AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್​ನಲ್ಲಿ ಈದ್ ಮಿಲಾದ್ ಸೇರಿ 15 ಬ್ಯಾಂಕ್ ರಜಾದಿನಗಳು; ಇಲ್ಲಿದೆ ಪಟ್ಟಿ

Bank Holidays in 2025 September in Karnataka and across India: ಆರ್​ಬಿಐ ಕ್ಯಾಲಂಡರ್ ಪ್ರಕಾರ 2025ರ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ವಿವಿಧೆಡೆ ಒಟ್ಟು 15 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಕೆಲ ರಾಜ್ಯಗಳಲ್ಲಿ ಹೆಚ್ಚು ರಜೆ ಇದ್ದರೆ ಕೆಲ ರಾಜ್ಯಗಳಲ್ಲಿ ಕಡಿಮೆ ರಜೆ ಇದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ 7 ದಿನ ರಜೆ ಇದೆ. ಇದರಲ್ಲಿ ಈದ್ ಮಿಲಾದ್ ರಜೆಯೂ ಸೇರಿದೆ.

ಸೆಪ್ಟೆಂಬರ್​ನಲ್ಲಿ ಈದ್ ಮಿಲಾದ್ ಸೇರಿ 15 ಬ್ಯಾಂಕ್ ರಜಾದಿನಗಳು; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾದಿನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2025 | 4:59 PM

Share

ನವದೆಹಲಿ, ಆಗಸ್ಟ್ 28: ಆರ್​ಬಿಐ (RBI holiday calendar) ಕ್ಯಾಲಂಡರ್ ಪ್ರಕಾರ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಈದ್ ಮಿಲಾದ್, ಓಣಂ ಹಬ್ಬ ಸೇರಿ ಒಟ್ಟು 15 ದಿನಗಳು ದೇಶದ ವಿವಿಧೆಡೆ ಬ್ಯಾಂಕುಗಳಿಗೆ ರಜೆ ಇದೆ. ನಿಯಮಿತವಾಗಿ ನೀಡಲಾಗುವ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಇದರಲ್ಲಿ ಸೇರಿವೆ. ಕೆಲ ರಜೆಗಳು ಕೆಲ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಸೀಮಿತವಾಗಿವೆ. ದುರ್ಗಾ ಪೂಜೆ, ಮಹಾ ಅಷ್ಟಮಿ, ದುರ್ಗಾಷ್ಟಮಿ ಇತ್ಯಾದಿ ಹಬ್ಬಗಳಿಗೆ ಕೆಲ ರಾಜ್ಯಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರದ ರಜೆ ಬಿಟ್ಟರೆ ಸೆ. 5ಕ್ಕೆ ಈದ್ ಮಿಲಾದ್ ಪ್ರಯುಕ್ತ ರಜೆ ಇರುತ್ತದೆ.

2025ರ ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಸೆ. 3, ಬುಧವಾರ: ಕರ್ಮಪೂಜೆ (ಜಾರ್ಖಂಡ್​ನಲ್ಲಿ ರಜೆ)
  • ಸೆ. 4, ಗುರುವಾರ: ಓಣಂ ಹಬ್ಬ (ಕೇರಳದಲ್ಲಿ ರಜೆ)
  • ಸೆ. 5, ಶುಕ್ರವಾರ: ಈದ್ ಮಿಲಾದ್, ತಿರು ಓಣಂ (ಕರ್ನಾಟಕ, ತಮಿಳುನಾಡು ಸೇರಿ ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಸೆ. 6, ಶನಿವಾರ: ಈದ್ ಮಿಲಾದ್, ಇಂದ್ರಜಾತ್ರ (ಸಿಕ್ಕಿಂ, ಛತ್ತೀಸ್​ಗಡ)
  • ಸೆ. 7: ಭಾನುವಾರದ ರಜೆ
  • ಸೆ. 12, ಶುಕ್ರವಾರ: ಈದ್ ಮಿಲಾದುಲ್ ನಬಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
  • ಸೆ. 13: ಎರಡನೇ ಶನಿವಾರದ ರಜೆ
  • ಸೆ. 14: ಭಾನುವಾರದ ರಜೆ
  • ಸೆ. 21: ಭಾನುವಾರದ ರಜೆ
  • ಸೆ. 22, ಸೋಮವಾರ: ನವರಾತ್ರ ಸ್ಥಾಪನಾ (ರಾಜಸ್ಥಾನದಲ್ಲಿ ರಜೆ)
  • ಸೆ. 23, ಮಂಗಳವಾರ: ಮಹಾರಾಜ ಹರಿಸಿಂಗ್​ಜಿ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
  • ಸೆ. 27: ನಾಲ್ಕನೇ ಶನಿವಾರದ ರಜೆ
  • ಸೆ. 28: ಭಾನುವಾರದ ರಜೆ
  • ಸೆ. 29, ಸೋಮವಾರ: ದುರ್ಗಾ ಪೂಜೆ, ಮಹಾಸಪ್ತಮಿ (ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ರಜೆ)
  • ಸೆ. 30, ಮಂಗಳವಾರ: ಮಹಾ ಅಷ್ಟಮಿ, ದುರ್ಗಾಷ್ಟಮಿ, ದುರ್ಗಾ ಪೂಜೆ (ತ್ರಿಪುರಾ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)

ಇದನ್ನೂ ಓದಿ: ಇಪಿಎಫ್​ಒ 3.0, ಬರಲಿದೆ ಎಟಿಎಂ ವಿತ್​ಡ್ರಾಯಲ್, ಯುಪಿಐ ವಿತ್​ಡ್ರಾಯಲ್ ಇತ್ಯಾದಿ ಸೌಲಭ್ಯ

ಸೆಪ್ಟೆಂಬರ್​ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

  • ಸೆ. 5, ಶುಕ್ರವಾರ: ಈದ್ ಮಿಲಾದ್
  • ಸೆ. 7: ಭಾನುವಾರದ ರಜೆ
  • ಸೆ. 13: ಎರಡನೇ ಶನಿವಾರದ ರಜೆ
  • ಸೆ. 14: ಭಾನುವಾರದ ರಜೆ
  • ಸೆ. 21: ಭಾನುವಾರದ ರಜೆ
  • ಸೆ. 27: ನಾಲ್ಕನೇ ಶನಿವಾರದ ರಜೆ
  • ಸೆ. 28: ಭಾನುವಾರದ ರಜೆ

ಬ್ಯಾಂಕುಗಳ ಕಚೇರಿಗಳಿಗೆ ರಜೆ ಇದ್ದರೂ ಆನ್​ಲೈನ್​ನಲ್ಲಿ ಹೆಚ್ಚಿನ ಬ್ಯಾಂಕಿಂಗ್ ವಹಿವಾಟುಗಳು ಚಾಲ್ತಿಯಲ್ಲಿರುತ್ತವೆ. ಕ್ಯಾಷ್ ವಿತ್​ಡ್ರಾಯಲ್​ಗೆ ಎಟಿಎಂಗಳು 24 ಗಂಟೆಯೂ ತೆರೆದಿರುತ್ತವೆ. ನೆಟ್​ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್​ಗಳ ಸೇವೆ ನಿರಂತರವಾಗಿ ಲಭ್ಯ ಇರುತ್ತವೆ. ಡಿಮ್ಯಾಂಡ್ ಡ್ರಾಫ್ಟ್, ಕ್ಯಾಷ್ ಡೆಪಾಸಿಟ್, ಆರ್​ಟಿಜಿಎಸ್, ಅರ್ಜಿ ಸಲ್ಲಿಕೆ ಇತ್ಯಾದಿ ಕಾರ್ಯಗಳಿಗೆ ಕಚೇರಿಗಳಿಗೆ ಹೋಗಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ