Bank Holidays in August 2021; ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ; ಈ ದಿನಗಳು ವಹಿವಾಟು ಇರಲ್ಲ
Karnataka Bank Holidays in August: 2021ನೇ ಇಸವಿಯ ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ. ಆಗಸ್ಟ್ನಲ್ಲಿ 15 ದಿನಗಳ ಕಾಲ ಬ್ಯಾಂಕ್ಗಳಿಗೆ ರಜಾ ಇದೆ.
2021ರ ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ಗಳ ರಜಾ ದಿನಗಳ (Bank Holidays) ಅಧಿಕೃತ ಪಟ್ಟಿ ಇಲ್ಲಿದೆ. ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿತರಣೆ ಮಾಡಲಾಗುತ್ತದೆ. ವಾರಾಂತ್ಯವಾದ ಭಾನುವಾರಗಳಂದು, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ಗಳಿಗೆ ಸಾಮಾನ್ಯ ರಜಾ ದಿನಗಳಾಗಿವೆ. ಹೀಗೆ ಲೆಕ್ಕ ನೋಡಿದರೆ ಒಟ್ಟು 15 ದಿನಗಳ ತನಕ ಆಗಸ್ಟ್ನಲ್ಲಿ ರಜಾ ಇದೆ. ಈ 15 ದಿನಗಳ ಪೈಕಿ 7 ದಿನಗಳು ಸಾಮಾನ್ಯ ವಾರಾಂತ್ಯದ ರಜಾ ದಿನಗಳು. ಇನ್ನು ಉಳಿದ ಎಂಟು ದಿನಗಳು ಆರ್ಬಿಐನಿಂದ ಲಿಸ್ಟ್ ಆಗಿರುವಂಥ ರಜಾಗಳು. ಇವುಗಳಲ್ಲಿ ಆಯಾ ರಾಜ್ಯಗಳಿಗೆ ಅನುಗುಣವಾಗಿ, ಮತ್ತು ಧಾರ್ಮಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ತಕ್ಕಂತೆ ಇವೆ. ಇನ್ನು ಆರ್ಬಿಐನಿಂದ ರಜಾ ದಿನಗಳನ್ನು ಮೂರು ವಿಭಾಗದ ಅಡಿಯಲ್ಲಿ ವರ್ಗೀಕರಿಸಲಾಗುತ್ತದೆ: “Holiday Under Negotiable Instruments Act”, “Holiday Under Negotiable Instruments Act And Real Time Gross Settlement Holiday” ಮತ್ತು “Banks Closing Of Accounts”.
RBIನಿಂದ ಬಿಡುಗಡೆ ಮಾಡಿರುವ 2021 ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿದೆ: ಆಗಸ್ಟ್ 1- ಭಾನುವಾರ ಆಗಸ್ಟ್ 8- ಭಾನುವಾರ ಆಗಸ್ಟ್ 14- ಎರಡನೇ ಶನಿವಾರ ಆಗಸ್ಟ್ 13- ಶುಕ್ರವಾರ, ದೇಶಭಕ್ತರ ದಿನ (ಇಂಫಾಲ) ಆಗಸ್ಟ್ 15- ಭಾನುವಾರ (ಸ್ವಾತಂತ್ರ್ಯ ದಿನಾಚರಣೆ) ಆಗಸ್ಟ್ 16- ಸೋಮವಾರ- ಪಾರ್ಸೆ ಹೊಸ ವರ್ಷಾಚರಣೆ (ಶಹೇನ್ಶಾಹಿ)/ (ಬೆಲಾಪುರ್, ಮುಂಬೈ ಮತ್ತು ನಾಗ್ಪುರ್) ಆಗಸ್ಟ್ 19- ಗುರುವಾರ- ಮೊಹರಂ (ಅಶೂರ) ಅಗರ್ತಲ, ಅಹ್ಮದಾಬಾದ್, ಬೆಲಾಪುರ್, ಭೋಪಾಲ್, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ಪಾಟ್ನಾ, ರಾಯ್ಪುರ್, ರಾಂಚಿ, ಶ್ರೀನಗರ್). ಆಗಸ್ಟ್ 20- ಶುಕ್ರವಾರ- ಮೊಹರಂ/ಮೊದಲ ಓಣಂ (ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ತಿರುವನಂತಪುರಂ) ಆಗಸ್ಟ್ 21- ಶನಿವಾರ- ತಿರುಓಣಂ (ತಿರುವನಂತಪುರಂ ಮತ್ತು ಕೊಚ್ಚಿ) ಆಗಸ್ಟ್ 22- ಭಾನುವಾರ ಆಗಸ್ಟ್ 23- ಸೋಮವಾರ- ನಾರಾಯಣ ಗುರು ಜಯಂತಿ (ತಿರುವನಂತಪುರಂ, ಕೊಚ್ಚ) ಆಗಸ್ಟ್ 28- ನಾಲ್ಕನೇ ಶನಿವಾರ ಆಗಸ್ಟ್ 29- ಭಾನುವಾರ ಆಗಸ್ಟ್ 30- ಸೋಮವಾರ- ಜನ್ಮಾಷ್ಟಮಿ (ಶ್ರಾವಣ್ ವಾದ್-8)/ಕೃಷ್ಣ ಜಯಂತಿ (ಅಹ್ಮದಾಬಾದ್, ಚಂಡೀಗಡ, ಚೆನ್ನೈ, ಡೆಹ್ರಾಡೂನ್, ಜೈಪುರ್, ಜಮ್ಮು, ಕಾನ್ಪುರ್, ಲಖನೌ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ್ ಹಾಗೂ ಗ್ಯಾಂಗ್ಟಕ್). ಆಗಸ್ಟ್ 31- ಮಂಗಳವಾರ- ಶ್ರೀ ಕೃಷ್ಣ ಅಷ್ಟಮಿ (ಹೈದರಾಬಾದ್)
ಇದನ್ನೂ ಓದಿ: NPA: ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಮಾರ್ಚ್ 31, 2021ರ ಕೊನೆಗೆ 8.34 ಲಕ್ಷ ಕೋಟಿ ರೂಪಾಯಿಗೆ ಇಳಿಕೆ
(RBI official List Of 2021 August Month Banking Holidays There Will Be Only 15 Days Working )
Published On - 7:23 pm, Mon, 26 July 21