಿರುವುದು ಸೇರಿದಂತೆ ಇದಕ್ಕೆ ಕೆಲ ಪ್ರಮುಖ ಕಾರಣಗಳಿರಬಹುದು. ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬಂದಿರುವುದೂ ಹೂಡಿಕೆದಾರರನ್ನು ಆಕರ್ಷಿಸಿರಬಹುದು.

ಭಾರತದ ಮಾರುಕಟ್ಟೆಗಳಿಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮುಗಿಬೀಳುತ್ತಿರುವುದು ಯಾಕೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು
ಷೇರು ಮಾರುಕಟ್ಟೆ
Follow us
|

Updated on:Dec 07, 2023 | 11:38 AM

ನವದೆಹಲಿ, ಡಿಸೆಂಬರ್ 7: ಭಾರತದ ಷೇರು ಮಾರುಕಟ್ಟೆ ಉಚ್ಛ್ರಾಯ ಸ್ಥಿತಿ ತಲುಪಿದೆ. ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ವಹಿವಾಟು ಬಹಳ ಹೆಚ್ಚಿದೆ. ಈ ವಿಪರೀತ ಏರಿಕೆಗೆ ಪ್ರಮುಖ ಕಾರಣವಾಗಿರುವುದು ವಿದೇಶೀ ಸಾಂಸ್ಥಿಕ ಹೂಡಿಕೆಗಳು (FII- Foreign Institutional Investors). ಡಿಸೆಂಬರ್ ತಿಂಗಳಲ್ಲಿ ಭಾರತದ ಷೇರುಮಾರುಕಟ್ಟೆಗಳಲ್ಲಿ ವಿದೇಶೀ ಹೂಡಿಕೆದಾರರು ಅಕ್ಷರಶಃ ಮುಗಿಬಿದ್ದಿದ್ದಾರೆ. ನಿನ್ನೆಯವರೆಗಿನ (ಡಿ. 6) ದತ್ತಾಂಶದ ಪ್ರಕಾರ ಕ್ಯಾಷ್ ಸೆಗ್ಮೆಂಟ್​ನಲ್ಲಿ ಎಫ್​ಐಐಗಳು 8,800ಕ್ಕೂ ಹೆಚ್ಚು ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ಫಾರೀನ್ ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್​ಗಳು ಭಾರತದ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಗಿಬಿದ್ದಿರುವುಕ್ಕೆ ಒಂದು ನಿರ್ದಿಷ್ಟ ಕಾರಣ ಕೊಡಲು ಆಗುವುದಿಲ್ಲ. ಪ್ರಸಕ್ತ ಸಂದರ್ಭದಲ್ಲಿ ಬಹು ಅಂಶಗಳು ಇದಕ್ಕೆ ಕಾರಣ ಇವೆ:

  1. ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು
  2. ಭಾರತದ ಆರ್ಥಿಕತೆ ಬಗ್ಗೆ ಎಲ್ಲೆಡೆ ಸಕಾರಾತ್ಮಕ ಅಂದಾಜುಗಳು
  3. ಅಮೆರಿಕದ ಬಾಂಡ್ ರಿಟರ್ನ್ ಕಡಿಮೆ ಆಗಿರುವುದು
  4. ಭಾರತೀಯ ಷೇರು ಮಾರುಕಟ್ಟೆ ಮೌಲ್ಯ ಹೆಚ್ಚಳ
  5. ಭಾರತೀಯ ರುಪಾಯಿ ಕರೆನ್ಸಿ ಮೌಲ್ಯ ಕಡಿಮೆ ಆಗಿರುವುದು
  6. ಭಾರತೀಯ ಸರ್ಕಾರಿ ಬಾಂಡ್​ಗಳ ಪ್ರಭಾವ ಹೆಚ್ಚಿರುವುದು

ಇದನ್ನೂ ಓದಿ: ನಮ್ಮ ಮಾರುಕಟ್ಟೆ ರಕ್ಷಿಸುವುದು ಹೇಗಂತ ಗೊತ್ತು; ವಿಶ್ವದ ಅತ್ಯಂತ ಪ್ರಬಲ ಮಹಿಳೆಯಿಂದ ಚೀನಾಗೆ ಎಚ್ಚರಿಕೆ

ಈ ಅಂಶಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ಇಲ್ಲಿದೆ. ಮೊದಲಿಗೆ, ಬಿಜೆಪಿ ಗೆಲುವಿಗೂ ವಿದೇಶೀ ಹೂಡಿಕೆದಾರರ ಆಕರ್ಷಣೆಗೂ ಏನು ಸಂಬಂಧ? ಒಂದು ದೇಶದಲ್ಲಿ ರಾಜಕೀಯ ಸ್ಥಿರತೆ ಮತ್ತು ಶಾಂತ ಪರಿಸ್ಥಿತಿ ಇದ್ದರೆ ವಿದೇಶೀ ಹೂಡಿಕೆದಾರರು ನಿರಾತಂಕವಾಗಿ ಹೂಡಿಕೆ ಮಾಡಲು ಬರುತ್ತಾರೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿರುವುದು ಎಫ್​ಐಐಗಳ ಕಣ್ಣಿಗೆ ರಾಜಕೀಯ ಸ್ಥಿರತೆಯಾಗಿ ಕಂಡಿರಬಹುದು.

ಇನ್ನು, ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಮೊದಲ ಕ್ವಾರ್ಟರ್​ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್​ನಲ್ಲಿ ಶೇ. 7.6ರಷ್ಟು ಜಿಡಿಪಿ ಬೆಳೆದಿದೆ. ಜಿಎಸ್​ಟಿ ಸಂಗ್ರಹ ಹೆಚ್ಚುತ್ತಿದೆ. ಎಲ್ಲಾ ರೇಟಿಂಗ್ ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ಸಕಾರಾತ್ಮಕವಾಗಿ ಕಾಮೆಂಟ್ ಮಾಡುತ್ತಿವೆ. ಇದು ವಿದೇಶೀಯ ಹೂಡಿಕೆದಾರರನ್ನು ಆಕರ್ಷಿಸಿರಬಹುದು.

ಇದನ್ನೂ ಓದಿ: Forbes Most Powerful Women 2023: ನಿರ್ಮಲಾ ಸೀತಾರಾಮನ್ ಭಾರತದ ಅತ್ಯಂತ ಪ್ರಬಲ ಮಹಿಳೆ; ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ವರು ಭಾರತೀಯ ನಾರಿಯರು

ಅಮೆರಿಕದ ಬಾಂಡ್ ರಿಟರ್ನ್ (US Bond Yield) ಶೇ. 5ರಿಂದ ಶೇ. 4ಕ್ಕೆ ಇಳಿದಿದೆ. ಇದು ಹೂಡಿಕೆದಾರರನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕಡಿಮೆ ಆಗಿರುವುದರಿಂದ ವಿದೇಶೀ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಕಾರಣ ಸಿಕ್ಕಂತಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Thu, 7 December 23