ಬ್ಯಾಂಕ್ ಶಾಖೆಗೆ ಹೋಗಿ ಮಾಡುವಂಥ ಅಥವಾ ಪೂರ್ತಿಗೊಳಿಸಬೇಕಾದ ಜವಾಬ್ದಾರಿಗಳು ಏನಾದರೂ ಇದ್ದವಾ? ಹಾಗಿದ್ದರೆ ಅದಕ್ಕಾಗಿ ಸೋಮವಾರದ ತನಕ ಕಾಯಲೇಬೇಕು ಬಿಡಿ. ಖಾಸಗಿ ವಲಯವೇ ಇರಲಿ ಅಥವಾ ಸರ್ಕಾರಿ ಬ್ಯಾಂಕ್ಗಳೇ ಆಗಿರಲಿ, ಕೆಲವು ನಗರಗಳಲ್ಲಿ 4 ದಿನಗಳ ಕಾಲ ರಜಾ ಇದೆ. ಆದರೆ ಆನ್ಲೈನ್ ಬ್ಯಾಂಕಿಂಗ್ ವಹಿವಾಟುಗಳಿಗೇನೂ ಸಮಸ್ಯೆ ಆಗಲ್ಲ ಮತ್ತು ಎಟಿಎಂ ಮಶೀನ್ಗಳಿಂದ ಹಣ ತೆಗೆದುಕೊಳ್ಳುವುದಕ್ಕೆ ಏನೂ ತೊಂದರೆ ಇಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಯಾ ರಾಜ್ಯಗಳಿಗೆ ಅನ್ವಯ ಆಗುವಂತೆ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತದ ಬಹುತೇಕ ರಾಜ್ಯಗಳಿಗೆ ಅನ್ವಯ ಆಗುವ ಸಾಮಾನ್ಯ ರಜಾ ದಿನಗಳು ಅಂದರೆ ಅದು ಮೊಹರಂ ಹಾಗೂ ಕೃಷ್ಣಾಷ್ಟಮಿ.
ಆಗಸ್ಟ್ 19- ಗುರುವಾರ
ಆಗಸ್ಟ್ 19ನೇ ತಾರೀಕಿನಂದು ಮೊಹರಂ ಪ್ರಯುಕ್ತ ಬಹುತೇಕ ರಾಜ್ಯಗಳಲ್ಲಿ ರಜಾ ಇದೆ. 17 ನಗರಗಳಲ್ಲಿ ಬ್ಯಾಂಕ್ಗಳು ಕೆಲಸ ನಿರ್ವಹಿಸುವುದಿಲ್ಲ. ಅಗರ್ತಲ, ಅಹ್ಮದಾಬಾದ್, ಬೆಲಾಪುರ್, ಭೋಪಾಲ್, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ಪಾಟ್ನಾ, ರಾಯ್ಪುರ್, ರಾಂಚಿ ಮತ್ತು ಶ್ರೀನಗರ್ ಒಳಗೊಂಡಿವೆ.
ಆಗಸ್ಟ್ 20- ಶುಕ್ರವಾರ
ಆಗಸ್ಟ್ 20ನೇ ತಾರೀಕಿನ ಶುಕ್ರವಾರದಂದು ಕರ್ನಾಟಕ, ಕೇರಳ, ತಮಿಳುನಾಡು ಈ ರಾಜ್ಯಗಳಲ್ಲಿ ಓಣಂ ಪ್ರಯುಕ್ತ ಬ್ಯಾಂಕ್ಗಳಿಗೆ ರಜಾ ಇರುತ್ತದೆ.
ಆಗಸ್ಟ್ 21- ಶನಿವಾರ
ತಿರುಓಣಂ ಪ್ರಯುಕ್ತ ಶನಿವಾರದಂದು ಕೇರಳದಲ್ಲಿ ಬ್ಯಾಂಕ್ಗಳ ವಹಿವಾಟು ಇರುವುದಿಲ್ಲ.
ಆಗಸ್ಟ್ 22- ಭಾನುವಾರ
ಆಗಸ್ಟ್ 22ರ ಭಾನುವಾರ ರಕ್ಷಾಬಂಧನ ಇದೆ. ಅಂದಹಾಗೆ ಎಲ್ಲ ಭಾನುವಾರಗಳಂದು, ಎರಡು ಹಾಗೂ ನಾಲ್ಕನೇ ಶನಿವಾರ ಸಾಮಾನ್ಯ ರಜಾ ದಿನಗಳು.
ಇದನ್ನೂ ಓದಿ: Bank Holidays in August 2021; ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ; ಈ ದಿನಗಳು ವಹಿವಾಟು ಇರಲ್ಲ
RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್
(Bank Holidays Banks To Remain Shut In 4 Days From Today In These States)
Published On - 11:08 am, Thu, 19 August 21