Fuel Price Today: ನಿಮ್ಮ ನಗರದಲ್ಲಿ ಇಂದಿನ CNG ದರ ಎಷ್ಟು? ಇಳಿಕೆ ಸಾಧ್ಯತೆ ಇದೆಯಾ?
ಮೌಲ್ಯ ವರ್ಧಿತ ತೆರಿಗೆ ಕಡಿತದ ನಂತರ (VAT)ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 96.72 ರೂ. ಇದ್ದರೆ ಡೀಸೆಲ್ 89.62 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಇದ್ದರೆ ಡೀಸೆಲ್ 94.27 ರೂ. ಇದೆ. ಬೆಂಗಳೂರಿನಲ್ಲಿ ಡೀಸೆಲ್ 87.89 ರೂ. ಆದರೆ CNG ಬೆಲೆ 83.00 ರೂ. ಇದೆ.
ನವದೆಹಲಿ: ಇಂಧನ ದರ ಏರಿಕೆ ಮತ್ತು ಇಳಿಕೆ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾದರೆ ನೀವು ವಾಸ ಮಾಡುತ್ತಿರುವ ನಗರದಲ್ಲಿ ತೈಲ ಮತ್ತು ಸಿಎನ್ಜಿ ದರ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬನ್ನಿ..
ಮೌಲ್ಯ ವರ್ಧಿತ ತೆರಿಗೆ ಕಡಿತದ ನಂತರ (VAT)ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 96.72 ರೂ. ಇದ್ದರೆ ಡೀಸೆಲ್ 89.62 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಇದ್ದರೆ ಡೀಸೆಲ್ 94.27 ರೂ. ಇದೆ. ಬೆಂಗಳೂರಿನಲ್ಲಿ ಡೀಸೆಲ್ 87.89 ರೂ. ಆದರೆ CNG ಬೆಲೆ 83.00 ರೂ. ಇದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದರ ಕಳೆದ ಕೆಲ ದಿನಗಳಿಂದ ಒಂದೇ ಸಮನಾಗಿರುವುದರಿಂದ ದರದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಬಹುದಾಗಿದೆ.
ಈ ವರ್ಷದ ಮೇ 22 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 6 ರೂ. ಮತ್ತು ಪೆಟ್ರೋಲ್ ಮೇಲಿನ ಸುಂಕವನ್ನು 8 ರೂ. ಇಳಿಕೆ ಮಾಡಿದ್ದರು. ವಿವಿಧ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ವಿಧಿಸುವ ವ್ಯಾಟ್ ತೈಲ ದರದ ವ್ಯತ್ಯಾಸಕ್ಕೆ ಬಹುಮುಖ್ಯ ಕಾರಣವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಏರಿಕೆ ಮತ್ತು ಇಳಿಕೆ ನೇರವಾದ ಪರಿಣಾಮ ಬೀರಲಿದೆ.
ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ದರ ಪಟ್ಟಿ
ಕ್ರಮ ಸಂಖ್ಯೆ | ನಗರ | ಪೆಟ್ರೋಲ್ | ಡಿಸೇಲ್ | ಸಿಎನ್ ಜಿ |
1 | ನವದೆಹಲಿ | ₹96.72 | ₹89.62 | ₹75.61 |
2 | ಮುಂಬೈ | ₹106.31 | ₹94.27 | ₹86.00 |
3 | ಕೋಲ್ಕತ್ತಾ | ₹106.03 | ₹92.76 | ₹81.61 |
4 | ನೋಯ್ಡಾ | ₹96.79 | ₹89.96 | ₹78.17 |
5 | ಗುರುಗ್ರಾಮ್ | ₹97.10 | ₹89.96 | ₹83.94 |
6 | ಹೈದರಾಬಾದ್ | ₹109.66 | ₹97.82 | ₹90.00 |
7 | ಚಂಡೀಗಢ | ₹96.20 | ₹84.26 | ₹82.00 |
8 | ಚೆನ್ನೈ | ₹102.63 | ₹94.24 | ₹81.90 |
9 | ಬೆಂಗಳೂರು | ₹101.94 | ₹87.89 | ₹83.00 |
10 | ಪಾಟ್ನಾ | ₹108.12 | ₹94.86 | ₹72.96 |
11 | ಜೈಪುರ | ₹108.08 | ₹93.36 | ₹85.88 |
ಕೃಪೆ: ಮಧುಸೂಧನ ಹೆಗಡೆ
Published On - 2:06 pm, Wed, 17 August 22