ಗೂಗಲ್​ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್​ಗಳ ನೈಜ ಉಪಯೋಗ ಕಂಡುಹಿಡಿಯಿರಿ

Real world Use of Quantum computing: ಕ್ವಾಂಟಂ ಕಂಪ್ಯೂಟಿಂಗ್ ಭವಿಷ್ಯದ ಕ್ರಾಂತಿಕಾರಿ ತಂತ್ರಜ್ಞಾನ ಇರಬಹುದು. ಆದರೆ, ಸದ್ಯದ ಪ್ರಾಯೋಗಿಕ ಜಗತ್ತಿಗೆ ಅದು ಉಪಯೋಗ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ವಾಂಟಂ ಕಂಪ್ಯೂಟಿಂಗ್ ಅನ್ನು ರಿಯಲ್ ವರ್ಲ್ಡ್ ಅಪ್ಲಿಕೇಶನ್​ಗಳಲ್ಲಿ ಹೇಗೆ ಬಳಸಬಹುದು ಎಂಬುದನ್ನು ಅನ್ವೇಷಿಸುತ್ತಿರುವ ಗೂಗಲ್ ಸಂಸ್ಥೆ ಈ ನಿಟ್ಟಿನಲ್ಲ ಸಂಶೋಧನಾ ಸಮುದಾಯಕ್ಕೆ ಮುಕ್ತ ಸ್ಪರ್ಧೆ ಇಟ್ಟಿದೆ. ಇದರಲ್ಲಿ 5 ಮಿಲಿಯನ್ ಡಾಲರ್ ಮೊತ್ತದ ಬಹುಮಾನ ಇಟ್ಟಿದೆ.

ಗೂಗಲ್​ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್​ಗಳ ನೈಜ ಉಪಯೋಗ ಕಂಡುಹಿಡಿಯಿರಿ
ಕ್ವಾಂಟಂ ಕಂಪ್ಯೂಟರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2024 | 12:33 PM

ವಾಷಿಂಗ್ಟನ್, ಮಾರ್ಚ್ 5: ಮುಂಬರುವ ದಿನಗಳಲ್ಲಿ ಕ್ವಾಂಟಂ ವಿಜ್ಞಾನವೇ ಪ್ರಧಾನವಾಗಿರುತ್ತದೆ. ಜಗತ್ತಿನಲ್ಲಿ ಅನೇಕ ಕ್ರಾಂತಿಗಳಿಗೆ ಕ್ವಾಂಟಂ (Quantum science) ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈಗೀಗ ಬಹಳಷ್ಟು ಕ್ವಾಂಟಂ ಕಂಪ್ಯೂಟರುಗಳು ಸೃಷ್ಟಿಯಾಗುತ್ತಿವೆ. ಭಾರತದಲ್ಲೂ ಕೆಲ ಕಂಪನಿಗಳು ಕ್ವಾಂಟಂ ಕಂಪ್ಯೂಟರ್ ಕ್ಷೇತ್ರಕ್ಕೆ ಇಳಿಯುತ್ತಿವೆ. ಈ ಕ್ವಾಂಟಂ ಕಂಪ್ಯೂಟರುಗಳು ಕೆಲ ಕಾರ್ಯಗಳನ್ನು ಈಗಿರುವ ಕಂಪ್ಯೂಟರ್​ಗಳಿಗಿಂತ ಬಹಳ ವೇಗವಾಗಿ ಮಾಡಬಲ್ಲುವು. ವಿಚಿತ್ರ ಎಂದರೆ, ಈ ಕ್ವಾಂಟಂ ಕಂಪ್ಯೂಟರುಗಳು ನೈಜವಾಗಿ ಉಪಯೋಗವಾಗುವಂತಹ ಯಾವ ಕಾರ್ಯವೂ ಈ ಜಗತ್ತಿನಲ್ಲಿ ಇಲ್ಲ. ಅಂದರೆ, ನಮ್ಮ ಜಗತ್ತಿನ ಯಾವುದೇ ಸಮಸ್ಯೆಯನ್ನು (real world applications) ಕ್ವಾಂಟಂ ಕಂಪ್ಯೂಟರ್​ನಿಂದ ಪ್ರಾಯೋಗಿಕವಾಗಿ ಪರಿಹಾರ ಕಂಡುಹಿಡಿಯಬಹುದು ಎನ್ನುವಂಥದ್ದು ಇನ್ನೂವರೆಗೂ ಗೊತ್ತಾಗಿಲ್ಲ. ತಾನು ತಯಾರಿಸಿರುವ ಕ್ವಾಂಟಂ ಕಂಪ್ಯೂಟರ್​ಗಳ ರಿಯಲ್ ವರ್ಲ್ಡ್ ಉಪಯೋಗ ಏನು ಎಂದು ಜಗತ್ತಿಗೆ ಹೇಗೆ ತೋರಿಸಬೇಕು ಎನ್ನುವುದೇ ಗೂಗಲ್​ಗೆ ತಲೆನೋವಾಗಿದೆ. ಈ ಕಾರಣಕ್ಕೆ ಸಾರ್ವಜನಿಕವಾಗಿ ಅಭಿಪ್ರಾಯಗಳನ್ನು ಕಲೆಹಾಕುತ್ತಿದೆ. ಕ್ವಾಂಟಂ ಕಂಪ್ಯೂಟರ್​ಗಳನ್ನು ನೈಜ ಜಗತ್ತಿನ ಸಮಸ್ಯೆಗಳಿಗೆ ಹೇಗೆ ಬಳಕೆ ಮಾಡಬಹುದು ಎಂದು ಪತ್ತೆ ಹಚ್ಚಲು ಸಾರ್ವತ್ರಿಕ ಸ್ಕೀಮ್ ಮುಂದಿಟ್ಟಿದೆ. ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಉತ್ತಮ ಸಲಹೆಗಳಿಗೆ 5 ಮಿಲಿಯನ್ ಡಾಲರ್ ಮೊತ್ತದ ಬಹುಮಾನ ಮುಂದಿಟ್ಟಿದೆ ಗೂಗಲ್.

‘ಹಲವು ವಿಶೇಷ ಗಣಿತ ಸಮಸ್ಯೆಗಳಿಗೆ ಕ್ವಾಂಟಂ ಕಂಪ್ಯೂಟರ್ ಬಹಳ ವೇಗದಲ್ಲಿ ಪರಿಹಾರ ಕೊಡಬಲ್ಲುದು. ಆದರೆ, ರಿಯಲ್ ವರ್ಲ್ಡ್ ಅಪ್ಲಿಕೆಶನ್​ಗಳಿಗೆ ಈ ಕ್ವಾಂಟಂ ಕಂಪ್ಯೂಟರ್ ಅನ್ನು ಹೇಗೆ ಉಪಯೋಗಿಸುವುದು ಎಂಬ ನಿಟ್ಟಿನಲ್ಲಿ ಸಂಶೋಧನೆಗಳಾಗುತ್ತಿವೆ’ ಎಂದು ಗೂಗಲ್​ನ ರಯಾನ್ ಬಾಬ್ಬುಶ್ ಎಂಬುವವರು ಹೇಳಿದ್ದಾರೆ.

ಸಂಶೋಧಕ ಸಮುದಾಯಕ್ಕೆ ಇನ್ನಷ್ಟು ಉತ್ತೇಜನ ಕೊಡಲು ಗೂಗಲ್ ಮತ್ತು ಎಕ್ಸ್​ಪ್ರೈಜ್ ಫೌಂಡೇಶನ್ (XPrize Foundation) ಸಂಸ್ಥೆಗಳು 5 ಬಿಲಿಯನ್ ಡಾಲರ್ ಮೊತ್ತದ ಬಹುಮಾನ ಯೋಜನೆಯನ್ನು ಆರಂಭಿಸಿದೆ. ಪ್ರಾಯೋಗಿಕವಾಗಿ ಬಳಕೆ ಆಗಬಲ್ಲಂತಹ ಹೊಸ ಕ್ವಾಂಟಂ ಅಲ್ಗಾರಿದಂಗಳನ್ನು ಒದಗಿಸುವವರಿಗೆ ಬಹುಮಾನ ಸಿಗಲಿದೆ.

ಇದನ್ನೂ ಓದಿ: ನೀವು ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಚಾರ್ಜ್ ಮಾಡುತ್ತಿದ್ದೀರಾ?: ಆರ್‌ಬಿಐ ಎಚ್ಚರಿಕೆ

ಕ್ವಾಂಟಂ ಕಂಪ್ಯೂಟರ್ ಅಥವಾ ಅಲ್ಗಾರಿದಂನಿಂದ ಪ್ರಾಯೋಗಿಕವಾಗಿ ಸಮಸ್ಯೆಗಳಿಗೆ ಪರಿಹಾರ ಆಗಬೇಕು ಎಂದೇನಿಲ್ಲ. ಆದರೆ, ನೈಜ ಜಗತ್ತಿನ ನಿರ್ದಿಷ್ಟ ಸಮಸ್ಯೆಗೆ ಕ್ವಾಂಟಂ ಕಂಪ್ಯೂಟರ್​ನಿಂದ ಪ್ರಾಯೋಗಿಕವಾಗಿ ಪರಿಹಾರ ಸಾಧ್ಯ ಎಂಬುದನ್ನು ತೋರಿಸಿದರೆ ಸಾಕು. ಅಂಥದ್ದಕ್ಕೆ ಬಹುಮಾನ ಕೊಡಲಾಗುತ್ತದೆ.

ಅಮೆರಿಕದ ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ನಿಗದಿ ಮಾಡಲಾಗಿರುವ ಸಮಸ್ಯೆಗಳನ್ನು ಕ್ವಾಂಟಂ ಅಲ್ಗಾರಿದಂ ಮೂಲಕ ಹೇಗೆ ಪರಿಹರಿಸಬಹುದು, ಈಗ ಲಭ್ಯ ಇರುವ ಕಂಪ್ಯೂಟರ್​ಗಳ ಮೇಲೆ ಈ ಅಲ್ಗಾರಿದಂ ಅನ್ನು ಪ್ರಾಯೋಗಿಕವಾಗಿ ಅಳವಡಿಸಬಹುದಾ ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಲಾಗುತ್ತದೆ.

ಬಹುಮಾನ ಹಂಚಿಕೆ ಹೀಗೆ

ಮೂರು ವರ್ಷದ ಸಂಶೋಧನಾ ಸ್ಪರ್ಧೆಯಲ್ಲಿ ಒಟ್ಟು ಬಹುಮಾನ ಇರುವ 5 ಮಿಲಿಯನ್ ಡಾಲರ್ ಮೊತ್ತವನ್ನು 28 ವಿಜೇತರಿಗೆ ಹಂಚಲಾಗುತ್ತದೆ. ಅತ್ಯುತ್ತಮ ಎನಿಸುವ ಮೊದಲ ಮೂರು ವಿಜೇತರ ನಡುವೆ 3 ಮಿಲಿಯನ್ ಡಾಲರ್ ಹಂಚಿಕೆ ಆಗುತ್ತದೆ. ರನ್ನರ್ ಅಪ್ ಗಳಿಸಿದ ಐವರ ನಡುವೆ 1 ಮಿಲಿಯನ್ ಡಾಲರ್ ವಿತರಣೆ ಆಗುತ್ತದೆ. ಸೆಮಿಫೈನಲ್ ಹಂತ ತಲುಪಿದ 20 ಮಂದಿಗೆ ತಲಾ 50,000 ಡಾಲರ್ ಸಿಗುತ್ತದೆ.

ಇದನ್ನೂ ಓದಿ: ಇಲಾನ್ ಮಸ್ಕ್ ಈಗ ವಿಶ್ವದ ಅತಿಶ್ರೀಮಂತ ಅಲ್ಲ, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಕಷ್ಟದಲ್ಲಿ ಟೆಸ್ಲಾ ಮುಖ್ಯಸ್ಥ

ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ನಿರತರಾಗಿರುವ ಸಂಶೋಧಕರ ಗಮನವನ್ನು ಪ್ರಾಯೋಗಿಕವಾಗಿ ಉಪಯೋಗವಾಗುವಂತಹ ಬಳಕೆ ಕಡೆಗೆ ವರ್ಗಾಯಿಸುವುದು ಸದ್ಯದ ಗುರಿ. ಕ್ವಾಂಟಂ ಕಂಪ್ಯೂಟರ್ ಅನ್ನು ಯಾವುದಕ್ಕೆ ಉಪಯೋಗಿಸಬೇಕು ಎನ್ನುವುದೇ ಈಗ ಸಮಸ್ಯೆಯಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಗೂಗಲ್ ಮತ್ತು ಎಕ್ಸ್​ಪ್ರೈಜ್ ಸಂಸ್ಥೆ 5 ಮಿಲಿಯನ್ ಡಾಲರ್ ಮೊತ್ತದ ಸ್ಪರ್ಧೆ ಮುಂದಿಟ್ಟಿದೆ.

ಈಗಿರುವ ಕಂಪ್ಯೂಟರ್​ಗಳಲ್ಲಿ ಕ್ವಾಂಟಂ ಅಲ್ಗಾರಿದಂ ಅಳವಡಿಕೆ ಅಸಾಧ್ಯ

ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ನಿರತರಾಗಿರುವ ಬಿಲ್ ಫೆಫರ್​ಮ್ಯಾನ್ ಪ್ರಕಾರ, ಮುಂದಿನ ಮೂರು ವರ್ಷದಲ್ಲಿ ಇಂಥ ಅಲ್ಗಾರಿದಂಗಳನ್ನು ಕಂಡುಹಿಡಿಯಲು ಸಾಧ್ಯವಾಗದೇ ಹೋಗಬಹುದು. ಕಂಡು ಹಿಡಿದರೂ ಈಗಿರುವ ಕಂಪ್ಯೂಟರ್ ಹಾರ್ಡ್​ವೇರ್ ಮೂಲಕ ಅದನ್ನು ಅಳವಡಿಸುವುದು ಸಾಧ್ಯವಾಗದೇ ಹೋಗಬಹುದು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ