ನವದೆಹಲಿ, ಮಾರ್ಚ್ 5: ಇದೇ ಶುಕ್ರವಾರ (ಮಾ. 8) ಇರುವ ಮಹಾಶಿವರಾತ್ರಿ ಹಬ್ಬಕ್ಕೆ (Mahashivaratri festival) ಸಾರ್ವತ್ರಿಕ ರಜೆ ಇದೆ. ಆದರೆ, ದೇಶದ ಎಲ್ಲೆಡೆಯೂ ರಜೆ ಎನ್ನುವಂತಿಲ್ಲ. ಆರ್ಬಿಐ ಕ್ಯಾಲಂಡರ್ ಪ್ರಕಾರ ಮಾರ್ಚ್ 8 ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಶುಕ್ರವಾರ ಬ್ಯಾಂಕ್ ಬಂದ್ ಆಗಿರುತ್ತವೆ. ಮಾರ್ಚ್ ತಿಂಗಳಲ್ಲಿ ಒಟ್ಟು ಇರುವ 14 ದಿನಗಳ ರಜೆಗಳ ಪೈಕಿ ಮಹಾಶಿವರಾತ್ರಿಯದ್ದೂ ಒಂದು. ಮಾರ್ಚ್ 8ರಿಂದ 10ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕುಗಳು ಬಾಗಿಲು ಮುಚ್ಚಿರುತ್ತವೆ.
ಕರ್ನಾಟಕ, ಉತ್ತರಾಖಂಡ್, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹಿಮಾಚಲಪ್ರದೇಶ, ಬಿಹಾರ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಮಾರ್ಚ್ 8, ಶುಕ್ರವಾರ ರಜೆ ಇದೆ.
ಆರ್ಬಿಐ ಕ್ಯಾಲಂಡರ್ನಲ್ಲಿ ಮಾರ್ಚ್ 8ರಂದು ರಜೆ ಇರುವ ನಗರಗಳ ಪಟ್ಟಿ ಮಾಡಲಾಗಿದೆ. ಅದರ ಪ್ರಕಾರ, ಬೆಂಗಳೂರು, ಅಹ್ಮದಾಬಾದ್, ಬೇಲಾಪುರ್, ಭೋಪಾಲ್, ಭುಬನೇಶ್ವರ್, ಡೆಹ್ರಾಡೂನ್, ಹೈದರಾಬಾದ್, ಜಮ್ಮು, ಕಾನಪುರ್, ಕೊಚ್ಚಿ, ಲಕ್ನೋ, ಮುಂಬೈ, ನಾಗಪುರ್, ರಾಯಪುರ್, ರಾಂಚಿ, ಶಿಮ್ಲಾ, ಶ್ರೀನಗರ್, ತಿರುವನಂತಪುರಂ ನಗರಗಳನ್ನು ಹೆಸರಿಸಲಾಗಿದೆ.
ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ
ಇದನ್ನೂ ಓದಿ: ಗೂಗಲ್ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್ಗಳ ನೈಜ ಉಪಯೋಗ ಕಂಡುಹಿಡಿಯಿರಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ