Gautam Adani: ಹೆಚ್ಚುತ್ತಿರುವ ಸಂಪತ್ತು ನಿರ್ವಹಣೆಗೆ ವಿದೇಶದಲ್ಲಿ ಕಚೇರಿ ತೆರೆಯಲಿದ್ದಾರೆ ಗೌತಮ್ ಅದಾನಿ

Gautam Adani; ಅದಾನಿ ಅವರ ವೈಯಕ್ತಿಕ ಸಂಪತ್ತು ಈ ವರ್ಷ 58 ಶತಕೋಟಿ ಡಾಲರ್​ಗೆ ಹೆಚ್ಚಳವಾಗಿದೆ. ‘ಬ್ಲೂಮ್​​ಬರ್ಗ್​’ನ ಶತಕೋಟ್ಯಧಿಪತಿಗಳ ಸೂಚ್ಯಂಕದಲ್ಲಿ ಅದಾನಿ ಸ್ಥಾನ ಪಡೆದಿದ್ದು, ವಿಶ್ವದ ಅತ್ಯಂತ ಶ್ರೀಮಂತರಲ್ಲಿಯೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Gautam Adani: ಹೆಚ್ಚುತ್ತಿರುವ ಸಂಪತ್ತು ನಿರ್ವಹಣೆಗೆ ವಿದೇಶದಲ್ಲಿ ಕಚೇರಿ ತೆರೆಯಲಿದ್ದಾರೆ ಗೌತಮ್ ಅದಾನಿ
ಉದ್ಯಮಿ ಗೌತಮ್ ಅದಾನಿ
Follow us
TV9 Web
| Updated By: Ganapathi Sharma

Updated on:Nov 19, 2022 | 4:44 PM

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gautam Adani) ಹೆಚ್ಚುತ್ತಿರುವ ಸಂಪತ್ತಿನ ನಿರ್ವಹಣೆಗಾಗಿ ವಿದೇಶದಲ್ಲಿ ಕುಟುಂಬದ ಕಚೇರಿ ಆರಂಭಿಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್ (New York) ಅಥವಾ ದುಬೈಯಲ್ಲಿ (Dubai) ಕಚೇರಿ ಆರಂಭಿಸಲು ಅದಾನಿ ಯೋಚಿಸುತ್ತಿದ್ದಾರೆ. ಈ ಕಚೇರಿ ಸ್ಥಾಪನೆಗೆ ಅವರು ಕುಟುಂಬದ ವೈಯಕ್ತಿಕ ನಿಧಿ ಬಳಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್​ಬರ್ಗ್’ ವರದಿ ಮಾಡಿದೆ. ಅದಾನಿ ಗ್ರೂಪ್ ಸ್ಥಾಪಕರು ವಿಶೇಷವಾದ ಕುಟುಂಬ ಕಚೇರಿಗೆ ವ್ಯವಸ್ಥಾಪಕರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಂಪತ್ತು ಹೆಚ್ಚಳದ ಬೆನ್ನಲ್ಲೇ ಕ್ರಮ

ಅದಾನಿ ಅವರ ವೈಯಕ್ತಿಕ ಸಂಪತ್ತು ಈ ವರ್ಷ 58 ಶತಕೋಟಿ ಡಾಲರ್​ಗೆ ಹೆಚ್ಚಳವಾಗಿದೆ. ‘ಬ್ಲೂಮ್​​ಬರ್ಗ್​’ನ ಶತಕೋಟ್ಯಧಿಪತಿಗಳ ಸೂಚ್ಯಂಕದಲ್ಲಿ ಅದಾನಿ ಸ್ಥಾನ ಪಡೆದಿದ್ದು, ವಿಶ್ವದ ಅತ್ಯಂತ ಶ್ರೀಮಂತರಲ್ಲಿಯೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ವಿದೇಶದಲ್ಲಿ ಕಚೇರಿ ತೆರೆಯಲು ಮುಂದಾಗುತ್ತಿರುವುದು ಗೌತಮ್ ಅದಾನಿ ಮತ್ತು ಅವರ ಕುಟುಂಬದವರಲ್ಲಿ ಜಾಗತಿಕ ಮಹತ್ವಾಕಾಂಕ್ಷೆಗಳು ಹೆಚ್ಚುತ್ತಿರುವುದನ್ನು ಬಿಂಬಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅದಾನಿ ಈ ಯೋಜನೆಯನ್ನು ಸಾಕಾರಗೊಳಿಸಿದರೆ, ವೈಯಕ್ತಿಕ ಸಂಪತ್ತು ಮತ್ತು ಹೂಡಿಕೆಗಳ ನಿರ್ವಹಣೆಗಾಗಿ ವಿದೇಶಗಳಲ್ಲಿ ಕಚೇರಿ ಆರಂಭಿಸಿದ ಅತಿ ಶ್ರೀಮಂತರ ಸಾಲಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಬಿಲಿಯನೇರ್ ರೇ ಡಾಲಿಯೊ ಮತ್ತು ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ಸಿಂಗಾಪುರದಲ್ಲಿ ಕಚೇರಿಗಳನ್ನು ಹೊಂದಿದ್ದಾರೆ. ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಕೂಡ ಅಲ್ಲಿ ಕಚೇರಿ ತೆರೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಕಳೆದ ತಿಂಗಳು ‘ಬ್ಲೂಮ್​ಬರ್ಗ್’ ವರದಿ ತಿಳಿಸಿತ್ತು.

ಇದನ್ನೂ ಓದಿ: Asia’s Richest Person: ಗೌತಮ್ ಅದಾನಿ ಸಂಪತ್ತು 1,612 ಕೋಟಿ ರೂ ಏರಿಕೆ, ಅದಾನಿ ಈಗ ನಂ.1

ವಿದೇಶದಲ್ಲಿ ಕಚೇರಿ ತೆರೆಯುವ ಸಂಬಂಧ ಅದಾನಿ ಕುಟುಂಬ ಸಲಹೆಗಾರರ ಜತೆ ಮತ್ತು ತೆರಿಗೆ ಸಮಾಲೋಚಕರ ಜತೆ ಮಾತುಕತೆ ನಡೆಸುತ್ತಿದೆ. ಕಚೇರಿಯ ಸ್ಥಳ ಇನ್ನೂ ಅಂತಿಮಗೊಂಡಿಲ್ಲ. ಇದು ಸಮಾಲೋಚಕರ ಸಲಹೆಯಂತೆ ಬದಲಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಈ ವಿಚಾರವಾಗಿ ಅದಾನಿ ಗ್ರೂಪ್​ನ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ.

ಅದಾನಿ ಕುಟುಂಬದ ದುಬೈ ನಂಟು

ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ ದುಬೈಯಲ್ಲಿದ್ದು, ಅಲ್ಲಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಸಿಂಗಾಪುರ ಮತ್ತು ಜಕಾರ್ತಗಳಲ್ಲಿನ ವ್ಯವಹಾರಗಳನ್ನೂ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ’ಯ ಪ್ರಕಾರ, ವಿನೋದ್ ಅವರು ಶ್ರೀಮಂತ ಅನಿವಾಸಿ ಭಾರತೀಯರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Thu, 17 November 22

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ