ವಿಶ್ವದ ಸಿರಿವಂತರಲ್ಲಿ ಒಬ್ಬರಾಗಿದ್ದ ಚೀನಾದ ಈ ಮಾಜಿ ಶಿಕ್ಷಕ ಈಗ ಬಿಲಿಯನೇರ್ ಕೂಡ ಅಲ್ಲ!

ಚೀನಾದ ಈ ಮಾಜಿ ಶಿಕ್ಷಕ ಹಿಂದೆ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ಆದರೆ ಈಗ ಬಿಲಿಯನೇರ್ ಕೂಡ ಅಲ್ಲ. ಹಾಗಿದ್ದರೆ ಅವರ ಆಸ್ತಿ ಕರಗಲು ಕಾರಣ ಏನು ಎಂಬುದರ ವಿವರ ಇಲ್ಲಿದೆ.

ವಿಶ್ವದ ಸಿರಿವಂತರಲ್ಲಿ ಒಬ್ಬರಾಗಿದ್ದ ಚೀನಾದ ಈ ಮಾಜಿ ಶಿಕ್ಷಕ ಈಗ ಬಿಲಿಯನೇರ್ ಕೂಡ ಅಲ್ಲ!
ಅಫ್ಘಾನಿಸ್ತಾನದ ಕರೆನ್ಸಿ ಅಮೆರಿಕದ ಡಾಲರ್ ವಿರುದ್ಧ 86 ಅಫ್ಘನಿ
TV9kannada Web Team

| Edited By: Srinivas Mata

Jul 26, 2021 | 12:16 PM

ಕೆಲವು ಘಟನೆಗಳು ಹಾಗೇ ರಾತ್ರೋರಾತ್ರಿ- ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಆಗಿ ಹೋಗುತ್ತವೆ. ಈ ಲೇಖನದ ವಿಚಾರಕ್ಕೆ ಬರುವುದಾದರೆ, ಮಾಜಿ ಸ್ಕೂಲ್ ಟೀಚರ್ ಲ್ಯಾರಿ ಚೆನ್ ವಿಶ್ವದ ಅತ್ಯಂತ ಸಿರಿವಂತರಲ್ಲಿ ಒಬ್ಬರಾಗಿದ್ದವರು. ಆದರೆ ಈಗ ಬಿಲಿಯನೇರ್ ಕೂಡ ಅಲ್ಲ. ಚೀನಾದ ಖಾಸಗಿ ಶಿಕ್ಷಣ ವಲಯದ ಮೇಲೆ ಅಲ್ಲಿನ ಸರ್ಕಾರ ಮುರಿದುಕೊಂಡು ಬಿದ್ದಿದೆ. ಅದರ ಫಲಿತ ಇದು. ಅಂದಹಾಗೆ ಈ ಚೆನ್ ಯಾರು ಗೊತ್ತಾ? ಗಾವ್​ಟು ಟೆಕ್​ಎಜು ಇಂಕ್​(Gaotu Techedu Inc.) ಸ್ಥಾಪಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರು. ಈಗ ಅವರ ನಿವ್ವಳ ಆಸ್ತಿ ಮೌಲ್ಯ 33.6 ಕೋಟಿ ಅಮೆರಿಕನ್ ಡಾಲರ್. ಇದು ಬ್ಲೂಮ್​ಬರ್ಗ್​ ಸೂಚ್ಯಂಕದ ಲೆಕ್ಕಾಚಾರ. ಕಳೆದ ಶುಕ್ರವಾರದಂದು ನ್ಯೂಯಾರ್ಕ್​ ಟ್ರೇಡಿಂಗ್​ನಲ್ಲಿ ಚೆನ್​ ಅವರ ಆನ್​ಲೈನ್ ಟ್ಯೂಟರ್ ಕಂಪೆನಿಯ ಷೇರು ಮೌಲ್ಯ ಮೂರನೇ ಎರಡರಷ್ಟು ಕುಸಿದುಹೋಯಿತು. ನಿಯಂತ್ರಕ ನಿಯಮಾವಳಿಗಳಲ್ಲಿ ಬದಲಾವಣೆಗಳಾಗಲಿವೆ ಎಂಬ ವರದಿಯೊಂದಿಗೆ ಆದ ಬದಲಾವಣೆ ಇದು.

ಚೀನಾದಿಂದ ಶನಿವಾರ ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಲಾಯಿತು. ಅದರ ಪ್ರಕಾರ, ಶಾಲಾ ಪಠ್ಯಗಳನ್ನು ಬೋಧಿಸುತ್ತಾ ಲಾಭ ಮಾಡುವ ಕಂಪೆನಿಗಳಿಗೆ ಬಂಡವಾಳ ಸಂಗ್ರಹ ಮಾಡುವ ಅಥವಾ ಸಾರ್ವಜನಿಕವಾಗಿ ಷೇರು ವಿತರಿಸುವುದರಿಂದ ನಿಷೇಧ ಹೇರಿತು. ಇದು ಚೆನ್ ಪಾಲಿಗೆ ಸರಿಯಾದ ಹೊಡೆತ ನೀಡಿತು. ಅಂದಹಾಗೆ ಜನವರಿಯಿಂದ ಗಾವ್​ಟು ಷೇರು ಮೌಲ್ಯ ಕುಸಿಯುತ್ತಾ ಬಂದು 1500 ಕೋಟಿ ಅಮೆರಿಕನ್​ ಡಾಲರ್​ಗೂ ಹೆಚ್ಚು ಸಂಪತ್ತನ್ನು ಚೆನ್ ಕಳೆದುಕೊಂಡಿದ್ದಾರೆ. ಭಾರತದ ರೂಪಾಯಿ ಲೆಕ್ಕಕ್ಕೆ ಇವತ್ತಿಗೆ 1 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ಕರಗಿ ಹೋಗಿದೆ.

ಚೀನಾದಲ್ಲಿ ಟ್ವಿಟ್ಟರ್​ನಂತೆ ಬಳಕೆ ಮಾಡುವ ಮೈಕ್ರೊಬ್ಲಾಗಿಂಗ್ ಸೈಟ್​ Weibo (ವೈಬೋ)ದಲ್ಲಿ ಚೆನ್, ನಿಯಮಾವಳಿಗಳಿಗೆ ನಾವು ಬದ್ಧವಾಗಿರುತ್ತೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪೂರ್ತಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅಂದಹಾಗೆ ತಮ್ಮ ನೂರಾರು ಕೋಟಿ ಆಸ್ತಿ ಕಳೆದುಕೊಂಡವರಲ್ಲಿ ಚೆನ್ ಒಬ್ಬರೇ ಏನಿಲ್ಲ. ಟಿಎಎಲ್ ಎಜುಕೇಷನ್ ಗ್ರೂಪ್ ಸಿಇಒ ಝಾಂಗ್ ಬ್ಯಾಂಗ್​ಕ್ಸಿನ್ ಆಸ್ತಿ 250 ಕೋಟಿ ಯುಎಸ್​ಡಿ ಇಳಿದಿದೆ. ನ್ಯೂ ಓರಿಯೆಂಟಲ್ ಎಜುಕೇಷನ್ ಅಂಡ್ ಟೆಕ್ನಾಲಜಿ ಗ್ರೂಪ್ ಇಂಕ್ ಅಧ್ಯಕ್ಷ ಯು ಮಿನ್​ಹಾಂಗ್ ಕೂಡ ಶತಕೋಟ್ಯಧಿಪತಿ ಹುದ್ದೆಯಿಂದ ಕೆಳಗೆ ಇಳಿದಿದ್ದಾರೆ. ಅದರ ಆಸ್ತಿ 68.5 ಕೋಟಿ ಯುಎಸ್​ಡಿ ಇಳಿದು, 57.9 ಕೋಟಿ ಅಮೆರಿಕನ್ ಡಾಲರ್ ತಲುಪಿದೆ.

ಇದನ್ನೂ ಓದಿ: Jack Ma: ಜಾಕ್ ಮಾಗೆ ಸೇರಿದ ಉದ್ಯಮಗಳ ಕತ್ತು ಹಿಸುಕುತ್ತಿದೆ ಚೀನಾದ ಕಮ್ಯುನಿಸ್ಟ್ ಸರ್ಕಾರ

(This Former Teacher Once Worlds Richest Person Now Not Even A Billionaire )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada