Bank Holidays in November: ನವೆಂಬರ್​ನಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ, ಇಲ್ಲಿದೆ ವಿವರ

| Updated By: ಗಣಪತಿ ಶರ್ಮ

Updated on: Oct 26, 2022 | 5:54 PM

ನವೆಂಬರ್​ ತಿಂಗಳಲ್ಲಿ ಬ್ಯಾಂಕ್​ಗಳಿಗೆ ಬರೋಬ್ಬರಿ 10 ದಿನ ರಜೆ ಇರಲಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ತುಸು ಅಡಚಣೆಯಾಗಬಹುದು.

Bank Holidays in November: ನವೆಂಬರ್​ನಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ನವೆಂಬರ್​ (November) ತಿಂಗಳಲ್ಲಿ ಬ್ಯಾಂಕ್​ಗಳಿಗೆ ಬರೋಬ್ಬರಿ 10 ದಿನ ರಜೆ (Bank Holidays) ಇರಲಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ತುಸು ಅಡಚಣೆಯಾಗಬಹುದು. ಹೀಗಾಗಿ ಗ್ರಾಹಕರು ರಜೆಯ ಬಗ್ಗೆ ಮುಂಚಿತವಾಗಿ ತಿಳಿದುಕೊಂಡು ವ್ಯವಹಾರದ ಯೋಜನೆ ರೂಪಿಸಿಕೊಳ್ಳುವುದು ಒಳ್ಳೆಯದು. ಸಾರ್ವಜನಿಕ ರಜೆಗಳು, ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರಗಳ ರಜೆಯೂ ಸೇರಿದಂತೆ ಬ್ಯಾಂಕ್​ಗಳ ನವೆಂಬರ್ ತಿಂಗಳ ರಜೆ ವಿವರ ಇಲ್ಲಿ ನೀಡಲಾಗಿದೆ.

ನವೆಂಬರ್ 1, ನವೆಂಬರ್ 8, ನವೆಂಬರ್ 11 ಹಾಗೂ ನವೆಂಬರ್ 23ರಂದು ಬ್ಯಾಂಕ್​ಗಳು ರಜೆ ಇರಲಿವೆ.

ನವೆಂಬರ್ 1: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬ್ಯಾಂಕ್​ಗಳು ಈ ದಿನ ರಜೆ. ಕರ್ನಾಟಕ ರಾಜ್ಯ ಉದಯಿಸಿದ ವರ್ಷಾಚರಣೆ ಪ್ರಯುಕ್ತ ಪ್ರತಿ ವರ್ಷ ಈ ದಿನ ಬ್ಯಾಂಕ್​ಗಳಿಗೆ ರಜೆ ನೀಡಲಾಗುತ್ತಿದೆ. ಬೆಂಹಗಳೂರು ಮತ್ತು ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಎಲ್ಲ ಬ್ಯಾಂಕ್​ಗಳು ಈ ದಿನ ರಜೆ ಇರಲಿವೆ.

ಇದನ್ನೂ ಓದಿ
Banking Frauds: ಆನ್​ಲೈನ್ ಮಾರುಕಟ್ಟೆಯಲ್ಲಿ ವ್ಯವಹರಿಸುವಾಗ ಹೀಗೆ ಮೋಸ ಹೋಗಬೇಡಿ
CCI Fine on Google: ಬಳಕೆದಾರರು, ಡೆವಲಪರ್​ಗಳಿಗೆ ಬದ್ಧರಾಗಿದ್ದೇವೆ; ಸಿಸಿಐ ದಂಡಕ್ಕೆ ಗೂಗಲ್ ಪ್ರತಿಕ್ರಿಯೆ
Tech Stocks: ಗೂಗಲ್, ಮೈಕ್ರೋಸಾಫ್ಟ್ ನಿರಾಶಾದಾಯಕ ಫಲಿತಾಂಶ; ಐಟಿ ಷೇರುಗಳಲ್ಲಿ ಕುಸಿತ
Pre-approved Personal Loan: ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್, ಅನಿವಾರ್ಯವಿದ್ದರಷ್ಟೇ ಪಡೆಯಿರಿ

ನವೆಂಬರ್ 8: ಗುರು ನಾನಕ್ ಜಯಂತಿ / ಕಾರ್ತಿಕ ಪೌರ್ಣಿಮೆ ಪ್ರಯುಕ್ತ ಐಜ್ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಕಾನ್ಪುರ, ಕೋಲ್ಕತ್ತ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್​ಪುರ, ರಾಂಚಿ, ಶಿಮ್ಲಾ ಹಾಗೂ ಶ್ರೀನಗರಗಳಲ್ಲಿ ನವೆಂಬರ್ 8ರಂದು ಬ್ಯಾಂಕ್​ಗಳು ರಜೆ ಇರಲಿವೆ. ಉಳಿದಂತೆ ದೇಶದ ಇತರ ಭಾಗಗಳಲ್ಲಿ ಕಾರ್ಯಾಚರಿಸಲಿವೆ. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ.

ಇದನ್ನೂ ಓದಿ: Bank strike: ಸೇವಾ ಭದ್ರತೆಗೆ ಆಗ್ರಹಿಸಿ ನವೆಂಬರ್ 19ಕ್ಕೆ ಬ್ಯಾಂಕ್​ ನೌಕರರ ಮುಷ್ಕರ

ನವೆಂಬರ್ 11: ಕನಕದಾಸ ಜಯಂತಿ/ ವಾಂಗಲಾ ಹಬ್ಬದ ನಿಮಿತ್ತ ಕರ್ನಾಟಕ ಮತ್ತು ಶಿಲ್ಲಾಂಗ್​ನಲ್ಲಿ ಬ್ಯಾಂಕ್​ಗಳು ನವೆಂಬರ್ 11ರಂದು ರಜೆ ಇರಲಿವೆ.

ನವೆಂಬರ್ 13: ಸೆಂಗ್ ಕಿಟ್ ಸೂಂಘ್ ಹಬ್ಬದ ಪ್ರಯುಕ್ತ ಶಿಲ್ಲಾಂಗ್​ನಲ್ಲಿ ನವೆಂಬರ್ 13ರಂದು ಬ್ಯಾಂಕ್​ಗಳಿಗೆ ರಜೆ ಇರಲಿದೆ. ಉಳಿದಂತೆ ದೇಶದ ಎಲ್ಲೆಡೆಯೂ ಕಾರ್ಯಾಚರಿಸಲಿವೆ.

ಆರ್​ಬಿಐ ಪ್ರಕಾರ, ಈ ಎಲ್ಲ ರಜೆಗಳನ್ನು ‘ನೆಗೊಷಿಯೇಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್’ ಪ್ರಕಾರ ನೀಡಲಾಗುತ್ತದೆ.

ಈ ರಜೆಗಳು ಮಾತ್ರವಲ್ಲದೆ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರಗಳಂದು ಬ್ಯಾಂಕ್​ಗಳು ಕಾರ್ಯಾಚರಿಸುವುದಿಲ್ಲ. ಅಂದರೆ, ನವೆಂಬರ್ 6, ನವೆಂಬರ್ 12, ನವೆಂಬರ್ 13, ನವೆಂಬರ್ 20, ನವೆಂಬರ್ 26 ಹಾಗೂ ನವೆಂಬರ್ 27ರಂದು ಬ್ಯಾಂಕ್​ಗಳು ರಜೆ ಇರಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ