Nirmala Sitharaman: ಕೊರೊನಾ ಆರ್ಥಿಕ ಸಂಕಷ್ಟದ ಕಾರಣಕ್ಕೆ 2000 ರೂಪಾಯಿ ನೋಟು ಮುದ್ರಿಸಲ್ಲ ಎಂದ ಕೇಂದ್ರ ಸರ್ಕಾರ

ಕೊವಿಡ್ 19ನಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕು ಎಂಬ ಕಾರಣಕ್ಕೆ ರೂ. 2000ದ ನೋಟನ್ನು ಮುದ್ರಣ ಮಾಡುವುದಿಲ್ಲ. ಸರ್ಕಾರದ ಮುಂದೆ ಅಂಥ ಯೋಜನೆಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Nirmala Sitharaman: ಕೊರೊನಾ ಆರ್ಥಿಕ ಸಂಕಷ್ಟದ ಕಾರಣಕ್ಕೆ 2000 ರೂಪಾಯಿ ನೋಟು ಮುದ್ರಿಸಲ್ಲ ಎಂದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 26, 2021 | 4:09 PM

ಕೊರೊನಾ ಬಿಕ್ಕಟ್ಟಿನಿಂದ ಎದುರಾಗಿರುವ ಆರ್ಥಿಕ ಸಮಸ್ಯೆಯನ್ನು ದಾಟಿಕೊಳ್ಳುವ ಕಾರಣಕ್ಕೆ 2000 ರೂಪಾಯಿ ಕರೆನ್ಸಿ ನೋಟು ಮುದ್ರಿಸುವ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ಲೋಕಸಭೆ ಸದಸ್ಯರೊಬ್ಬರು ಈ ಬಗ್ಗೆ ಕೇಳಿದ ಪ್ರಶ್ನೆಗೆ, “ಇಲ್ಲ” ಎಂಬ ಉತ್ತರವನ್ನು ನಿರ್ಮಲಾ ನೀಡಿದ್ದಾರೆ. 2020-21ರಲ್ಲಿ ಭಾರತದ ಜಿಡಿಪಿ ಅಂದಾಜು ಶೇ 7.3ರಷ್ಟು ಕುಗ್ಗಿದೆ. ಆದರೆ ದೇಶದ ಆರ್ಥಿಕತೆ ಪ್ರಾಥಮಿಕ ಅಂಶಗಳು ಬಲವಾಗಿವೆ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಲಾಕ್​ಡೌನ್​ ಹಿಂದಿನ ಪರಿಸ್ಥಿತಿಗೆ ಮರಳುತ್ತಿರುವಂತೆ ಆರ್ಥಿಕತೆಯ ಮೂಲಾಂಶಗಳು ಆತ್ಮನಿರ್ಭರ್ ಭಾರತದ ಬೆಂಬಲದೊಂದಿಗೆ ಪ್ರಬಲವಾಗಿವೆ. 2020-21ರ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಆರ್ಥಿಕತೆಯನ್ನು ಸ್ಥಿರವಾದ ಚೇತರಿಕೆ ಹಾದಿಯಲ್ಲಿ ತಂದು ನಿಲ್ಲಿಸಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಮಾರ್ಚ್​ನಲ್ಲಿ ಸಂಸತ್​ಗೆ ಮಾಹಿತಿ ನೀಡಿದ್ದ ಸರ್ಕಾರ, ಕಳೆದ ಎರಡು ವರ್ಷದಿಂದ ಎರಡು ಸಾವಿರ ರೂಪಾಯಿಯ ಕರೆನ್ಸಿ ನೋಟನ್ನು ಮುದ್ರಿಸಿಲ್ಲ ಎಂದಿತ್ತು. 2019-20 ಹಾಗೂ 2020-21ನೇ ಇಸವಿಗಳಲ್ಲಿ 2000 ಮುಖಬೆಲೆಯ ಬ್ಯಾಂಕ್​ ನೋಟುಗಳನ್ನು ಮುದ್ರಿಸುವಂತೆ ಮುದ್ರಣಾಲಯದ ಬಳಿ ಯಾವುದೇ ಇಂಡೆಂಟ್ ನೀಡಿಲ್ಲ ಎಂದು ಈ ಹಿಂದೆ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್ ಹೇಳಿದ್ದರು. ನಿರ್ದಿಷ್ಟ ಮುಖಬೆಲೆಯ ಬ್ಯಾಂಕ್​ನೋಟುಗಳನ್ನು ಮುದ್ರಿಸುವುದನ್ನು ಸರ್ಕಾರವು ಆರ್​ಬಿಐ ಅನ್ನು ಸಂಪರ್ಕಿಸಿ, ಸರ್ಕಾರ ನಿರ್ಧರಿಸುತ್ತದೆ. ಸಾರ್ವಜನಿಕರಿಂದ ವಹಿವಾಟಿಗೆ ಬೇಡಿಕೆಯನ್ನು ಗಮನಿಸಿದ ನಂತರದಲ್ಲಿ ನೋಟುಗಳ ಮುದ್ರಣ ಪ್ರಮಾಣವು ತೀರ್ಮಾನವಾಗುತ್ತದೆ.

2019ರಲ್ಲಿ ಆರ್​ಬಿಐ ತಿಳಿಸಿದ್ದಂತೆ 3,542.991 ಮಿಲಿಯನ್ 2000 ರೂಪಾಯಿ ನೋಟುಗಳನ್ನು 2016-17ನೇ ಹಣಕಾಸು ವರ್ಷದಲ್ಲಿ ಮುದ್ರಿಸಿತ್ತು. ಇನ್ನು 2017-18ರಲ್ಲಿ 111.507 ಮಿಲಿಯನ್ ನೋಟುಗಳ ಮುದ್ರಣವಾದವು. 2018-19ರಲ್ಲಿ ಮತ್ತೂ ಕಡಿಮೆಯಾಗಿ 46.690 ಮಿಲಿಯನ್ ತಲುಪಿದೆ. 2016ರ ನವೆಂಬರ್ ತಿಂಗಳಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಣ ಆರಂಭಿಸಲಾಯಿತು. ಅದಕ್ಕೂ ಮುಂಚೆ 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಲಾಯಿತು. ಇದರ ಜತೆಗೆ ಅದಾಗಲೇ ಚಲಾವಣೆಯಲ್ಲಿ ಇದ್ದ 10, 20, 50, 100 ರೂಪಾಯಿಗಳ ಹೊಸ ನೋಟುಗಳನ್ನು ಸಹ ಪರಿಚಯಿಸಲಾಯಿತು.

ಇದನ್ನೂ ಓದಿ: 2000 Rupees Currency Printing: 2019ನೇ ಇಸವಿಯಿಂದಲೇ ರೂ. 2000 ಮುಖಬೆಲೆ ನೋಟು ಮುದ್ರಣವಾಗಿಲ್ಲ ಎಂದ ಆರ್​ಬಿಐ

(2000 Rupees Bank Notes Will Not Print To Overcome Economic Crisis Caused By Covid 19 Said By Nirmala Sitharaman)

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?