AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಕರಡಿ ಹಿಡಿತದಿಂದ ಷೇರುಪೇಟೆ ಮುಕ್ತ: 60 ಸಾವಿರ ದಾಟಿದ ಬಿಎಸ್​ಇ, 17,800 ಮೀರಿದ ಎನ್​ಎಸ್​ಇ

NSE: ಅಮೆರಿಕ ಷೇರುಪೇಟೆಯಲ್ಲಿಯೂ ಮುನ್ನಡೆ ದಾಖಲಾಗಿದ್ದು ಹಾಗೂ ಏಷ್ಯಾದ ಪ್ರಮುಖ ಷೇರುಪೇಟೆಗಳು ಹೆಚ್ಚಿನ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ್ದು ಭಾರತದ ಹೂಡಿಕೆದಾರರಲ್ಲಿಯೂ ಹೊಸ ಆಸೆ ಹುಟ್ಟಿಸಿದೆ.

Share Market: ಕರಡಿ ಹಿಡಿತದಿಂದ ಷೇರುಪೇಟೆ ಮುಕ್ತ: 60 ಸಾವಿರ ದಾಟಿದ ಬಿಎಸ್​ಇ, 17,800 ಮೀರಿದ ಎನ್​ಎಸ್​ಇ
ಸಾಂದರ್ಭಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 17, 2022 | 10:55 AM

Share

ಮುಂಬೈ: ಅಮೆರಿಕ ಸೇರಿದಂತೆ ವಿಶ್ವದ ಹಲವು ಪ್ರಮುಖ ದೇಶಗಳಲ್ಲಿ ಆರ್ಥಿಕ ಹಿಂಜರಿತ ಭೀತಿ ಆವರಿಸಿಕೊಂಡಿರುವ ನಡುವೆಯೇ ಭಾರತೀಯ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳು ಏರಿಕೆ ದಾಖಲಿಸಿವೆ. ಮುಂಬೈ ಷೇರುಪೇಟೆಯು (Bombay Stock Exchange – BSE) ಬೆಳಿಗ್ಗೆ 10.30ರ ಹೊತ್ತಿಗೆ 60,123.33 ಅಂಶ ದಾಟಿತ್ತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕವು (National Stock Exchange – NSE) ಇದೇ ಹೊತ್ತಿಗೆ 17,912.80 ಅಂಶಗಳ ಎತ್ತರ ದಾಖಲಿಸಿದೆ. ಬಿಎಸ್​ಇ 60 ಸಾವಿರ ಮತ್ತು ಎನ್​ಎಸ್​ಇ 17,800 ಅಂಶಗಳನ್ನು ದಾಟಿರುವುದು ಮಹತ್ವದ ವಿದ್ಯಮಾನ ಎಂದೇ ಹೂಡಿಕೆ ಕ್ಷೇತ್ರವು ವಿಶ್ಲೇಷಿಸುತ್ತಿದೆ. ಸಣ್ಣ ಮತ್ತು ಮಧ್ಯ ಪ್ರಮಾಣದ (Small and Midcap) ಕಂಪನಿಗಳ ಸರಾಸರಿ ಮೌಲ್ಯ ಆಧರಿಸಿ ಪ್ರತಿಫಲಿಸುವ ಮಿಡ್-ಸ್ಮಾಲ್​ಕ್ಯಾಪ್ ಇಂಡಿಸಿಸ್ ಮೌಲ್ಯ ಶೇ 0.50 ಹೆಚ್ಚಾಗಿದೆ.

ಅಮೆರಿಕ ಷೇರುಪೇಟೆಯಲ್ಲಿಯೂ ಮುನ್ನಡೆ ದಾಖಲಾಗಿದ್ದು ಹಾಗೂ ಏಷ್ಯಾದ ಪ್ರಮುಖ ಷೇರುಪೇಟೆಗಳು ಹೆಚ್ಚಿನ ಮೌಲ್ಯದೊಂದಿಗೆ ವಹಿವಾಟು ಆರಂಭಿಸಿದ್ದು ಭಾರತದ ಹೂಡಿಕೆದಾರರಲ್ಲಿಯೂ ಹೊಸ ಆಸೆ ಹುಟ್ಟಿಸಿದೆ. ಇಂದು ಷೇರುಪೇಟೆ ಎತ್ತರದ ವಹಿವಾಟು ಆರಂಭಿಸಲು ಇದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಜಾಗತಿಕ ಸಂವೇದಿ ಸೂಚ್ಯಂಕಗಳಿಗೆ ಸರಿಸಮನಾಗಿ ಭಾರತದ ಷೇರುಪೇಟೆಯು ಸಹ ಇತ್ತೀಚಿನ ದಿನಗಳಲ್ಲಿ ಸತತ ಕುಸಿತ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಷೇರುಪೇಟೆ ನಿಧಾನವಾಗಿ ಕರಡಿ ಹಿಡಿತಕ್ಕೆ (Bear Market) ಸಿಲುಕುತ್ತಿದೆ ಎಂಬ ಮಾತುಗಳು ಕೇಳಿ ಬರಲು ಆರಂಭಿಸಿ, ಹೂಡಿಕೆದಾರರ ಆತ್ಮವಿಶ್ವಾಸ ಕುಸಿಯುತ್ತಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (Foreign Institutional Investors – FII) ಭಾರತದ ಕಂಪನಿಗಳಲ್ಲಿ ಮಾಡಿದ್ದ ಹೂಡಿಕೆ ಹಿಂಪಡೆಯುವ ಪ್ರಕ್ರಿಯೆ ಶುರು ಮಾಡಿದ್ದರು. ಆದರೆ ಭಾರತೀಯ ಮ್ಯೂಚುವಲ್ ಫಂಡ್, ವಿಮಾ ಕಂಪನಿಗಳು ಷೇರುಗಳನ್ನು ಖರೀದಿಸುವ ಮೂಲಕ ಮಾರುಕಟ್ಟೆಗೆ ಸ್ಥಿರತೆ ಮರಳುವಂತೆ ಮಾಡಿದ್ದವು. ಇದೀಗ ಹೂಡಿಕೆದಾರರ ವಿಶ್ವಾಸ ಮರುಸ್ಥಾಪನೆಯಾಗಿದ್ದು, ಷೇರುಪೇಟೆ ಸತತ ಏರಿಕೆ ದಾಖಲಿಸುತ್ತಿದೆ.

‘ಭಾರತದ ಷೇರುಪೇಟೆ ಕರಡಿ ಹಿಡಿತದಲ್ಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಲೆಂದೇ ಈಗ ವಿಜೃಂಭಿಸುತ್ತಿದೆ ಎಂಬ ವಿಶ್ಲೇಷಣೆಗಳನ್ನು ಸಂಪೂರ್ಣ ಒಪ್ಪಲು ಸಾಧ್ಯವಿಲ್ಲ. ಭಾರತದ 50 ಅತಿದೊಡ್ಡ ಕಂಪನಿಗಳ ಬಂಡವಾಳ ಗಾತ್ರ ಪ್ರತಿನಿಧಿಸುವ ನಿಫ್ಟಿ50 (Nifty50) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತಲೂ ಕೇವಲ ಶೇ 4.3 ಅಂಶಗಳಷ್ಟೇ ಕಡಿಮೆಯಿದೆ. ಅಮೆರಿಕದ ಎಸ್​ಅಂಡ್​​ಪಿ500, ನಾಸ್​ಡಾಕ್ ಸಹ ಪುಟಿದೆದ್ದಿವೆ. ಕಳೆದ ಜೂನ್​ನಿಂದ ಈಚೆಗೆ ಅಮೆರಿಕ ಷೇರುಪೇಟೆ ಶೇ 24ರಷ್ಟು ಏರಿಕೆ ಕಂಡಿದೆ’ ಎಂದು ಜಿಯೊಜಿತ್​ ಫೈನಾನ್ಷಿಯಲ್ ಸರ್ವೀಸಸ್​ನ ಮುಖ್ಯ ಹೂಡಿಕೆ ಕಾರ್ಯತಂತ್ರ ನಿಪುಣ ವಿ.ಕೆ.ವಿಜಯ್​ಕುಮಾರ್ (VK Vijaykumar) ಹೇಳಿದರು.

ಅಮೆರಿಕದಲ್ಲಿಯೂ ಹಣದುಬ್ಬರ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್ ಬಡ್ಡಿದರಗಳನ್ನು ಈ ಹಿಂದಿನಂತೆ ಹೆಚ್ಚಿಸುವ ಸಾಧ್ಯತೆ ಕಡಿಮೆಯಿದೆ. ಭಾರತದಲ್ಲಿಯೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಖರೀದಿ ಮುಂದುವರಿಸಿದ್ದಾರೆ. ಹೀಗಾಗಿ ಮುಂದಿನ ಕೆಲ ದಿನಗಳವರೆಗೆ ಷೇರುಪೇಟೆ ಮೌಲ್ಯ ಇದೇ ರೀತಿ ಹೆಚ್ಚುತ್ತಾ ಸಾಗಲಿದೆ. ಈ ಅವಧಿಯಲ್ಲಿ ಯಾವುದೇ ಕಂಪನಿಯನ್ನು ಅಡ್ಡಾದಿಡ್ಡಿ ಖರೀದಿ ಅಥವಾ ಮಾರಾಟ ಮಾಡಬಾರದು. ಕಡಿಮೆ ಮೊತ್ತಕ್ಕೆ ಸಿಗುವ ಉತ್ತಮ ಕಂಪನಿಗಳ ಖರೀದಿಗೆ ಗಮನ ಹರಿಸಬೇಕು’ ಎಂದು ಅವರು ಕಿವಿಮಾತು ಹೇಳಿದ್ದಾರೆ.

Published On - 10:54 am, Wed, 17 August 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ